ಸಫಲ ಗಂಡುಹೆಣ್ಣುಗಳು ಏಕತಾನತೆಯನ್ನೂ ಒಳ್ಳೆಯ ಸುಂದರ ಬರಹಗಳನ್ನಾಗಿಸಬಲ್ಲರು: ಗಾದೆಗೊಂದು ಗುದ್ದು ಭಾಗ ೫
ಬರಹ
(೨೧) ತುಂಬ ಎಚ್ಚರದಿಂದ ಒಳ್ಳೆಯ ಬರವಣಿಗೆ ಮಾಡುವುದು ಸಾಧ್ಯವಿಲ್ಲ. ಒಳ್ಳೆಯ ಬರವಣಿಗೆಯ ಮೂಲಭೂತ ಗುಣಲಕ್ಷಣವಿದು!
(೨೨) ಬದುಕು ಏಕತಾನವಾಗತೊಡಗಿದಾಗ ಗಂಡು ಆ ಏಕತಾನತೆಯನ್ನು ಯಂತ್ರವನ್ನಾಗಿಸಿಬಿಟ್ಟ. ಹೆಣ್ಣು ಆ ಯಂತ್ರದ ಚಾಲಕಳಾಗುವ ಜವಾಬ್ದಾರಿ ಹೊತ್ತಳು.
(೨೩) ಬದುಕು ಸುಂದರವಾಗಿದೆ. ಹಾಗೆಂದು ಮನುಷ್ಯ ಭಾವಿಸಿಬಿಟ್ಟಿದ್ದಾನೆ. ಇತರೆ ಪ್ರಾಣಿಗಳಿಗೆ ಇಂತಹ ಯಾವುದೇ ಅಭಿಪ್ರಾಯವಿದ್ದಂತೆ ಕಾಣುವುದಿಲ್ಲ!
(೨೪) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆಃ ಹುಡುಗರು ಇಂತಹ ದುಃಸ್ಸಾಹಸಗಳಿಗೆ ಕೈ ಹಾಕದಂತೆ ಹುಡುಗಿಯರು ತಡೆಹಿಡಿಯುತ್ತಾರೆ!
(೨೫) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆಃ ಆತನ ಸಾಫಲ್ಯತೆಯ ಬಹುಭಾಗವು ಆಕೆಯನ್ನು ಎಲ್ಲದರಿಂದಲೂ ರಕ್ಷಿಸುವಲ್ಲಿಯೇ ವ್ಯಯಗೊಳ್ಳುತ್ತದೆ.
(೨೬) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆಃ ಅವರಿಬ್ಬರೂ ಒಬ್ಬರಿಗೊಬ್ಬರು ಬೆನ್ನು ಹಾಕಿರುತ್ತಾರೆ!//