ಸಮಗ್ರತೆಯ ಅರಿವು
ಕವನ
ಜಗದ ಸಮಗ್ರತೆಯ ಅಚಲ ಅರಿವು
ಮಂಥಿಸು ಮನದಲಿ ಹೇಗೆ ಮೂಡುವುದು
ಜಾಗ್ರತಿಸು ದೇಹೋಪಕರಣಗಳ ತೀಕ್ಷ್ಣತೆ
ಅವಲೋಕಿಸು ಮನ ಬುದ್ಧಿ ಶುದ್ಧೀಕರಣತೆ
ಒದಗಿಸು ಇಂದ್ರಿಯಗಳಿಗೆ ಸಾತ್ವಿಕಾಲೋಚನ
ಮಾಡಿಸು ಮನ ಬುದ್ಧಿಗೆ ಆತ್ಮಾವಲೋಕನ
ಅನಾವರಣಿಸು ಧ್ಯಾನ ಯೋಗದಿ ಸುಪ್ತಚೇತನ
ಬೆಳಗಿಸು ನಡೆಸು ಸತ್ಸಂಗದಿ ಅಂತರ್ಗಮನ
ಸಮಗ್ರತೆಯ ಅರಿವು ಬಾರದು ಬಾಹ್ಯಾಕರ್ಷಣೆಯಲಿ
ಹೊಮ್ಮುವುದು ಆತ್ಮ ವಿಕಾಸ ತಪಾಸಣೆಯಲಿ
ನಿರಂತರ ಭಕ್ತಿ ವೈರಾಗ್ಯ ಪ್ರಶಾಂತತೆಯಲಿ
ನಿತ್ಯ ಶುದ್ಧಿಯ ಆತ್ಮಜ್ಯೋತಿಯ ಕ್ಷಕಿರಣದಲಿ .
ಶ್ರೀ ನಾಗರಾಜ್
15/3/2021