ಸಮಾಗಮ
ಕವನ
ಬಾನಂಗಳದ ತುಂಬಾ ಬೆಳ್ಳಿಯ ನಕ್ಷತ್ರ
ಕಣ್ಮನ ಸೆಳೆಯುವ ಮಿನುಗುವ ಚಿತ್ರ
ಸುಂದರ ಚಂದ್ರಮ ನಸು ನಗೆಯಲ್ಲಿ
ಬೀರಿದ ತಂಪನು ನವ ಬಗೆಯಲ್ಲಿ.
ನಸು ಬೆಳಕಲಿ ಇಣುಕುವ ಚಂದ್ರಮನು
ತರುಲತೆಗಳಿಗೆಲ್ಲಾ ಹರುಷವ ತಂದವನು
ರಂಗೋಲಿಯ ರಂಗದು ಎಲೆ ಎಲೆಯಲ್ಲಿ
ಮಿನುಗುತ ಬೆಳಗುತ ಬೆಳ್ಳಿಯ ಹೊಳಪಿನಲಿ.
ಭೂರಮೆ ಮಡಿಲಲಿ ಬಾನಂಗಳದ ಬೆಳಕು
ಹರಡಿದೆ ಇರುಳಿಗೆ ಚೈತನ್ಯದ ಬಿಳುಪು
ಮುಂಜಾವಿನ ಬೆಳಕಿಗೆ ಕಾದಿದೆ ನಸುಕು
ಮಿನುಗುವ ತಾರೆಯು ತೂರಿದೆ ಹೊಳಪು.
ಇರುಳ ದು ಸರಿದಿದೆ, ಬೆಳಕ ದು ಮೂಡಿದೆ
ನಕ್ಷತ್ರ ತಾರೆಗಳೆಲ್ಲವು ಮೆಲ್ಲನೆ ತೆರಳಿದೆ
ರವಿ ಕಿರಣವು ಬೀರಿದೆ ಬೆಳಕನು ಎಲ್ಲೆಡೆ
ಹಕ್ಕಿಯ ಗಾನವು ಬಾನೆಲ್ಲಡೆ ಉಲಿದಿದೆ.!
ಕಾಲಚಕ್ರದ ಪರಿಕ್ರಮಣದಲ್ಲಿ ನಮ್ಮಯ ಮಡಿಲು
ಇರುಳು ಸರಿಯಲು ಬೆಳಕದು ಮೂಡಲು
ಸೃಷ್ಟಿಯ ಸೊಬಗಿನ ನಾವೀನ್ಯದ ಆಟವು
ಅನುದಿನ ಕ್ರಿಯೆಯಲಿ ಬಾಳಿಗೆ ಪಾಠವು.!
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್