ಸದ್ಭಕ್ತಿಯ ಅರಿವು
ಕವನ
'ಬಾಡ'ದಲಿ ಜನಿಸಿದ ದಾಸ ಶ್ರೇಷ್ಠ
ಬೀರಪ್ಪ ಬಚ್ಚಮ್ಮರ ಮುದ್ದಿನ ಸುಪುತ್ರ|
ಕಾಗಿನೆಲೆ ಆದಿಕೇಶವನ ಪರಮ ಭಕ್ತ
ಭೋಗ ಭಾಗ್ಯಗಳ ತ್ಯಜಿಸಿದ ವಿರಕ್ತ||
ಕರ್ನಾಟಕ ಸಂಗೀತಕೆ ಕೊಡುಗೆ ನೀಡಿದೆ
ದಾಸ ಸಾಹಿತ್ಯದಿ ಕೀರ್ತನೆಗಳ ರಚಿಸಿದೆ|
ಜ್ಞಾನ ಭಕ್ತಿಯ ಸಾಗರವ ಹರಿಸಿದೆ
ದೊರೆತ ಹೊನ್ನನು ಸಮಾಜಕ್ಕೆ ವಿನಿಯೋಗಿಸಿದೆ||
ಪರಮಾತ್ಮ ಎಲ್ಲೆಡೆ ಇರುವನೆಂದು ಸಾರಿದೆ
ದಾಸಮಂಟಪದಿ ಬೋಧನೆಯ ನೀಡಿದೆ|
ಜಾತಿ ಮತ ಕುಲ ಭೇದವೆಣಿಸದೆ
ನಿಸ್ವಾರ್ಥ ಕಪಟವಿಲ್ಲದ ಸೇವೆ ಗೈದೆ||
ತನುಮನದಲಿ ಸ್ವಚ್ಛತೆಯ ಬಿಂಬಿಸಿದೆ
ಸಂಪೂರ್ಣ ದೇವಗೆ ಶರಣಾಗಿ ಎಂದೆ|
ಉಡುಪಿಲಿ ಕನಕನ ಕಿಂಡಿಗೆ ಕಾರಣನಾದೆ
ಸದ್ಭಕ್ತಿಯ ಅರಿವನ್ನು ಜಗದಗಲ ಪಸರಿಸಿದೆ||
ವಿವೇಕ ಎಚ್ಚರಿಕೆ ಸತ್ಯ ನಿಸ್ವಾರ್ಥ
ಬಾಳ ದಾರಿಯ ಅಡಿಪಾಯವೆಂದೆ|
ಹರಿಭಕ್ತಿ ಸಾರ ಮೋಹನತರಂಗಿಣಿ
ನಳಚರಿತೆ ರಾಮಧಾನ್ಯ ಗ್ರಂಥಗಳ ನೀಡಿದೆ||
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್