ಸಭೆ ಮತ್ತು ಸಮಾರಂಭ
ಕವನ
ಇರಲಿ ಸಭೆ- ಸಮಾರಂಭಗಳು
ಮನುಜನ ಒಳಿತು ಕೆಡುಕುಗಳ
ತಿಳಿದುಕೊಳ್ಳುವ ತುಡಿತಗಳಿಗೆ
ಇರಲಿ ಅಧ್ಯಕ್ಷ ಅತಿಥಿ ಮಹೋದಯರು
ಜೊತೆಯಲ್ಲಿ ಹೇಳುವವರು ಕೇಳುವವರು
ಒಟ್ಟಿಗೆ ಕಾಲುಚಾಚಿ ಮಲಗುವರು
ಹೀಗೊಂದು ಘಟನೆ ನೆನಪಾಯಿತು
ಸಮಾರಂಭದ ಆರಂಭ ಪ್ರಾರ್ಥನೆ !
ಹಾಡಲು ಬಂದವರು ಹಾಡುತ್ತಿದ್ದರು
ಕೇಳುಗರು ಅತಿಥಿ ಮಹಾಶಯರು
ನಿದಿರೆ ಮಾಡುತ್ತಿದ್ದರು ಡರ್ ಡೊರ್ ಡರ್
ಅಧ್ಯಕ್ಷ , ಪ್ರಾರ್ಥನೆ ಯಾವಾಗ ಮುಗಿಯುತ್ತದೆಯೆಂದರು ?
ಸಾವಿರದೊಂದು ಅರ್ಚನೆಯ ನಂತರ ,ಸಂಘಟಕರೆಂದರು !
ಹಾಗಾದರೆ, ನನಗೆ ಚಾಪೆ ಕಂಬಳಿ
ತನ್ನಿಯೆಂದ, ಅಧ್ಯಕ್ಷರು ಅದರಲ್ಲಿ
ಮಲಗಿ ನಿದ್ರೆ ಹೋದರು !
ಸಭೆ - ಸಮಾರಂಭದಲ್ಲಿ,
ಹೀಗಾಗುವುದು ಬೇಡ !
ಸರಿಯಾದ ಪೂರ್ವ ತಯಾರಿ ಇರಲಿ ಸಂಘಟಕರಿಗೆ !
ಯಾವುದೇ ಸಮಾರಂಭದಲ್ಲಿ
ಉತ್ತಮ ವಿಚಾರ. ಹರಿದು ಬರಲಿ
ಜೀವನದ ತತ್ವಗಳ ಅಳವಡಿಕೆ ಇರಲಿ
ಯಾರೇ ಒಬ್ಬನ ಹೊಗಳುವಿಕೆ ಸೀಮಿತವಾಗಿರಲಿ ! ವಿಷಯ ಜ್ಞಾನದ
ತಿಳುವಳಿಕೆಯ ಅವಧಿ ಹೆಚ್ಚಲಿ !
ಸಭೆ- ಸಮಾರಂಭ ಮಾಡಿದ ಸಂಘಟಕರಿಗೆ ಜಯವಾಗಲಿ !
-ಹಾ ಮ ಸತೀಶ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್