ಸನ್ಮಾನ್ಯ ಡಾ ಎಚ್ ಎಸ್ ವೀಯವರ ಅಭ್ಯಾಸ ೧೫

ಸನ್ಮಾನ್ಯ ಡಾ ಎಚ್ ಎಸ್ ವೀಯವರ ಅಭ್ಯಾಸ ೧೫

ಸನ್ಮಾನ್ಯ ಡಾ ಎಚ್ ಎಸ್ ವೀಯವರ ಅಭ್ಯಾಸ ೧೫
ಭಕ್ತಿ ಭಂಡಾರಿ  ಬಸವಣ್ಣನವರ ವಚನಗಳು
ಈ ಸಾರಿಯ ಗುರುಗಳ ಅಭ್ಯಾಸದ ವಿಷಯ ಬಸವಣ್ಣನವರ ವಚನಗಳು
ಶೀಯುತ ಅಶ್ವತ್ಥ್ ಅವರ ಮನೆಯಲ್ಲಿ  ಬೆಳಗಿನ ತಿಂಡಿಯಂತೂ ಎಲ್ಲರನ್ನೂ ಮತ್ತೊಮ್ಮೆ ಈ ಅಭ್ಯಾಸಗಳ ಅತ್ಯಂತ ನೆಚ್ಚಿನ ಮೆಚ್ಚಿನ ಒಳ್ಳೆಯ ಅಭಿರುಚಿಯಲ್ಲೊಂದಾದ ಪ್ರಸನ್ನತೆಯ ಮುದಕೊಟ್ಟಿತ್ತು. ಬಸವಣ್ಣನವರ ವಚನಗಳ ಪರಿಯೋ ಏನೋ ಅತೀ ವಿಶೇಷವಾದ  ಬೆಳಗಿನ  ತಿಂಡಿಯಾಗಿತ್ತದು,  ಹಾಲು ಬಾಯಿ (ನಮ್ಮ ಕಡೆ ಇದಕ್ಕೆ"ಮಣ್ಣಿ" ಎನ್ನುತ್ತಾರೆ ಅಕ್ಕಿಯಿಂದ ಮಾಡುವ ವಿಶೇಷ ತಿಂಡಿಯಿದು) ಕಡುಬು, ಶ್ಯಾಮಿಗೆ ಉಪ್ಪಿಟ್ಟು, ಮೊಸರು, ಬಜ್ಜಿ, ಗೊಜ್ಜು ಇತ್ಯಾದಿಯವು ಅಭ್ಯಾಸಿಗಳೆಲ್ಲರ  ಹೊಟ್ಟೆಯನ್ನು ದೊಡ್ಡದೇ ಮಾಡಿತ್ತೆಂದರೆ ಅತಿಶಯೋಕ್ತಿಯೇನಾಗಲಾರದು , ಜತೆಗೆ ಅಶ್ವತ್ಥರ ಮನೆಯವರೆಲ್ಲರ ಕಾಳಜಿಯುಕ್ತ ಉಪಚಾರವೂ ಇದಕ್ಕೆ ಇಂಬು ಕೊಟ್ಟಿತ್ತೆನ್ನಿ. 

