ಸಬ್ಬಕ್ಕಿ ವಡೆ
ಬೇಕಿರುವ ಸಾಮಗ್ರಿ
ಸಬ್ಬಕ್ಕಿ - ೨ ಕಪ್, ಬೇಯಿಸಿ ಮಸೆದ ಆಲೂಗಡ್ಡೆ - ೧ ಕಪ್, ತರಿತರಿಯಾಗಿ ಹುಡಿ ಮಾಡಿದ ಕಡಲೆಕಾಯಿ ಬೀಜ - ಅರ್ಧ ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ - ೮ ತುಂಡುಗಳು, ಕತ್ತರಿಸಿದ ಪುದೀನಾ ಸೊಪ್ಪು - ಕಾಲು ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - ೩ ಚಮಚ, ಇಂಗು - ಕಾಲು ಟೀ ಚಮಚ, ಜೀರಿಗೆ - ೨ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಸಬ್ಬಕ್ಕಿಯನ್ನು ಒಂದು ಗಂಟೆ ಸಮಯ ನೆನೆಸಿ ಬಸಿದಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಇಂಗು, ಜೀರಿಗೆ ಹಾಗೂ ಕಡಲೆಕಾಯಿ ಹುಡಿಯನ್ನು ನೀರು ಹಾಕದೆ ರುಬ್ಬಿ. ಸಬ್ಬಕ್ಕಿ, ಉಪ್ಪು, ಅರೆದ ಮಿಶ್ರಣ ಹಾಗೂ ಮಸೆದ ಆಲೂಗಡ್ಡೆಯನ್ನು ಸೇರಿಸಿ ವಡೆಯ ಹದಕ್ಕೆ ಕಲಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ ಸಬ್ಬಕ್ಕಿ ವಡೆ ತಯಾರು.