ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ

ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ

ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
 

ಅಭ್ಯಾಸದ ಮಾರ್ಗದರ್ಶಕ ಶ್ರೀ ರಾಜಶೇಖರ ಮಾಲೂರರ ಮನೆ "ಪ್ರಥಾ" ದಲ್ಲಿ, ಒಂದು ವರುಷದ ಹಿಂದೆ ಶುರುವಾಗಿದ್ದಾಗ ಕೂಡಾ ಇದೇ ಸುಂದರ ಮನೆಯಿಂದ ಆರಂಭವಾಗಿತ್ತು.

ಈ ಸಾರಿಯ ಅಭ್ಯಾಸಕ್ಕೆ ಗುರುಗಳು ಆರಿಸಿಕೊಂಡದ್ದು ಶಿವ ಕೋಟ್ಯಾಚಾರ್ಯರ ವಡ್ಡಾರಾಧನೆ



ಹಳೆಯ ಕಾವ್ಯ ಸಾಹಿತ್ಯದ ಪರಂಪರೆಯಲ್ಲೇ ಮೊದಲಿನದೆನ್ನಬಹುದಾದ ಈ ರಚನೆ ಗದ್ಯ ರೂಪದಲ್ಲಿದೆ.

ಕನ್ನಡ ಭಾಷೆಯ ಮೊದಲ ಗದ್ಯಗ್ರಂಥವೆಂದು ಹೆಸರು ಪಡೆದ "ವಡ್ಡಾರಾದನೆ"ಯನ್ನು ಬರೆದವನಾರೆಂಬ ಸಂಗತಿಯು ಬಹುಕಾಲ ವಿದ್ವತ್ ವಿವಾದಕ್ಕೆ ಒಳಗಾಗಿ ಈಗ ಅದು ಶಿವಕೋಟ್ಯಾಚಾರ್ಯ ವಿರಚಿತವೆಂದು ಸಾಧಾರಣವಾಗಿ ನಿರ್ಣಯಿತವಾಗಿದೆ. ಹಾಗಿದ್ದರೂ ಕನ್ನಡ ಪ್ರಾಕೃತ ಸಂಸ್ಕೃತ ಸಾಹಿತ್ಯದಲ್ಲಿ ಹಲವಾರು ಕೋಟ್ಯಾಚಾರ್ಯರಿದ್ದು ಇವರಲ್ಲಿ ಈ ಕರ್ತೃ ಯಾರೆಂಬುದು ಅಸ್ಪಷ್ಟವಾಗಿದೆ. ಈ  ಶಿವಕೋಟ್ಯಾಚಾರ್ಯ ಕಾಷಿಯ ಯಾ ಕಂಚಿಯ ರಾಜನೇ ಅಥವಾ ನಮ್ಮದೇ ಬಳ್ಳಾರಿ ಜಿಲ್ಲೆಯಲ್ಲಿ ಹಿಂದೆ ಕೂಗಳಿಎಂದು ಕರೆಯಲಾಗುತ್ತಿದ್ದ ಪ್ರಾಂತ್ಯಕ್ಕೆ ಸೇರಿದವನೇ ಎಂಬುದು ಕೂಡಾ ನಿಖರವಾಗಿ ನಿರ್ಧಾರಿತವಾಗಿಲ್ಲ. ಈ ಕೃತಿಯನ್ನಲ್ಲದೇಈತ ರತ್ನಮಾಲಾ ಎಂಬ ಸಂಸ್ಕೃತ ಶಾಸ್ತ್ರಗ್ರಂಥವನ್ನೂಮತ್ತು ತಥಾರ್ಥಸೂತ್ರವೆಂಬ ಗ್ರಂಥಕ್ಕೆ ಸಂಬಂಧಿಸಿದ ಪಠ್ಯವೊಂದನ್ನೂ ರಚಿಸಿದ್ದಾನೆಂದು ತಿಳಿಯಲಾಗಿದೆ.ಕ್ರಿ ಶ ೯೨೦ ರ ಸುಮಾರಿಗೆ ಕನ್ನಡದ ಇನ್ನೊಂದು ಮಹತ್ವದ ಆದಿಕ್ರತಿ "ಕವಿರಾಜ ಮಾರ್ಗ"ದ ಕಾಲದಲ್ಲಿಯೇ ಜೈನ ಸಾಧಕರ ಆರಾಧನಾ ಗ್ರಂಥವಾಗಿ ಈ ವಡ್ಡಾರಾಧನೆಯೂ ರಚಿತವಾಗಿದೆಯೆಂದು ವಿದ್ವಾಂಸರ ಅಭಿಮತ.

