ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

ಬರಹ

*ಸಮಸ್ತ ಕನ್ನಡಿಗರಿಗೆ ವ್ಯಯನಾಮ ಸಂವತ್ಸರದ ಯುಗಾದಿಯ ಶುಭಾರೈಕೆಗಳು*

ಮರೆಯಾಗುತ್ತಿರುವ ವರ್ಷ ನೋವ ಮರೆಸಿ

ಬರಲಿರುವ ವರ್ಷ ನಲಿವ ತರಿಸಿ

ತೊಡಕು ನೂರೆಂಟು ದೂರವಾಗಿ

ಬದುಕಿನ ಬಂಡಿ ಸುಖವಾಗಿ ಸಾಗಲಿ

ಎಂದು ವ್ಯಯ ನಾಮ ಸಂವತ್ಸರದ ಯುಗಾದಿಯಂದು

ಕರುನಾಡ ಜನತೆಗೆಶುಭಾರೈಸುವೆ.

ಅರಳಿ ನಗುವ ಚೈತ್ರದ ಹಾಗೆ

ಕುಹು ಕುಹು ಕೊರಳ ದನಿಯ ಹಾಗೆ

ಅನು ದಿನವೂ ಪ್ರಜ್ವಲಿಸುವಉಷೆಯ ಹಾಗೆ

ಕರುನಾಡ ಜನರ ಬದುಕು ಪ್ರಜ್ವಲಿಸಲೆಂದು

ವ್ಯಯ ನಾಮ ಸಂವತ್ಸರದ ಯುಗಾದಿಯಂದು ಶುಭಾರೈಸುವೆ.

*ಆಶಯ*

ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ದಾಹ ತಣಿಸುವ ತಂಪು ಪಾನಿಯವಾಗಲಿ

ಅನ್ನವಿಲ್ಲದೆ ಅಸಿದು ಕೃಷವಾದ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ಮೃಷ್ಟಾನ್ನವಾಗಲಿ ಬೇಸರದಿ ಬಸವಳಿದ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ಸುಮದುರ ಸಂಗೀತ ರಂಜನೆಯಾಗಿ ಬರಲಿ

ವ್ಯಯ ನಾಮ ಸಂವತ್ಸರದ ಯುಗಾದಿಯು ಎಂಬ ಶುಭಾರೈಕೆ.

*ಯುಗಾದಿ*

ಬಂತು ಯುಗಾದಿ ಮನೆ ಮನೆಗೆ

ತುಂಬಿ ತಳಿರು ತೋರಣ ಹೊಸ್ತಿಲಿಗೆ

ಬಣ್ಣ ಬಣ್ಣದ ರಂಗವಲ್ಲಿಮುಂಬಾಗಿಲಿಗೆ

ಅಬ್ಯಂಜನ ಸ್ನಾನ ಜಿಡ್ದು ಹಿಡಿದ ಮೈ ಮನಗಳಿಗೆ

ಸಿಹಿ ಬೆಲ್ಲ ಕಹಿ ಬೇವುಎಲ್ಲ ನಾಲಿಗೆಗೆ

ನೋವು ನಲಿವು ಸಮ ಪಾಲು ಎಲ್ಲರ ಬಾಳ್ವೆಗೆ

ಎಲೆ ಉದುರಿ ಮರಚಿಗುರಿ ಚೈತ್ರ ವಾಯ್ತು ಜಗಕೆ

ಮೈತೊಳೆದು ಮಡಿಯುಟ್ಟು ಬೇವು ಬೆಲ್ಲತಿಂದರಾಯ್ತುಯುಗಾದಿ ಜನಕೆ.

-ಕೃಷ್ಣಮೊರ್ತಿ ಅಜ್ಜಹಳ್ಳಿಬಿ ಎಂ ಎಸ್ ಸಿ ಇ ಬೆಂಗಳೂರು-೧೯