ಸಮಯವೇ ನಿನ್ನ ಮಹಿಮೆಯೇ......

ಸಮಯವೇ ನಿನ್ನ ಮಹಿಮೆಯೇ......

 

ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು... ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ... ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿ ಹನಿಯನ್ನು ಮನಹಪುರ್ವಕವಾಗಿ ಆಹ್ವನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ...

 

ತುಂಬ ಮುಖ್ಯವಾದ ಕೆಲಸಕ್ಕೆ ಶ್ರದ್ಧೆಯಿಂದ ಸಿಂಗರಿಸಿ ಹೊರಟವಳಿಗೆ ಅರ್ಧ ದಾರಿಯಲ್ಲಿ ಮಳೆ ಬಂದಾಗ ಆಶಾ ಭಂಗವಯಿತು... ಈ ಮಳೆಯಿಂದ ನನ್ನ್ನ ಕೆಲಸ ಕೆಟ್ಟಿತು ಅನ್ನೋ ದುಗುಡ ಬೇರೆ ಆಯಿತು... ಮಳೆಗಾಲದಲ್ಲಿ ಛತ್ರಿ ಇಲ್ಲದೆ ಮನೆಯಿಂದ ಹೊರಟಿದ್ದು ನನ್ನ ತಪ್ಪು... ಆದರು ಮಳೆಯದೇ ದೋಷ ಹೆಚ್ಚಾಗಿ ಕಂಡಿತು. ಕೆಲಸದ ಮನೆ ಹಾಳಾಯಿತು ಅಂತ ಮನೆಗೆ ವಾಪಾಸ್ಸದೆ...

 

ಮನಸಿನ ಅಸಹನೆ ಶಾಂತ ಗೊಳಿಸಲು ಕಾಫಿಯ ಮೊರೆ ಹೋದೆ... ತೆರೆದ ಕಿಟಕಿಯಿಂದ ತಂಪಾದ ಗಾಳಿಯ ಜೊತೆ ಬಿಸಿ ಬಿಸಿ ಕಾಫಿ ಸೇವಿಸಿದಾಗ ಅಸಹನೆ, ರೋಶಯೆಲ್ಲ ತನಗರಿವಿಲ್ಲದೆ ಮಾಯವಾಯಿತು... 

 

ಕಾಲೇಜಿನ ದಿನಗಳಲ್ಲಿ ಮಳೆ ಯಾವುದೇ ಕ್ಷಣ ಬಂದರೂ ತುಂಬು ಸಂತೋಷದಿಂದ ಆಹ್ವಾನಿಸುತಿದ್ದೆ... ಮಳೆಯಲ್ಲಿ ನೆನೆಯುವುದೇ ಸಂಬ್ರಮ... ಮಳೆಗಾಲ ನಂಗೆ ಬಾಲ್ಯದಿಂದಲೂ ತುಂಬ ಇಷ್ಟವಾಗಿತ್ತು... ಅಮ್ಮ ಮಾಡಿದ ಬಿಸಿ ಬಿಸಿ ಕಾಫಿಯ ಜೊತೆ ಮಳೆಯನ್ನು ನೋಡುವುದೋ, ಪುಸ್ತಕ ಓದುವುದೋ.... ಇಲ್ಲ ಅಮ್ಮನ ಕಣ್ಣು ತಪ್ಪಿಸಿ ಮಳೆಯಲ್ಲಿ ನೆನೆಯುದೆಂದರೆ ತುಂಬ ಪ್ರಿಯವಾದ ಕೆಲಸವಾಗಿತ್ತು.. ಬಹುಷಃ ಈ ಮಳೆಯಲ್ಲಿ ನೆನೆಯುವ ಚಾವಳಿ ಬಂದಿದ್ದು ಅಪ್ಪನಿಂದಲೇ ಎನ್ನಬಹುದು... ಅವರು ಅಷ್ಟೇ... ಮಳೆಯಲ್ಲಿ ಹೊರಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದವರು, ಮಳೆಯಲ್ಲಿ ಎಲ್ಲ ಮುಖ್ಯವಾದ ಕೆಲಸಗಳಿಗೆ ಕೈ ಹಾಕುತಿದ್ದರು... ಇದೆ ನೆಪಮಾಡಿಕೊಂಡು ಹೊರಡುತಿದ್ಡಿದು ಅಮ್ಮನ ಗೊಣಗಾಟದಿಂದ ದೂರವಿಡಲು ಅಷ್ಟೇ... ಮಳೆಯಲ್ಲಿ ಮನಃಪೂರ್ತಿಯಾಗಿ ನೆನೆದು ಸಂಜೆ ಮಳೆ ನಿಂತಮೇಲೆ ಹರ್ಷಚಿತ್ತರಾಗಿ ವಾಪಾಸ್ಸಗುತಿದ್ದರು.... ಆ ಸಮಯದಲ್ಲಿ ಮಳೆಯಲ್ಲಿ ನೆನೆದು ತೊಪ್ಪೆಯಾದ ಸೂರ್ಯನೂ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತ ಹೊಂಬಣ್ಣ ಬೀರುತ್ತಿದ್ದ... ಕರೆಂಟು ಹೋದಾಗಲಂತೂ ಅಂತ್ಯಾಕ್ಷರಿ ಆಡುತ್ತಿದ್ದ ನೆನಪು ಇನ್ನೂ ಅಚ್ಚಳಿಯದೆ ಉಳಿದುಕೊಂಡಿದೆ... ಅಪ್ಪನೂ ನಮ್ಮೊಂದಿಗೆ ಸೇರುತಿದ್ದರು.... ಅಮ್ಮ ಅಡುಗೆ ಮನೆಯಿಂದಲೇ ಸಾಥ್ ಕೊಡುತಿದ್ದರು... ಮಳೆಯೊಂದಿಗೆ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿತ್ತು ಆಗ... 