ಕನ್ನಡದ ಮೊತ್ತ ಮೊದಲ ಕಥಾ ಸಂಗ್ರಹವಿದು, ಇದರಲ್ಲಿ ೧೯ ಕಥೆಗಳಿವೆ.

ಮಹಾಕಾವ್ಯ ಪರಂಪರೆಯ ನಡುವೆ ಗದ್ಯ ಕಥನ ಸಂಪ್ರದಾಯವನ್ನು ಹುಟ್ಟುಹಾಕಿದವ.ಜೈನ ಭವಾವಳಿಗಳಂತೆ ಇಲ್ಲಿ ಕಥೆಯೊಳಗೊಂದು ಕಥೆ ಹುಟ್ಟುತ್ತಿರುವುದು.ಜೈನಧರ್ಮ ಪರಿಭಾಷೆಯನ್ನು ಕಥೆಗಳಲ್ಲಿ ಹುಟ್ಟುಹಾಕಿಸಿಯೇ ಇದನ್ನು ವ್ರತಕಥೆಯಾಗಿಸಿದೆ. ಮುಖ್ಯ ಕಥೆ ಧರ್ಮದವ್ಯಾಖ್ಯಾನವಾದರೆ ಉಪಕಥೆ ಲೌಕಿಕವನ್ನು ಕುರಿತು ಹೇಳುತ್ತಿದೆ.ಪದ್ಯದ ಎಲ್ಲಾ ಪ್ರಾಸ ಲಯ ಛಂದಸ್ಸು,ಗಳನ್ನೂ ಉಪಯೋಗಿಸಿ ಬರೆದ ಇದರಲ್ಲಿ ಭಾವಾನುಲಯ ಕಂಡುಕೊಳ್ಳಬಹುದಾಗಿದೆ. ವರ್ತಮಾನದ ದಾರುಣತೆಯನ್ನು ಕಾಲಕಾಲಕ್ಕೂ ತಿಳಿಹೇಳುತ್ತಿರುವ ಅಭಿವ್ಯಕ್ತ ರೂಪ.

ಗುರುಗಳಿಗೆ ಅದ್ಭುತವಾಗಿ ಕಂಡುಬಂದ ಕಥೆಗಳು ಸುಕುಮಾರ ಸ್ವಾಮಿಯ ಕಥೆ, ಕಾರ್ತಿಕ ಋಷಿಯ ಕಥೆ, ಮತ್ತು ವಿದ್ಯುತ್ ಚೋರನ ಕಥೆ.
ಪೂರ್ಣವಿಕಸನ( ವಿಕಾಸ ಪಥ - ಮೋಕ್ಷ)ದತ್ತ ಸಾಗುತ್ತಿರುವ ಆಸನ್ನ ಭವ್ಯಜೀವಿಯ ದಾರಿಯಲ್ಲಿ ಸಿಗುತ್ತಿರುವ ಅಡಚಣೆಗಳನ್ನು( ಇವು ಯಾವುದೇ ರೂಪದಲ್ಲಿರ ಬಹುದು, ದೇವತೆ ಮನುಷ್ಯ, ಪ್ರಾಣಿ, ವಸ್ತು ಮುಂತಾದವರೇ- ಪರೀಶಹರು)ನಿವಾರಿಸಿ ಕೊಂಡು ಸಾಗುತ್ತಿರುವುದೇ ಭವಾವಳಿ. ಈ ಕಥೆಗಳು ಬರಿ  ಮನರಂಜನೆಗೋ ಅಥವಾ ಕಲಾಭಿವ್ಯಕ್ತತೆಗೋ ಬರೆದ ಕಥೆಗಳಲ್ಲ. ಬದಲಾಗಿ ಧರ್ಮಾವಲಂಬನಾ ಮಾರ್ಗದ್ದು. ತೀರ್ಥಂಕರನಾಗುವಾತನಿಗೆ ಭವಾವಳಿಯ ಕೊನೆಗೆ ಲಭ್ಯವಾಗುವುದು- ಸಿದ್ಧ ಸ್ಥಳ ( ಸಕಲ  ಭೋಗಗಳೂ ಸಿಗುವ ಸ್ಥಳ- ಸ್ವರ್ಗ) ಸಿದ್ಧ ಶಿಲೆ ( ವಿಶಾಲವಾದ ತಪಸ್ಸು ಮಾಡುವ ಜಾಗ)

