ಸದಾ ತಾರುಣ್ಯವಂತರಾಗಿರಲು ... ಹತ್ತು ಸಲಹೆಗಳು

ಸದಾ ತಾರುಣ್ಯವಂತರಾಗಿರಲು ... ಹತ್ತು ಸಲಹೆಗಳು

೧. ನಿಮಗೆ ಅನವಶ್ಯಕವಾದ ಅಂಕೆ ಸಂಖ್ಯೆಗಳನ್ನು ಗಾಳಿಗೆ ತೂರಿಬಿಡಿ. ಅಂದರೆ ಅದರಲ್ಲಿ ನಿಮ್ಮ ವರ್ಷ, ತೂಕ ಮತ್ತು ಎತ್ತರ ಮುಂತಾದವುಗಳಿದ್ದರೂ ಕೂಡಾ. ಇದರ ಬಗ್ಗೆ ನಿಮ್ಮ ವೈದ್ಯರು ಚಿಂತಿಸಲಿ. ನೀವು ಅವರನ್ನು ಇದಕ್ಕಾಗಿಯೇ ಪೋಷಿಸುತ್ತಿದ್ದೀರಾ.

೨. ನಿಮ್ಮನ್ನು ಸದಾ ಖುಷಿಯಲ್ಲಿಡಬಯಸುವ, ನಿಮ್ಮ ಏಳಿಗೆಯನ್ನು ಬಯಸುವ ಸ್ನೇಹಿತರನ್ನೆ ಅಯ್ಕೆ ಮಾಡಿಟ್ಟುಕೊಂಡು ಅವರ ಜತೆಯಲ್ಲೇ ಇರಿ. ಬಾಕಿ ಎಲ್ಲರೂ ನಿಮ್ಮನ್ನು ಅನಾವಶ್ಯಕವಾಗಿ ಅವರ ಮಟ್ಟಕ್ಕೆಳೆದುಕೊಳ್ಳುವರು. ಕೆಲವರಂತೂ ನಿಮ್ಮನ್ನು ಕೆಳಕ್ಕೆ ಬೀಳಿಸಿ ತುಳಿಯುವರು. ಅಂತವರೆಲ್ಲರನ್ನೂ ಒದ್ದೋಡಿಸಿ.

೩. ಸದಾ ಏನನ್ನಾದರೂ ಕಲಿಯುತ್ತಿರಿ ಆಟ, ಕಂಪ್ಯೂಟರ್ , ತೋಟಗಾರಿಕೆ, ಕೈಗಾರಿಕೆ, ಸಂಗೀತ, ಇತ್ಯಾದಿ ಯಾವುದಾದರೂ ಚಿಂತೆಯಿಲ್ಲ, ನಿಮ್ಮ ಮಿದುಳನ್ನು ಬ್ಯೂಸಿಯಾಗಿಟ್ಟಿರಿ. ಮಿದುಳನ್ನು ಸೋಮಾರಿಯಾಗಿಟ್ಟುಕೊಳ್ಳಬೇಡಿ.ಗೊತ್ತಲ್ಲಾ.. ಆ ಗಾದೆ...ಕೆಲ್ಸವಿಲ್ಲದ ಆಚಾರಿ.. ಕೆಲಸವಿಲ್ಲದ ಮಿದುಳು..ಇತ್ಯಾದಿ ಇತ್ಯಾದಿ

೪. ಸಣ್ಣ ಅಥವಾ ಸರಳವಾದ ಖುಷಿಯನ್ನು ಅನುಭವಿಸಿ ಸತತವಾಗಿ, ಆನಂದಿಸುತ್ತಿರಿ .
೫. ಆಗಾಗ್ಗೆ, ಗಟ್ಟಿಯಾಗಿ ಸಾಧ್ಯವಾದಷ್ಟು ಹೊತ್ತೂ ಉದ್ದಕ್ಕೂ ನಗಾಡುತ್ತಿರಿ, ಕೆಲವೊಮ್ಮೆ ಬೇಕಿದ್ದಲ್ಲಿ ಉಸಿರು ಕಟ್ಟಿಸುವ ವರೆಗೂ..

