ಸಮಯ ಸಂದರ್ಭ ಮತ್ತು ಸನ್ನಿವೇಶ
ಕಳೆದ ಕೆಲವು ದಿನಗಳಿಂದ ಪ್ರೊ. ಜಿ ವೆಂಕಟಸುಬ್ಬಯ್ಯ ಅವರ ಸಮಯ ಸಂದರ್ಭ ಮತ್ತು ಸನ್ನಿವೇಶ ಎಂಬ ಹೊತ್ತಿಗೆಯ ರಸಪ್ರವಾಸದಲ್ಲಿದ್ದೆ. ಈ ರಸ ಪ್ರವಾಸ ಸಾಕಾರ ವಾಗಿದ್ದು ಲಂಡನ್ನಿನ ಸುರಂಗ ರೈಲುಗಳಲ್ಲಿ. ನನ್ನ ಮನೆಗೂ ಮತ್ತು ಕಛೇರಿಗು ಸುಮಾರು 35 ನಿಮಿಶಗಳ ರೈಲು ಪ್ರಯಾಣದ ಅಂತರವಿದೆ. ಹಾಗಾಗಿ ಒಟ್ಟಾರೆ ಸುಮಾರು 60 ರಿMದ 70 ನಿಮಿಶಗಳನ್ನು ಲಂಡನ್ನಿನ ಸುರಂಗ ರೈಲುಗಳಲ್ಲಿ ಕಳೆಯುತ್ತಿದ್ದೆ. ನಗರದಲ್ಲಿ ಬಿಟ್ಟಿಯಾಗಿ ಸಿಗುವ ದೈನಿಕಗಳಾದ ಮೆಟ್ರೋ ಮತ್ತು ಈವನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಗಳ ಸಂಕ್ಷಿಪ್ತವಾದ, ಆಳವಾದ ವಿಷಯಗಳಿಗೆ ಆಗರವಾಗದ ಅನೇಕ ಮಸಾಲೆ ಸುದ್ದಿಗಳು ನನ್ನ ಅತ್ಯಮೂಲ್ಯವಾದ ಆ 60-70 ನಿಮಿಷಗಳನ್ನು ಹೈಜಾಕ್ ಮಾಡುತಿದ್ದವು. ಫೂಟ್ಬಾಲ್ ಆಟಗಾರರ ಅಫೇರುಗಳ, ಲMಡನ್ನಿನ ಮೂಳೆ ಮೂಲೆಗಳಲ್ಲಿ ನಡೆಯುವ ಹಗಲು ದರೋಡೆಗಳ, ಚೂರಿ ಇರಿತ ಮುಂತಾದ ಕ್ರೈಮುಗಳ ಹಾಗೂ ಎಷ್ಟು ಮಾಡಿದರೂ ಲಗಾಮಿಗೆ ಸಿಗದೆ ಏರುಪೇರಾಗುತ್ತಿರುವ ಆರ್ಥಿಕ ವಲಯದ ವಿದ್ಯಮಾನಗಳಂತಹ ಸುದ್ದಿಗಳಿಂದಲೇ ತುಂಬಿರುತ್ತಿದ್ದ ಈ ಪತ್ರಿಕೆಗಳನ್ನು ಓದುವ ಉತ್ಸಾಹ ಕುಂದಿಹೋಗಿತ್ತು.
