ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು !

ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು !

೧೯೯೨ರಿಂದಲೇ ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ ೩ ‘ವಿಶ್ವ ವಿಕಲಚೇತನರ ದಿನ’ ಎಂದು ಘೋಷಿಸಲ್ಪಟ್ಟಿತು. ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು, ಸುಸ್ಥಿರ ಸಮಾಜ ನಿರ್ಮಾಣವೇ ಇದರ ಗುರಿ. ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡುವುದು, ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಪ್ರೋತ್ಸಾಹಕಾರಿ ಸಹಕಾರಗಳು, ಜಾಗೃತಿ ಮೂಡಿಸುವ ಅಭಿಯಾನಗಳು ಸಿಗುವಂತೆ ನೋಡಿಕೊಳ್ಳಬೇಕು.ವಿಶೇಷ ಅಗತ್ಯದವರಿಗೆ ಕೃತಕ ಅಂಗಗಳ ಜೋಡಿಸುವಿಕೆ, ಶ್ರವಣ ಸಾಧನ, ಗಾಲಿಕುರ್ಚಿ, ವಾಕರ್ ನೀಡುವುದು ಇದೆ. ಕೆಲವೆಡೆ ರೋಬೋಟ್ ಕೈಕಾಲುಗಳ ಜೋಡಣೆ ಸಹ ವ್ಯವಸ್ಥೆಯಿದೆಯಂತೆ. ಶಾಲಾ ಪರೀಕ್ಷೆಗಳಲ್ಲಿ ಕೆಲವೊಂದು ವಿನಾಯಿತಿಗಳಿವೆ. ಅವರಿಗಿರುವ ಸಕಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವಿರುತ್ತದೆ.

ನನ್ನ ಓರ್ವ ವಿದ್ಯಾರ್ಥಿ 'ನಿನ್ನ ಹೆಸರೇನು ಮಗ' ಕೇಳಿದಾಗ ತಲೆ ಅಡಿಗೆ ಹಾಕುತ್ತಿದ್ದವ, ನಮ್ಮ ಶಾಲೆಯಿಂದ ಐದನೇ ತರಗತಿಯಾಗಿ ಹೋಗುವಾಗ ಮಾತನಾಡುತ್ತಿದ್ದ. ಅವನ ಮುಖದ ಎದುರು ನಿಂತು ಅಭಿನಯ, ಸಂಜ್ಞೆ ಮೂಲಕ ಕಲಿಕಾ ಚಟುವಟಿಕೆ ನಡೆಸುತ್ತಿದ್ದೆವು. ಅವನಿಗೆ ೯೦% ಕಿವಿ ಕೇಳುತ್ತಿರಲಿಲ್ಲ. ಜಿಲ್ಲಾ ಮಟ್ಟದವರೆಗೆ ಬಹುಮಾನಗಳನ್ನು ಗಳಿಸುತ್ತಿದ್ದ. ಪೋಷಕರ ಸಹಕಾರವೂ ಇತ್ತು. ಈಗ ಆ ಹುಡುಗ ಪಿ.ಯು.ಸಿ.,ರೂ ೩೦೦೦ ವಿಶೇಷ ವೇತನ ಪ್ರತಿ ತಿಂಗಳೂ ಸಿಗುತ್ತದೆ. ಸರಕಾರದಿಂದ ಎಂದು ಹೇಳಿದ. ಆರಂಭದಲ್ಲಿ ರೂ ೫೦೦, ಅನಂತರ ೧೦೦೦ರೂ ಇತ್ತು. ನಾವು ಹೆಚ್ಚಿನ ಮುತುವರ್ಜಿ ವಹಿಸಬೇಕು ಅಷ್ಟೆ.

ಎಲ್ಲಾ ಶಾಲೆ ಕಾಲೇಜುಗಳಲ್ಲಿ ಇಳಿಜಾರು ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ವಿಶಿಷ್ಟ ಗುರುತಿನ ಚೀಟಿ, ಪ್ರೋತ್ಸಾಹ ಧನ, ಆರೈಕೆ ಭತ್ಯೆ, ವಾಕ್ ತರಬೇತಿಗಳು, ನಿರುದ್ಯೋಗ ಭತ್ಯೆ, ಪುನರ್ವಸತಿ ಕೇಂದ್ರಗಳ ಸ್ಥಾಪನೆ, ವಿಮಾ ಯೋಜನೆ, ವೃತ್ತಿ ತರಬೇತಿ, ಸ್ವಯಂ ಉದ್ಯೋಗಕ್ಕೆ ನೆರವು ಈ ರೀತಿ ಹತ್ತು ಹಲವು ಯೋಜನೆಗಳು ಇಲಾಖೆಯಿಂದ ಸಿಗುತ್ತಿದೆ. ಧ್ಯೇಯತೆ ‘ಎಲ್ಲರನ್ನೂ ಒಳಗೊಂಡ ಸಮಾಜದ ನಿರ್ಮಾಣಕ್ಕೆ ಪರಿವರ್ತಕ ಪರಿಹಾರಗಳು, ಸುಗಮ್ಯ ಮತ್ತು ಸಮಾನ ಜಗತ್ತನ್ನು ಉತ್ತೇಜಿಸುವಲ್ಲಿ ಆವಿಷ್ಕಾರದ ಪಾತ್ರ’. ಒಟ್ಟಿನಲ್ಲಿ ದೇಶದ ಪ್ರಜೆಗಳೆಲ್ಲರೂ ಸಮಾನರು, ಸೌಲಭ್ಯ ವಂಚಿತರಾಗಬಾರದು. ಅವರೂ ಎಲ್ಲರಂತೆ ಜೀವನ ನಡೆಸಬೇಕು. ಸಾಧಕರಿಗೆ ಪುರಸ್ಕಾರ, ಶ್ರಮ ವಹಿಸುವ ಸಂಘಸಂಸ್ಥೆಗಳಿಗೆ ಅಭಿನಂದನೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಸಾಮಾಜಿಕ ಭದ್ರತೆ, ಸಬಲೀಕರಣದೊಂದಿಗೆ ಮುಖ್ಯವಾಹಿನಿಗೆ ತರಲು ಪ್ರತಿಯೋರ್ವರೂ ಇಲಾಖೆಯೊಂದಿಗೆ ಕೈಜೋಡಿಸಬೇಕು.

-ರತ್ನಾ ಕೆ ಭಟ್,ತಲಂಜೇರಿ

(ಸಂಗ್ರಹ:ವಿವಿಧ ಮೂಲಗಳಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