ಜೀವನ ದರ್ಶನ
ಭಾರತವು ವಿಶಾಲವಾದ ಧಾರ್ಮಿಕ ತತ್ವಗಳಿಗೆ ಸುಪ್ರಸಿದ್ಧವಾಗಿರುವಂತೆ ಸಂಕುಚಿತ ಭಾವನೆಗಳಿಗೂ ಕುಪ್ರಸಿದ್ಧವಾದುದು. ದ್ರಷ್ಟಾರರ ಆತ್ಮವಿಶ್ವಾಸದ ಬ್ರಹ್ಮವಾದ ಸಾಮಾಜಿಕ ವ್ಯವಸ್ಥೆಯ ವರ್ಣಾಷ್ರಮ ವಿಭಾಗ, ಸಮರ್ಪಣರೂಪದ ಯಜ್ಞ-ಯಾಗ ಮತ್ತಿತರ ಸಂಕೇತ ಸದಾಚಾರಗಳು- ಕರ್ಮಠರ ವಿಢಿವಾದಿಗಳ ಮುಖ್ಯವಾಗಿ ಸ್ವಾರ್ಥಿಗಳ ರಾದ್ಧಾಂತದಿಂದ ಅಹಂಕಾರದಲ್ಲಿ ವಿಷಮಿಸಿ, ಅಸ್ತವ್ಯಸ್ತದಲ್ಲಿ ತಳಮಳಿಸಿ ಅಸ್ಪೃಶ್ಯತೆಯಲ್ಲಿ ನಾರುತ್ತ ಅರ್ಥ ರಹಿತ ವಿಧಿ ವಿಶೇಷಗಳಲ್ಲಿ ಸಾಂಕ್ರಾಮಿಕವಾಯಿತು.ಭಾರತೀಯ ಶುದ್ಧ ಧಾರ್ಮಿಕ ವಾತಾವರಣವು ಹೀಗೆ ಕಲುಷಿತವಾದುದೊಂದು ವಿಧಿ ದುರ್ವಿಪಾಕ. ಭಾರತೀಯ ಧಾರ್ಮಿಕ ಚರಿತ್ರೆಯಲ್ಲಿ ವಿಶಾಲ ನಿರ್ಮಲ ತತ್ವ ಪ್ರತಿಪಾದನೆ ಮಾಡಿದ ಮಾಹರ್ಷಿಗಳ ಕಾರ್ಯ ಚಟುವಟಿಕೆಗಳು ಒಂದು ಮಹದ್ಘಟನೆಯಾದರೆ, ಅದಕ್ಕಿಂತ ಮಹತ್ತರ ಘಟನೆಯಾಗಿದೆ ಮಾನವ ಕುಲವಂಚಕರಿಂದ ಆ ತತ್ವಕ್ಕೆ ಆರೋಪಿತವಾದ ಕಾಳಿಕೆಯನ್ನು ಕಳೆದ ಸಾಧು ಸಂತರ ಶರಣರ ಮತ್ತು ದಾಸರ ಸುಧಾರಕ ಕಾರ್ಯ ಚಟುವಟಿಕೆ. ಈ ಕ್ಷೇತ್ರದಲ್ಲಿ ಜೈನರು ಬೌದ್ಧರು ವೈದಿಕ ಆಚಾರ್ಯರು ಉತ್ತರ ದಕ್ಷಿಣ ಶೈವ ವೈಷ್ಣವ ಪಂಥಗಳೂ ವಿಶೇಷವಾಗಿ ಶ್ರಮಿಸಿವೆ.ಇವರೆಲ್ಲರಿಗಿಂತ ಕನ್ನಡ ಜನತೆಗಾಗಿ ಕನ್ನಡದಲ್ಲಿ ಶಿವ ಶರಣರು ನಿರ್ವಹಿಸಿದ ಜವಾಬ್ದಾರಿಯು ವಿಸ್ಮಯಕರವಾದುದು.
ಶರಣ ಪಂಥದಲ್ಲಿ  ಪ್ರಮುಖರೆಂದರೆ ಬಸವಣ್ಣನವರು. ಅವರ ಜೀವನವೊಂದು ಅಮರ ಜ್ಯೋತಿ. ಅದರ ದಿವ್ಯ ಪ್ರಭೆಯಲ್ಲಿ ಹಲವಾರು ಶತಮಾನಗಳ ಕೋಟ್ಯಂತರ ಮುಮುಕ್ಷುಗಳು ಸನ್ಮಾರ್ಗವನ್ನು ಕಂಡು ಕೊಂಡು ಕ್ರತಾರ್ಥರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಶೇತ್ರದಲ್ಲಂತೂ ಆ ಜೀವಜ್ಯೋತಿಯ ಪ್ರಭಾವ ಅಷ್ಟಿಷ್ಟಲ್ಲ  . ನಮ್ಮ ಸಾಹಿತ್ಯವು ಛಂದಸ್ಸಿನ ದೃಷ್ಟಿಯಿಂದೈಂದು ಕಾವ್ಯ ಪ್ರಭೇಢಗಳನ್ನು ತನ್ನ ವೈಶಿಷ್ಟ್ಯವೆಂದು ಹೇಳಿ ಹೆಮ್ಮೆ ಪಡುತ್ತಿದೆಯೋ ಅವುಗಳಲ್ಲಿ ಹಲವಕ್ಕೆ ಮೂಲಪ್ರೇರಕರೂ ಕೆಲವಕ್ಕೆ ಪ್ರಬಲ ಪೋಷಕರೂ ಬಸವಣ್ಣನವರೇ ಆಗಿದ್ದಾರೆ. ಮಾನವ ನೀತಿಷಾಸ್ತ್ರವು ಇಂದು ಯಾವ ಮೂಲತತ್ವಗಳನ್ನು ವಿಶ್ವ ಶಾಂತಿ ಸ್ಥಾಪನೆಗೆ ಅನಿವಾರ್ಯವೆಂದು ಹೇಳುತ್ತಿದೆಯೋ ಧರ್ಮ ಶಾಸ್ತ್ರವು ಯಾವ ಯಾವ ಭಾವನೆಗಳನ್ನು ವಿಶ್ವ ಧರ್ಮದ ಮುಖ್ಯ ಲಕ್ಷಣಗಳೆಂದು ಹೇಳುತ್ತಿದೆಯೋ ಅವನ್ನೆಲ್ಲ ಬಸವಣನವರು ಋಷಿಯಾಗಿ, ಸುಧಾರಕರಾಗಿ, ಕವಿಯಾಗಿ ಬಾಳಿ ಪ್ರಚಾರ ಮಾಡಿ ಬರೆದು ಪೂಜ್ಯರಾಗಿದ್ದಾರೆ. 

ನರವಿಂದ್ಯಗಳಲ್ಲಿ ಸುಗಮ ಪಥಗಳನ್ನು ತಮ್ಮ ಪದ್ಧತಿಯಿಂದ ಮೂಡಿಸಿ ಮಾನವರ ವ್ಯವಹಾರಗಳನ್ನು ಸುಗಮಗೊಳಿಸಿದವರೇ ಆದ್ಯರು ವೇದ್ಯರು, ಅಂಥವರಲ್ಲಿ ಬಸವಣ್ನನವರು ಗಣ್ಯರು, ಹನ್ನೆರಡನೆಯ ಶತಮಾನಕ್ಕೆ ಅಗ್ರಗಣ್ಯರು. ನಮ್ಮ ಶತಮಾನಕ್ಕೂ ಬರಲಿರುವ ಹಲವು ಕಾಲಕ್ಕೂ ಮಾನ್ಯರು. ಊರುಕೇರಿಗಳಲ್ಲಿ ಹೊಲ ಕೆರೆ ಕುಲುಮೆಗಳಲ್ಲಿ ನಮಂತೆಯೇ ನಿತ್ಯ ಜೀವನದಲಿ ನಡೆದು ನಡೆದಂತೆ ನುಡಿದು ನುಡಿದಂತೆ ನಡೆದು ನಡೆನುಡಿಗಳ ನಡುವಣ ನಂಟನ್ನು ಹಿಗ್ಗಿಸಿ ನೆರೆಹೊರೆಯವರಂತೆ ಕಾಣುವ  ಶಿವಶರಣರೂ ಅವರ ತಿಳಿಗನ್ನಡದ ಸಲ್ಲಾಪ ಸುಭಾಷಿತಗಳೂ ಸರವಷ್ಟೇ ಅಲ್ಲ ನೂತನ ಯುಗ ಪರಿಸರದಲ್ಲೂ ನಮಗೆ ಮಾರ್ಗ ದರ್ಶಕ.
ಬಸವಣ್ಣನವರ ವಚನಗಳಲ್ಲಿನ ಭಾವ ತೀವ್ರತೆ ಏಕಾಗ್ರತೆ ಮಾತು ಆತ್ಮೀಯತೆ ಪ್ರಶಂಶನೀಯವೂ ಪ್ರಸಿದ್ಧವೂ ಆಗಿದೆ.

