ಸದಾ ತಾರುಣ್ಯವಂತರಾಗಿರಲು ... ಹತ್ತು ಸಲಹೆಗಳು
೧. ನಿಮಗೆ ಅನವಶ್ಯಕವಾದ ಅಂಕೆ ಸಂಖ್ಯೆಗಳನ್ನು ಗಾಳಿಗೆ ತೂರಿಬಿಡಿ. ಅಂದರೆ ಅದರಲ್ಲಿ ನಿಮ್ಮ ವರ್ಷ, ತೂಕ ಮತ್ತು ಎತ್ತರ ಮುಂತಾದವುಗಳಿದ್ದರೂ ಕೂಡಾ. ಇದರ ಬಗ್ಗೆ ನಿಮ್ಮ ವೈದ್ಯರು ಚಿಂತಿಸಲಿ. ನೀವು ಅವರನ್ನು ಇದಕ್ಕಾಗಿಯೇ ಪೋಷಿಸುತ್ತಿದ್ದೀರಾ.
೨. ನಿಮ್ಮನ್ನು ಸದಾ ಖುಷಿಯಲ್ಲಿಡಬಯಸುವ, ನಿಮ್ಮ ಏಳಿಗೆಯನ್ನು ಬಯಸುವ ಸ್ನೇಹಿತರನ್ನೆ ಅಯ್ಕೆ ಮಾಡಿಟ್ಟುಕೊಂಡು ಅವರ ಜತೆಯಲ್ಲೇ ಇರಿ. ಬಾಕಿ ಎಲ್ಲರೂ ನಿಮ್ಮನ್ನು ಅನಾವಶ್ಯಕವಾಗಿ ಅವರ ಮಟ್ಟಕ್ಕೆಳೆದುಕೊಳ್ಳುವರು. ಕೆಲವರಂತೂ ನಿಮ್ಮನ್ನು ಕೆಳಕ್ಕೆ ಬೀಳಿಸಿ ತುಳಿಯುವರು. ಅಂತವರೆಲ್ಲರನ್ನೂ ಒದ್ದೋಡಿಸಿ.
೩. ಸದಾ ಏನನ್ನಾದರೂ ಕಲಿಯುತ್ತಿರಿ ಆಟ, ಕಂಪ್ಯೂಟರ್ , ತೋಟಗಾರಿಕೆ, ಕೈಗಾರಿಕೆ, ಸಂಗೀತ, ಇತ್ಯಾದಿ ಯಾವುದಾದರೂ ಚಿಂತೆಯಿಲ್ಲ, ನಿಮ್ಮ ಮಿದುಳನ್ನು ಬ್ಯೂಸಿಯಾಗಿಟ್ಟಿರಿ. ಮಿದುಳನ್ನು ಸೋಮಾರಿಯಾಗಿಟ್ಟುಕೊಳ್ಳಬೇಡಿ.ಗೊತ್ತಲ್ಲಾ.. ಆ ಗಾದೆ...ಕೆಲ್ಸವಿಲ್ಲದ ಆಚಾರಿ.. ಕೆಲಸವಿಲ್ಲದ ಮಿದುಳು..ಇತ್ಯಾದಿ ಇತ್ಯಾದಿ
೪. ಸಣ್ಣ ಅಥವಾ ಸರಳವಾದ ಖುಷಿಯನ್ನು ಅನುಭವಿಸಿ ಸತತವಾಗಿ, ಆನಂದಿಸುತ್ತಿರಿ .
೫. ಆಗಾಗ್ಗೆ, ಗಟ್ಟಿಯಾಗಿ ಸಾಧ್ಯವಾದಷ್ಟು ಹೊತ್ತೂ ಉದ್ದಕ್ಕೂ ನಗಾಡುತ್ತಿರಿ, ಕೆಲವೊಮ್ಮೆ ಬೇಕಿದ್ದಲ್ಲಿ ಉಸಿರು ಕಟ್ಟಿಸುವ ವರೆಗೂ..