೬. ದುಖಃ ಬೇಸರಗಳು ಸರ್ವೇ ಸಾಮಾನ್ಯ, ಜೀವನ ಅಂದರೆ ಅದೆಲ್ಲಾ ಬರಬೇಕಾದ್ದೇ, ನೀವು ಯಾವುದನ್ನೂ ಜಾಸ್ತಿ ಹಚ್ಚಿಕೊಳ್ಳದಿರಿ. ಜೀವನದುದ್ದಕ್ಕೂ ನಿಮ್ಮೊಡನೆ ಸದಾ ಇರುವವರೆಂದರೆ ನೀವೇ. ನೆನಪಿನಲ್ಲಿಡಿ. ಅದಕ್ಕೇ ಜೀವನದಲ್ಲಿ ಸದಾ ಉಸಿರಾಗಿ ಹಸಿರಾಗಿರಿ.

೭. ನಿಮ್ಮ ಅತ್ಯಂತ ಇಷ್ಟ ಪಡೋ ವಿಷಯಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯಿರಿ, ಯಾವುದೇ ಆಗಿರಲಿ ನಿಮ್ಮ ಸಂಸಾರ, ನಿಮ್ಮವರು, ಸಾಕು ಪ್ರಾಣಿಗಳು , ನೀವು ಇಷ್ಟ ಪಡೋ ಜಾಗ, ನಿಮ್ಮ ಹವ್ಯಾಸ ಯಾವುದೇ ಆದರೂ ತೊಂದರೆ ಇಲ್ಲ.

೮. ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸಿ, ನಿಗಾ ವಹಿಸಿ ಕಾಪಾಡಿಕೊಳ್ಳಿ, ರಕ್ಷಿಸಿಕೊಳ್ಳಿ, ಅವಶ್ಯವಿದ್ದಲ್ಲಿ ಬೇರೆಯವರ ಸಹಾಯ ಪಡೆದಾದರೂ ಸರಿಯೇ.

೯. ಎಲ್ಲರಿಗೂ ನಿಮ್ಮ ಪ್ರೀತಿಯನ್ನು ತೋರಿಸಿ, ವ್ಯಕ್ತ ಪಡಿಸಿ ಆವಕಾಶ ಸಿಕ್ಕಿದಾಗಲೆಲ್ಲಾ.  ನಮ್ಮ ಜೀವನ ನಾವು ಎಷ್ಟು ಉಸಿರಾಡುತ್ತೇವೆ ಎಂಬುದರಲ್ಲಿಲ್ಲ, ನಮ್ಮ ಉಸಿರಾಗಿರುವ ಘಟನೆಗಳೊಂದಿಗೆ ಇರುತ್ತದೆ.

೧೦.ಈ ವಿಷಯವನ್ನು ಬೇರೆಯವರಲ್ಲಿ ಹಂಚಿಕೊಳ್ಳದಿದ್ದರೂ ಚಿಂತೆ ಇಲ್ಲ, ಆದರೆ ನೀವು ಯಾವುದರ ಬಗ್ಗೆಯೂ ಚಿಂತೆ ಮಾಡಬೇಡಿ, ಇರುವಷ್ಟು ದಿನವೂ ಸಂಪೂರ್ಣವಾಗಿ ಆನಂದದಿಂದ ಜೀವಿಸುವಂತಾಗಲು ಎಲ್ಲರ ಬಗ್ಗೆಯೂ ಪ್ರಾರ್ಥಿಸಿ.