 

ಇದೆಲ್ಲ ಕಳೆದು ಬರೀ ಆರು ಮಳೆಗಾಲ ಕಳೆದರು ಯಾಕೋ ಮೊನ್ನೆ ಅರಿವಿಲ್ಲದೆ ಮಳೆಯಮೇಲೆ ಕೋಪ ಬಂದುಬಿಟ್ಟಿತ್ತು.. ಬಹುಷಃ ಕಲಾಯ ತಸ್ಮೈನಮಃ ಅನ್ನೋದು ಇದ್ದಕ್ಕೆನೆ... ಆಗಿನ ಚಿಕ್ಕ ಚಿಕ್ಕ ವಿಷಯಗಳು, ಅವು ತರುತಿದ್ದ ಸಂತೋಷ ಇವತು ಪ್ರಾಮುಖ್ಯತೆ ಕಳೆದು ಕೊಂದು ಬಿಟ್ಟಿದೆ... ಮನುಷ್ಯ ಬೆಳೆದಂತೆಲ್ಲ ಕೆಲವು ನೆನಪುಗಳನ್ನು ಡಿಲೀಟ್ ಮಾಡುತ್ತಾನೆ... ಬಹುಷಃ ಸಂಬಂಧಗಳನ್ನು ಕೂಡ.....

 

Comments

Submitted by lpitnal@gmail.com Thu, 10/11/2012 - 16:14

ಉತ್ತಮ ಲೇಖನ. ಮಳೆಯು ಕೂಡ ಬೇಸರವಾಗುವ ಕಾಲಘಟ್ಟದ ಕುರಿತು ನಿಮ್ಮ ಹಳಹಳಿ, ಕಳೆದುಕೊಂಡ ನಿನ್ನೆ ಗಳು ನೆನಪುಗಳು ಮಳೆಯಲ್ಲಿ ನೆನಪಾಗಿ ಉಳಿದುಬಿಡುವ ಹಳೆಯ ಜೀವದ ಸಂಗತಿಗಳು ಹೇಗೆ ಬೇರೆ ರೀತಿಯಲ್ಲಿ ಪರ್ಯವಸಾನವಾಗುತ್ತವೆ ಸಂಬಂಧಗಳ ಹಾಗೆ! ಲೇಖನ ಚನ್ನಾಗಿದೆ. ಧನ್ಯವಾದಗಳು.