೬. ದುಖಃ ಬೇಸರಗಳು ಸರ್ವೇ ಸಾಮಾನ್ಯ, ಜೀವನ ಅಂದರೆ ಅದೆಲ್ಲಾ ಬರಬೇಕಾದ್ದೇ, ನೀವು ಯಾವುದನ್ನೂ ಜಾಸ್ತಿ ಹಚ್ಚಿಕೊಳ್ಳದಿರಿ. ಜೀವನದುದ್ದಕ್ಕೂ ನಿಮ್ಮೊಡನೆ ಸದಾ ಇರುವವರೆಂದರೆ ನೀವೇ. ನೆನಪಿನಲ್ಲಿಡಿ. ಅದಕ್ಕೇ ಜೀವನದಲ್ಲಿ ಸದಾ ಉಸಿರಾಗಿ ಹಸಿರಾಗಿರಿ.
೭. ನಿಮ್ಮ ಅತ್ಯಂತ ಇಷ್ಟ ಪಡೋ ವಿಷಯಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯಿರಿ, ಯಾವುದೇ ಆಗಿರಲಿ ನಿಮ್ಮ ಸಂಸಾರ, ನಿಮ್ಮವರು, ಸಾಕು ಪ್ರಾಣಿಗಳು , ನೀವು ಇಷ್ಟ ಪಡೋ ಜಾಗ, ನಿಮ್ಮ ಹವ್ಯಾಸ ಯಾವುದೇ ಆದರೂ ತೊಂದರೆ ಇಲ್ಲ.
೮. ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸಿ, ನಿಗಾ ವಹಿಸಿ ಕಾಪಾಡಿಕೊಳ್ಳಿ, ರಕ್ಷಿಸಿಕೊಳ್ಳಿ, ಅವಶ್ಯವಿದ್ದಲ್ಲಿ ಬೇರೆಯವರ ಸಹಾಯ ಪಡೆದಾದರೂ ಸರಿಯೇ.
೯. ಎಲ್ಲರಿಗೂ ನಿಮ್ಮ ಪ್ರೀತಿಯನ್ನು ತೋರಿಸಿ, ವ್ಯಕ್ತ ಪಡಿಸಿ ಆವಕಾಶ ಸಿಕ್ಕಿದಾಗಲೆಲ್ಲಾ. ನಮ್ಮ ಜೀವನ ನಾವು ಎಷ್ಟು ಉಸಿರಾಡುತ್ತೇವೆ ಎಂಬುದರಲ್ಲಿಲ್ಲ, ನಮ್ಮ ಉಸಿರಾಗಿರುವ ಘಟನೆಗಳೊಂದಿಗೆ ಇರುತ್ತದೆ.
೧೦.ಈ ವಿಷಯವನ್ನು ಬೇರೆಯವರಲ್ಲಿ ಹಂಚಿಕೊಳ್ಳದಿದ್ದರೂ ಚಿಂತೆ ಇಲ್ಲ, ಆದರೆ ನೀವು ಯಾವುದರ ಬಗ್ಗೆಯೂ ಚಿಂತೆ ಮಾಡಬೇಡಿ, ಇರುವಷ್ಟು ದಿನವೂ ಸಂಪೂರ್ಣವಾಗಿ ಆನಂದದಿಂದ ಜೀವಿಸುವಂತಾಗಲು ಎಲ್ಲರ ಬಗ್ಗೆಯೂ ಪ್ರಾರ್ಥಿಸಿ.
ಅಧಾರ
Comments
ಆಂಗ್ಲದ ನುಡಿಗಳು ನೆನಪಾದವು -
ಚೆನ್ನಾಗಿದೆ. 5ನೆಯ ವಿಷಯದ ಬಗ್ಗೆ
ಗೋಪಿನಾಥರೆ, ಬಹಳ ಒಳ್ಳೆಯ ಸಲಹೆಗಳು
In reply to ಗೋಪಿನಾಥರೆ, ಬಹಳ ಒಳ್ಳೆಯ ಸಲಹೆಗಳು by swara kamath
ನಿಜ ರಮೇಶರೇ
ನಾಗರಾಜರೆ/ಸ್ವರಕಾಮತ್ ರವರೆ
In reply to ನಾಗರಾಜರೆ/ಸ್ವರಕಾಮತ್ ರವರೆ by partha1059
ಪಾರ್ಥರೇ
೧೦/೧೦ ಎಲ್ಲಾ ಸೂಪರ್. ನಾನು ಮುದುಕ
In reply to ೧೦/೧೦ ಎಲ್ಲಾ ಸೂಪರ್. ನಾನು ಮುದುಕ by ಗಣೇಶ
ಗಣೇಶರೇ ನಮ್ಮೆಲ್ಲರ ದೃಷ್ಟಿಯಲ್ಲಿ