ಸಪ್ತ ಶುಭ ದಿನ

ಸಪ್ತ ಶುಭ ದಿನ

ಕವನ

 ಸೂರ್ಯ ರವಿವರ ಸರ್ವ ಶುಭಕರ

ಸೋಮ ಸುಂದರ ಪೂರ್ಣ ಚಂದಿರ

ನಮನ ಮಂಗಳ ನೀಡು ಶುಭವರ

ಬುಧನೆ ಭಜಿಸುವೆ ವರವ ಕರುಣಿಸು

ಗುರುವೆ ನಮಿಪೆವು ಹರಸು ನಮ್ಮನು

ಶುಕ್ರ ಮಾನ್ಯನೆ  ಶೌರ್ಯ ದಾತನೆ

ಜಯವ ಕರುಣಿಸಿ ಹರಸು ಶನಿವರ

ಸಪ್ತ ಶುಭದಿನ ಸುಪ್ತ ಪ್ರಭೆಯನು

ಸುತ್ತ ಬೀರುತ ಹರಸಿ ಅನುದಿನ.