"ಸಮತೆಯ ಟೀ"

"ಸಮತೆಯ ಟೀ"

ಹೆಮ್ಮೆಯ ಕಾರ್ಯಕ್ರಮವೋ, ವಿಷಾದನೀಯ ಸಂಗತಿಯೋ, ನಮ್ಮ ಜವಾಬ್ದಾರಿಯೋ, ನಿಮ್ಮ ವಿವೇಚನೆಗೆ ಬಿಡುತ್ತಾ.. ಕೋಲಾರದ ಉಪನ್ಯಾಸಕರಾದ ಅರಿವು ಶಿವಪ್ಪನವರು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ

"ಶೋಷಿತರ ಗೃಹ ಪ್ರವೇಶ ಸವರ್ಣೀಯರ ಮನೆಗೆ" ಎಂಬ ಅಸ್ಪೃಶ್ಯತೆಯ ನಿವಾರಣಾ ಆಂದೋಲನದ ಭಾಗವಾಗಿ ನಾಳಿನ ಕಾರ್ಯಕ್ರಮದ ಉದ್ಘಾಟನೆಯ ಸೌಭಾಗ್ಯ ಅಥವಾ ದೌರ್ಭಾಗ್ಯ ನಮ್ಮದು.

ಏಕೆಂದರೆ ಅಸ್ಪೃಶ್ಯತೆಯ ನಿವಾರಣೆಗಾಗಿ ಸವರ್ಣೀಯರ ಮನೆಗೆ ಅದೇ ಊರಿನ ತಳ ಸಮುದಾಯದ ಕೆಲವರನ್ನು ಆಹ್ವಾನಿಸಿ ಅವರೊಂದಿಗೆ ಉಪಹಾರ ಸೇವಿಸಿ ಚಹಾ ಕಾಫಿ ಕುಡಿಯುವುದು ಒಂದು ಸಣ್ಣ ಆತ್ಮ ತೃಪ್ತಿಯ ಸೌಭಾಗ್ಯ. ಅದೇ ಸಂದರ್ಭದಲ್ಲಿ ಇನ್ನೂ ಇದಕ್ಕಾಗಿ ಕಾರ್ಯಕ್ರಮ ಏರ್ಪಡಿಸಬೇಕಾದ ಅನಾಗರಿಕ ವಾತಾವರಣದಲ್ಲಿ ನಾವಿದ್ದೇವೆ ಎಂಬ ದೌರ್ಭಾಗ್ಯವೂ ನಮ್ಮನ್ನು ಕಾಡುತ್ತದೆ.

ಆದರೂ ಮಾತಿಗಿಂತ ಕೃತಿ ಲೇಸು ಎಂದು ಭಾವಿಸಿ ಒಂದಷ್ಟು ಪ್ರಯತ್ನಗಳು… 

ಅರಿವು ಭಾರತ (ನಮ್ಮ ನಡೆ  ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ)

 "ಸಮತೆಯ ಟೀ"

ಸವರ್ಣೀಯರ ಮನೆಗೆ ಶೋಷಿತ ಸಮುದಾಯಗಳ ಸ್ವಾಗತ ಮತ್ತು ಜೊತೆಯಾಗಿ ಉಪಹಾರ ಸೇವನೆ.

ಸ್ಥಳ; ಜಿ.ಕೆ.ಸಂತೋಷ್ ಕುಮಾರ್ ಮನೆ, ಸಿ.ಟಿ.ಗೊಲ್ಲಹಳ್ಳಿ, ಶಿವನಾಪುರ ಪಂಚಾಯಿತಿ, ನಂದಗುಡಿ ಹೋಬಳಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ದಿನಾಂಕ: 27.8.2023 ಭಾನುವಾರ, ಬೆಳಗ್ಗೆ 9 ಗಂಟೆಗೆ.

ಉದ್ಘಾಟನೆ:  ವಿವೇಕಾನಂದ, ಎಚ್.ಕೆ, ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಮನಸ್ಸುಗಳ ಅಂತರಂಗ ಚಳವಳಿ.

ಅತಿಥಿಗಳು:  ಟಿ.ವಿಜಯಕುಮಾರ್, ಹಿರಿಯ ಮುಖಂಡರು, ಕೋಲಾರ.

ಪಂಡಿತ್ ಮುನಿವೆಂಕಟಪ್ಪ, ರಾಜ್ಯಾಧ್ಯಕ್ಷರು, ಭೀಮಸೇನೆ-ಕರ್ನಾಟಕ.

ಅಬ್ಬಣಿ ಶಿವಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರೈತಸಂಘ.

ಡಾ.ರಾಮಚಂದ್ರ ಆರ್.ಕೆ. ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಶ್ರೀನಿವಾಸಪುರ.

ಡಾ.ರುದ್ರೇಶ್ ಅದರಂಗಿ, ಪ್ರಾಧ್ಯಾಪಕರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು.

ರೂಪೇಶ್ ಪುತ್ತೂರು. ಉಪನ್ಯಾಸಕರು, ಬೆಂಗಳೂರು.

ಪಿ.ಆರ್. ಸುಬ್ರಮಣಿ, ಪ್ರಗತಿಪರ ಚಿಂತಕರು, ಬೆಂಗಳೂರು

ಆನಂದ್, ರೈತ ಮುಖಂಡರು, ಸಿ.ಟಿ.ಗೊಲ್ಲಹಳ್ಳಿ.

ಕೊಂಡರಾಜನಹಳ್ಳಿ ಮಂಜುಳ, ಹಾಡುಗಾರರು.

ರಾಧಾಮಣಿ, ಬೆಳಕು ಸಂಸ್ಥೆ.

ವೆಂಕಟಾಚಲಪತಿ, ಈ ನೆಲ ಈ ಜಲ ಸಾಂಸ್ಕೃತಿಕ ಸಂಸ್ಥೆ.

ಬಸ್ ಮಾರ್ಗ: ಹೊಸಕೋಟೆ ಮತ್ತು ಕೋಲಾರ ಹೆದ್ದಾರಿಯಲ್ಲಿನ ಚಿಕ್ಕನಹಳ್ಳಿ ಗೇಟ್ – ಅಲ್ಲಿಂದ ಆಟೋನಲ್ಲಿ 2 ಕಿ.ಮೀ.

ಆಸಕ್ತರು ಭಾಗವಹಿಸಬಹುದು. ಇದೇ ರೀತಿಯ ಕಾರ್ಯಕ್ರಮಗಳನ್ನು ಆಸಕ್ತಿ ಇರುವವರು ತಮ್ಮ ಗ್ರಾಮ ಹೋಬಳಿ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯವಾಗಿ ಸರಳವಾಗಿ ಆತ್ಮೀಯವಾಗಿ ಏರ್ಪಡಿಸಬಹುದು. ಅದನ್ನು ಮಾಡುವ ವಿಧಾನದ ಬಗ್ಗೆ ಮಾಹಿತಿ ಬೇಕಾದಲ್ಲಿ ದಯವಿಟ್ಟು ಸಂಪರ್ಕಿಸಿ. ಜೊತೆಗೆ ಅಗತ್ಯವಿದ್ದಲ್ಲಿ ನಮ್ಮ ತಂಡದ ಸದಸ್ಯರು ಸಹ ಭಾಗವಹಿಸುತ್ತಾರೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