ಜನಸಾಮಾನ್ಯರ ವ್ರತಾಚರಣೆಯ ಈ ಕಥೆಗಳು ಕಡು ಸೌಂದರ್ಯ ಸಾಹಿತ್ಯ ಪ್ರಾಕಾರದ ಘಟನಾವಳಿಯ ಪ್ರಾಧಾನ್ಯವಾದ ಗದ್ಯ ರೂಪದಲ್ಲಿದೆ.

ಈ ಕುರಿತ ಕೃತಿ ಸಂಗ್ರಹಗಳು
ಶಿವಕೋಟಾಚಾರ್ಯ ವಿರಚಿತ ವಡ್ಡಾರಾಧನೆ- ಸಂ: ಡಿ ಎಲ್ ನರಸಿಂಹಾಚಾರ್(೧೯೪೯)
ಭ್ರಾಜಿಷ್ಣು ವಿರಚಿತ ವಡ್ಡಾರಾಧನೆ- ಸಂ : ಹಂ. ಪ ನಾಗರಾಜಯ್ಯ(೧೯೯೩)
ವಡ್ಡಾರಾಧನೆಯ ಕಥಾಲೋಕ- ಆರ್ ಎಲ್ ಅನಂತರಾಮಯ್ಯ(೧೯೭೧)
ವಡ್ಡಾರಾಧನೆಯ ಕಥೆಗಳು- ಕೆ ಎಲ್ ನಾಗೇಂದ್ರಪ್ಪ



೧. ಸಾಹಿತ್ಯದಲ್ಲೂ ಮತಾಂತರ:  http://www.youtube.com/watch?v=SAd1fss499M
೨. ಲಕ್ಷಣಗಳು :                   http://www.youtube.com/watch?v=lTFJEuVF0YQ
೩. ಅದ್ಭುತವಾದ ಕಥೆಗಳು:       http://www.youtube.com/watch?v=u-pf0fnMOEY
೪.ಸುಕುಮಾರ ಸ್ವಾಮಿಯ ಕಥೆ:  http://www.youtube.com/watch?v=VFr8A5gMSYE
೫. ಕಾರ್ಥಿಕ ಋಷಿಯ ಕಥೆ:       http://www.youtube.com/watch?v=Og7XI6H90so
೬. ಮನೋ ಧರ್ಮದ ಕಥಾವಳಿ:  http://www.youtube.com/watch?v=m8mL4p81uss
೭.   http://www.youtube.com/watch?v=YxbCC1ZpmAU
೮.   http://www.youtube.com/watch?v=xzgN91zQ90Y
೯.   http://www.youtube.com/watch?v=XTJqcDrAJfc
೧೦.  http://www.youtube.com/watch?v=eVN_eXsrtTU
೧೧.  http://www.youtube.com/watch?v=BtlweZjoi3E
೧೨.  http://www.youtube.com/watch?v=qLxh1sOY1FU
೧೩.  http://www.youtube.com/watch?v=6YOJb-oYMjQ
೧೪. http://www.youtube.com/watch?v=kHTZG6fDWvo