ಹೀಗಿರುವಾಗ ಒಂದೂದಿನ ಸಮಯ ಸಂಧರ್ಭ ಮತ್ತು ಸನ್ನಿವೇಶ ಎಂಬ ಹೊತ್ತಿಗೆ ಕಣ್ಣಿಗೆ ಬಿಟ್ಟು. ಈ ಪುಸ್ತಕವನ್ನು ನನ್ನ ಅಣ್ಣ ಬೆMಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೊಂಡದ್ದು. ಅವನು ಓದುವ ಉದ್ದೇಶಕ್ಕೆಂತು ಅಲ್ಲ, ನನ್ನ ಓದಿನ ಹವ್ಯಾಸವನ್ನು ಅರಿತ ಅವನು ನನಗಾಗಿ ಕೊಂಡ ಪುಸ್ತಕ. ವೆಂಕಟಸುಬ್ಬಯ್ಯಾರವರ ಹೆಸರನ್ನು ಹೆಚ್ಚಾಗಿ ಅರಿಯದ ನಾನು, ಹೆಚ್ಚು ನಿರೀಕ್ಷೆಗಳಿಲ್ಲದೇ ಓದಲು ಪ್ರಾರಂಭಿಸಿದೆ. ಮೊದಲ ಲೇಖನವನ್ನು ಓದುತ್ತಲೇ, ಲೇಖಕರ ವಿದ್ವತ್ತು ಗೋಚರವಾಗ ತೊಡಗಿತು, ಓದು ರಸನಿಮಿಶವಾಗತೊಡಗಿತು. ಹೊಸದಾಗಿ ಮದುವೆಯಾಗಿರುವ ನನಗೆ, ಕಛೇರಿಯ ಕೆಲಸದ ನಂತರ ಮನೆಯಲ್ಲಿ ಸಿಗುವ ಸಮಯ ತೀರಾ ಕಡಿಮೆ. ಸಿಕ್ಕರೂ ನನ್ನ ಮುದ್ದಿನ ಒಡತಿಯೊಡನೆ ಗಂಟೆಗಳು ನಿಮಿಷಗಳಂತೆ ಕಳೆದು ಹೋಗುತ್ತವೆ. ಹೀಗಾಗಿ ನನ್ನ ರೈಲು ಪ್ರಯಾಣದ ಅವಧಿಯನ್ನು ಈ ಪುಸ್ತಕಕ್ಕೆ ಮೀಸಲಿಟ್ಟೆ. ಇದು ನನ್ನ ಪ್ರಯಾಣವನ್ನು ರಸಪ್ರವಾಸವನ್ನಾಗಿಸಿತು.
ನಾಡೊಜ ಪ್ರೊ ಜಿ ವೆಂಕಟಸುಬ್ಬಯ್ಯ ಕನ್ನಡ ನಾಡಿನ ಅಪೂರ್ವ ವಿದ್ವಾಂಸರು. ಇವರು ನಲವತ್ತು ವರ್ಷ ಪ್ರಾಧ್ಯಾಪಕರಾಗಿದ್ದು, ನಿವೃತ್ತಿ ಹೊಂದಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹನ್ನೀಘಂಟಿನ ಪ್ರಧಾನ ಸಂಪಾದಕರೂ ಆಗಿ ಇಪ್ಪತ್ತು ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿ ಆ ಮಹಾನೀಘಂಟನ್ನು ಮುಕ್ತಾಯ ಹಂತಕ್ಕೆ ತಂದಿದ್ದಾರೆ. ಅಲ್ಲೆಡೆ ಇವರ "ಇಗೋ ಕನ್ನಡ" ಅಂಕಣವು ಪ್ರಜಾವಾಣಿಯಲ್ಲಿ 18 ವರ್ಷಗಳ ಕಾಲ ಜನಪ್ರಿಯ ವಾದ ಅಂಕಣವಾಗಿತ್ತು ಎಂಬುದು ಅವರ ಬರಹದ ಜನಪ್ರಿಯತೆಯನ್ನು ತೋರಿಸುತ್ತದೆ.