 



ಒಂದು ದಿನ ಬಸವಣ್ಣನವರ ಮನೆಗೆ ಏಳು ಜನ ವಂಚಕರು ಬಸವಣ್ಣನವರನ್ನು ಅಪಹರಿಸಿಕೊಂಡು ಹೋಗಬೇಕೆಂದು ಅವರ ಮನೆಗೆ ರಾತ್ರಿಯ ನಸುಕಿನಲ್ಲಿ ಬಂದರು. ಅವರು ಹೊರವಿಭೂತಿಯನ್ನಿಟ್ಟು ರುದ್ರಾಕ್ಷಿಗಳನ್ನು ತೊಟ್ಟು ಕಪ್ಪು ಬಣದ ಗುಂಡನೆಯ ಎಳೆಯ ಬದನೆ ಕಾಯಿಗಲನ್ನು ಲಿಂಗಗಳೆಂದು ಕರವಸ್ತ್ರದಲ್ಲಿ ಕಟ್ಟಿದ್ದರು, ಒಳಗೆ ಕಪಟ ತುಂಬಿಕೊಂಡು ಹೊರಗೆ ಮೈಗೆಲ್ಲ ವಿಭೂತಿಯನ್ನು ಬಳಿದುಕೊಂಡಿದ್ದ ಅವರು ಬಸವಣ್ಣನವರ ಮನೆಯ  ದಾಸೋಹದ ಶರಣ ಸಮೂಹದಲ್ಲಿ ಸೇರಿ ಉಂಡು ಅವಿತಿದ್ದು ನಟ್ಟಿರುಳಲ್ಲಿಬಸವಣ್ಣನವರ ಮಲಗುವ ಮನೆಗೆ ಕನ್ನ ಹಾಕಿ ಅವರ ಮೇಲೆ ಕವಿದು ಹೋದರು.ಎಚ್ಚೆತ್ತ ಬಸವಣ್ನನವರು ಶರಣು ಶರಣಾರ್ಥಿ ನನ್ನೊಡೆಯರೇ ಎಂದು ಅವರ ಪಾದಗಳಿಗೆ  ನಮಸ್ಕರಿಸಿದರು. ಒಡನೆಯೇ ಕಳ್ಳರ ಹೃದಯ ಪರಿವರ್ತನೆಯಾಯ್ತು. ಕೈಯಲ್ಲಿದ್ದ ಆಯುಧಗಳನ್ನು ನೆಲಕ್ಕೆ ಬೀಳಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡರು. ಕ್ಷಮೆ ಯಾಚಿಸಿದರು  ಉಪದೇಶ ಮಾಡಬೇಕೆಂದು ಪ್ರಾರ್ಥಿಸಿದರು. ತಮ್ಮ ಕೊರಳಲಿ ಕಟ್ಟಿದುವು ಲಿಂಗ್ಫ಼ವಲ್ಲವೆಂದೂ ಬದನೆಕಾತ್\ಯಿಯೆಂದೂ ತಮ್ಮ ತಮ್ಮ ಕರವಸ್ತ್ರವನ್ನು ಬಿಚ್ಚಿ ತೋರಿಸಲು ಅವು ಲಿಂಗಗಳೇ ಆಗಿದ್ದವು. ಬಸವಣ್ಣನವರ ಬಗ್ಗೆ ಒಂದು ಘಳಿಗೆಯ ಹಿಂದೆ ತಮಗಾಗಿದ್ದಸದ್ಭಾವವು ಸಾತ್ವಿಕ ಭಕ್ತಿಯಾಗಿ ಪರಿಣಮಿಸಿ ಆ ಏಳೂ ಜನರೂ ನಿಜಲಿಂಗ ದೇವ, ನಿಜ ಲಿಂಗ ಬಲ್ಲಯ್ಯ, ನಿಜಲಿಂಗ ಬಾಳಣ್ಣ, ನಿಜಲಿಂಗ ಕಲ್ಲಯ್ಯ, ನಿಜಲಿಂಗ ಚಾಮಣ್ಣ, ನಿಜಲಿಂಗ ಶಾಂತ ಎಂಬ ದೀಕ್ಷಾ ನಾಮಗಳನ್ನು ಬಸವಣನವರಿಂದ ಪಡೆದು ಅವರ ಪ್ರಿಯ ಶಿಷ್ಯರಾದರು.

 

 

1.  http://youtu.be/EqSBVf18B3A

2.  http://youtu.be/QysB3TWzHhI

3.  http://youtu.be/jV6IgzpcKL0
 

5.  http://youtu.be/Owpnk11znQQ
 

7.  http://youtu.be/S8Wz-N-Sn_g

9.  http://youtu.be/R_loNC4gYYA
 

11.  http://youtu.be/lgYihVNQAqk

 

17.  http://youtu.be/sqHmjPp9z-c

Comments