ಅಧಾರ

Comments

Submitted by swara kamath Sun, 01/20/2013 - 14:36

ಗೋಪಿನಾಥರೆ, ಬಹಳ ಒಳ್ಳೆಯ ಸಲಹೆಗಳು .ನಮ್ಮ ಸಂತೋಷವನ್ನು ನಾವೆ ಹುಡುಕಿಕೊಳ್ಳುವ ಮೂಲಕ ನಮ್ಮ ದೇಹದ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಕವಿ ನಾಗರಾಜರು ಸೂಚಿಸಿದ ಐದನೇ ವಿಚಾರದ ಕುರಿತು ನನ್ನ ಅಭಿಪ್ರಾಯವು ಅದೇ ಅನಿಸುತ್ತದೆ,ಕಾರಣ ಒಂದು ನಿರ್ಧಿಷ್ಟ ಸಮಯದ ಹೊರತು ಅಂದರೆ ಯೋಗಾಸನ ಮಾಡುವ ಸಮಯದ ಹೊರತು ಪಡಿಸಿ ಎಲ್ಲಾವೇಳೆಯಲ್ಲಿ ಗಟ್ಟಿಯಾಗಿ ನಗೆಯಾಡಿದರೆ ಇತರರು ನಮ್ಮ ನಡುವಳಿಕೆಯ ಕುರಿತು ತಪ್ಪಾಗಿ ಅರ್ಥೈಸಬಹುದೆಂದು ನನ್ನ ಅಭಿಪ್ರಾಯ.....ವಂದನೆಗಳು.........ರಮೇಶ್ ಕಾಮತ್.
Submitted by gopinatha Tue, 01/22/2013 - 20:52

In reply to by swara kamath

ನಿಜ ರಮೇಶರೇ ನೀವು ಹೇಳ್ತಿರೋದು ನಿಜ ಅದೂ ಒಂದು ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಧ್ವನಿ ಅಷ್ಟೇ ನಮಗೆ ಯಾವಾಗ ಅಗುತ್ತದೋ ಅಲ್ಲಲ್ಲಿ ಅಷ್ಟಷ್ಟು ಮಾಡಿದರೆ ಸಾಕು ಅನ್ನುವ ಭಾವ ಅಷ್ಟೇ
Submitted by partha1059 Sun, 01/20/2013 - 21:42

ನಾಗರಾಜರೆ/ಸ್ವರಕಾಮತ್ ರವರೆ ಗೋಪಿನಾಥರು ಅಶ್ಹ್ಟು ಹೇಳಿದ‌ ಮೇಲು ಬೇರೆಯವರ‌ ಬಗ್ಗೆ ಯೋಚಿಸುವುದು ಏಕೆ, ನಿಮಗೆ ನಗಬೇಕು ಅನ್ನಿಸಿದರೆ ನಕ್ಕರೆ ಆಯ್ತು ಬೇರೆಯವರು ನಮ್ಮನ್ನು ಎನು ಅ0ದುಕೊಳ್ತಾರೆ ಅನ್ನೊದು ಏಕೆ, ಅವರನ್ನು ದೂರ‌ ಓಡಿಸಿದರೆ ಆಯ್ತು, ನಮಗೆ ಬೇಕಾದ‌ ಹಾಗೆ ಇರೋದಪ್ಪ ಅನ್ನೊದು ಗೋಪಿನಾಥರ‌ ಮಾತು
Submitted by gopinatha Tue, 01/22/2013 - 20:54

In reply to by partha1059

ಪಾರ್ಥರೇ ನಿಮ್ಮೆಲ್ಲರ ಮೆಚ್ಚುಗೆ ಯಾ ಮಾತಿಗೆ ಧನ್ಯ ಇದನ್ನು ಅಷ್ಟಿಷ್ಟು ಅನುಸರಿಸುತ್ತಿದ್ದರೆ ಒಳ್ಳೆಯದೇ ಅಲ್ಲವಾ? ದೈನಂದಿನ ನಮ್ಮ ಧಾವಂತದ ಕಾರ್ಯಗಳಲ್ಲಿ ಸ್ವಲ್ಪವಾದರೂ ಸಮಾಧಾನ ಸಿಗುತ್ತದಲ್ಲ
Submitted by gopinatha Tue, 01/22/2013 - 20:50

In reply to by ಗಣೇಶ

ಗಣೇಶರೇ ನಮ್ಮೆಲ್ಲರ ದೃಷ್ಟಿಯಲ್ಲಿ ನೀವು ಸದಾ ತರುಣರೇ. ಯಾಕೆಂದರೆ ಇದಿರಿಗೆ ಕಂಡರಲ್ಲವೇ ವಯಸ್ಸು ಗೊತ್ತಾಗೋದು..? ಇಲ್ಲವಾದರೆ ಭಾವಚಿತ್ರದಲ್ಲಿದ್ದಂತೇ ಎಂದಿಗೂ ಅಷ್ಟೇ ಇರುತ್ತದಲ್ಲ..? ಏನಂತೀರಾ..??