ಸನ್ಮಾರ್ಗವನ್ನು ತಿಳಿ...
ಕವನ
ಮಾನವಿಯತೆ ಇಲ್ಲದ ಮಾನಗೇಡಿ
ಬುದ್ಧಿ ಇಲ್ಲದ ಬುದ್ಧಿಗೇಡಿ
ತಿಳಿದುಕೊ ಒಂದು ಸಾರಿ
ತಿದ್ದಿಕೊ ನೀ ಮತ್ತೊಂದು ಸಾರಿ
ಸಣ್ಣದೊಂದು ಯೋಚಿಸದಿರು
ಸಣ್ಣ ಬುದ್ಧಿ ತೊರದಿರು
ಇರಲಿ ನಿನ್ನಲ್ಲಿ ಅನುಕಂಪ
ಮಾಡಿಕೊಳ್ಳದಿರು ಪರಿತಾಪ
ನಾನು ಎಂದು ಮೆರೆಯದಿರು
ನನ್ನದು ಎಂದು ಕೊಚ್ಚಿಕೊಳ್ಳದಿರು
ನಾನು ನನ್ನದು ನೆಪಮಾತ್ರ
ನಾವು ನಮ್ಮದು ಹಿಡಿ ಸೂತ್ರ
ಇಲ್ಲದವರಿಗೆ ಇದ್ದುದು ಕೊಡಬೇಕು
ನಿನಗೆ ಇದ್ದುದರಲ್ಲಿ ತೃಪ್ತಿ ಪಡಬೇಕು
ಇಲ್ಲ ಇಲ್ಲವೆಂದು ಕೊರಗಬಾರದು
ಬೇಡಿದ ವರವನ್ನು ಹಾಗೆ ಕಳುಹಿಸಬಾದು
ಕೊಟ್ಟರೆ ಕೊಡುವರು
ಬಿಟ್ಟರೆ ಹಾಗೆ ಬಿಡುವರು
ಕೊಡುವುದನ್ನು ಕಲಿ
ಸನ್ಮಾರ್ಗವನ್ನು ತಿಳಿ
-ಎಚ್. ವ್ಹಿ. ಈಟಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್