ಸನಿಹಕೆ ಬರಬಹುದು...!
ಕವನ
ಹುಣ್ಣಿಮೆ ಇರುಳಿನ ತಣ್ಣನೆ ಗಾಳಿಯ
ಬಣ್ಣಿಸಲಾಗದು ನೋವಿನೊಳು
ಸಣ್ಣನೆ ನಡುವಿನ ಕಣ್ಮಣಿ ಮಡದಿಯ
ಕಣ್ಣಲಿ ಕಂಬನಿ ತುಂಬಿರಲು
ಗಾಳಿಯ ತಂಪಿನ ದಾಳಿಗೆ ಸಿಲುಕಿದೆ
ತಾಳೆನು ವೇದನೆ ವಿರಹದಲಿ
ಬಾಳಿನ ಬಂಡಿಯ ಗಾಲಿಗಳೆರಡಕೆ
ಬೇಲಿಯು ಬಂದಿತೆ ನಡುವಿನಲಿ
ಒಂದದು ಚಕ್ರವು ಮುಂದಕೆ ಚಲಿಸಿರೆ
ಹಿಂದಕೆ ಸರಿದರೆ ಮತ್ತೊಂದು
ಚಂದದ ಬದುಕಿಗೆ ಕುಂದನು ತರುವುದು
ಹೊಂದುತ ಬಾಳಲು ಗೆಲುವಿಹುದು
ಮುನಿದಿಹ ಮಡದಿಯ ಮನವನು ಗೆಲ್ಲಲು
ತನುಮನ ಚಿಂತನೆ ನಡೆಸಿಹುದು
ಜನುಮದ ಜೋಡಿಯ ಮನವಿಯ ಮನ್ನಿಸೆ
ಸನಿಹಕೆ ಒಲವಲಿ ಬರಬಹುದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ವಾಟ್ಸಾಪ್
ಚಿತ್ರ್