"ಸಮಯ ಸಂಧರ್ಭ ಸನ್ನಿವೇಶ" ಎಂಬ ಈ ಹೊತ್ತಿಗೆಯಲ್ಲಿ ಲೇಖಕರು, ಅನೇಕ ಕಾಲ ಘಟ್ಟಗಳಲ್ಲಿ ಮಾಡಿದ ಭಾಷಣಗಳನ್ನೂ, ಬರೆದ ಲೇಖನಗಳನ್ನೂ, ಹಾಗೂ ಅನೇಕ ಯುವ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳನ್ನೂ ಒಂದುಗೂಡಿಸಿ, ಸಪ್ನ ಬುಕ್ ಹೌಸ್ ವತಿಯಿಂದ 2007ರಲ್ಲಿ ಹೊರತಂದಿದ್ದಾರೆ. ಕಥೆ, ಕಾದಂಬರಿ, ಕವಿತೆ , ಜಾನಪದ, ವಿಮರ್ಷೆ ಮುಂತಾದ ಸಾಹಿತ್ಯ ವಿಭಾಗಗಳಲ್ಲಿ ಘಾಡವಾದ ಅರಿವನ್ನು ಹೊಂದಿರುವ ಇವರು ಸಂಸ್ಕೃತ ಪಂಡಿತರೂ ಹೌದು. ಹೀಗಾಗಿ ಅವರು ಬರೆದಿರುವ ಎಲ್ಲ ಲೇಖನಗಳು ಆಯಾ ಕ್ಷೇತ್ರದ ಆಳಕ್ಕೆ ಇಳಿದು, ಅಲ್ಲಿ ಸಾಧನೆಗೈದವರನೇಕಾರ ಮಾಹಿತಿಯನ್ನು ಓದುಗರಿಗೆ ಕೊಡುವುದರ ಮೂಲಕ, ಸಾಹಿತ್ಯರಸಿಕರಿಗೆ ಕನ್ನಡ ಸಾಹಿತ್ಯದ ನಕಾಷೆಯನ್ನೊದಗಿಸಿವೆ. ಇನ್ನೂ ಆ ನಕಾಷೆಯ ಬೇರೆ ಬೇರೆ ದಿಕ್ಕುಗಳನ್ನು ಹಿಡಿದು, ದಾರಿಗಳನ್ನು ಹುಡುಕಿ, ದಾರಿಯಲ್ಲಿ ನಡೆದ ಅನೇಕರ ಮಾಹಿತಿ ಪಡೆದು ಸಾಗುತ್ತಿದ್ದರೆ, ಅದು ರಸಪ್ರವಾಸವಾಗದೆ ಮತ್ತೇನು?
ಈ ಹೊತ್ತಿಗೆಯ ಕೆಲವು ಲೇಖನಗಳು ಕನ್ನಡ ಸಾಹಿತ್ಯದ ಚರಿತ್ರೆ ಹಾಗೂ ಕನ್ನಡನಾಡಿನ ಏಕೀಕರಣದ ಇತಿಹಾಸವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡಿವೆ. ಈ ಲೇಖನಗಳಲ್ಲಿ ಶ್ರೀಯುತರು, ತಮ್ಮ ಧೋರಣೆಗಳನ್ನು ನಮ್ಮ ಮುಂದಿಡುವುದರ ಮೂಲಕ ನಾವು ಯೋಚನಾ ಶಿಬಿರಾರ್ಥಿಯಾಗುವಂತೆ ಮಾಡಿದ್ದಾರೆ. ಅಲ್ಲದೇ ನಾವು ಯೋಚಿಸುವ ದಿಕ್ಕನ್ನೇ ಬದಲಾಯಿಸುವಂತಹಾ ಅನೇಕ ವಿಷಯಗಳನ್ನು ನಮಗೆ ಉಣಬಡಿಸಿದ್ದಾರೆ. ಉದಾಹರಣೆಗೆ, ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡಕ್ಕೆ ಸಾಂಸ್ಕೃತಿಕ ಸ್ಥಾನಮಾನವಿರದ ಕಾರಣ ಅನೇಕ ಹೋರಾಟಗಳಾಗುತ್ತಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಈ ವಿಚಾರವಾಗಿ ಅವರ ಅಭಿಪ್ರಾಯ ಅವರ ಮಾತಲ್ಲಿ ಏನಿದೆ ಎಂದರೆ " ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಗಳು ದೊರೆಯಬೇಕೆಂಬ ಗೊಂದಲದ ಕೂಗೊಂದು ಪ್ರಚಾರದಲ್ಲಿದೆ. ಅದು ಸ್ಥಾನಮಾನಕ್ಕಾಗಿ ಆಗುವ ಹೋರಾಟವಲ್ಲ ಅದು ಧನಸಂಗ್ರಹ ಉಪಾಯ ಅದರ ಪಾಡಿಗೆ ಅದು ನಡೆಯುತ್ತಿರಲಿ! ಆದರೆ ನಾವು ತಿಳಿಯಬೇಕು 'ನಮ್ಮ ಭಾಷೆ ಪ್ರಾಚೀನ ಸಮೃದ್ದ ಸಾಹಿತ್ಯದ ಭಾಷೆ' ಎಂಬ ಕೀರ್ತಿಯನ್ನು ಯಾವ ಸರ್ಕಾರವೂ ನೀಡಬೇಕಾಗಿಲ್ಲ. ಆ ಸ್ಥಾನಮಾನವನ್ನು ಕೀರ್ತಿಯನ್ನೂ ಅದು ತಾನೇ ತನ್ನ ಸತ್ವದಿಂದ ಗಳಿಸಿ ಉಳಿಸಿಕೊಂಡಿದೆ. ಅಲ್ಲದೇ ಶಾಸ್ತ್ರೀಯ ಭಾಷೆ ಎಂಬ ಶಬ್ದಕ್ಕೆ ಅರ್ಥವೇನು? ಯಾವ ಭಾಷೆ ಶಾಸ್ತ್ರೀಯವಲ್ಲ ? ಅಶಾಸ್ತ್ರೀಯ ಭಾಷೆ ಎಂಬುದು ಬೇರೆ ಇದೆಯೇ?"
ಹೀಗೆ ಶ್ರೀಯುತರು ತಮ್ಮ ಅನುಭವದ ಸಾರವನ್ನು ಓದುಗರಿಗೆ ಉಣಬಡಿಸಿ, ಸಾಹಿತ್ಯದ ಅನೇಕಮಜಲುಗಳನ್ನು ಪರಿಚಯಿಸಿ, ಪ್ರಚಲಿತ ಅನೇಕ ವಿದ್ಯಮಾನಗಳಬಗ್ಗೆ ತಮ್ಮ ಧೋರಣೆಯನ್ನು ಸ್ಪಷ್ಟ ಪಡಿಸಿ,ಕನ್ನಡ ಸಾಹಿತ್ಯ ಓದುಗರಿಗೆ ದಾರಿದೀಪವನ್ನು ಒದಗಿಸಿದ್ದಾರೆ. ಸMಪದಿಗರು ಸಹಜವಾಗಿ ಸಾಹಿತ್ಯಾಸಕ್ತರಾಗಿರುವ ಕಾರಣ, ಈ ಹೊತ್ತಿಗೆಯನ್ನು ತಪ್ಪದೇ ಓದಿ ಎಂಬ ಮಾತಿನೊಂದಿಗೆ ಈ ಲೇಖನವನ್ನು ಮುಗಿಸುತಿದ್ದೇನೆ ಧನ್ಯವಾದ.
ಬಾಳುವುದೇತಕೆ ನುಡಿಯೆಲೆ ಜೀವ
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ. -
ಕು.ವೆಂ.ಪು
Comments
ಉ: ಸಮಯ ಸಂದರ್ಭ ಮತ್ತು ಸನ್ನಿವೇಶ
In reply to ಉ: ಸಮಯ ಸಂದರ್ಭ ಮತ್ತು ಸನ್ನಿವೇಶ by makara
ಉ: ಸಮಯ ಸಂದರ್ಭ ಮತ್ತು ಸನ್ನಿವೇಶ
ಉ: ಸಮಯ ಸಂದರ್ಭ ಮತ್ತು ಸನ್ನಿವೇಶ
In reply to ಉ: ಸಮಯ ಸಂದರ್ಭ ಮತ್ತು ಸನ್ನಿವೇಶ by SRINIVAS.V
ಉ: ಸಮಯ ಸಂದರ್ಭ ಮತ್ತು ಸನ್ನಿವೇಶ