ಸಮಾಜಮುಖಿ ಜಗತ್ತು

ಸಮಾಜಮುಖಿ ಜಗತ್ತು

ಕೋಟ್ಯಾಧಿಪತಿ ಮಗನೊಬ್ಬನು ಆಸ್ಪತ್ರೆಗೆ ಓಡಿ ಬಂದು ಡಾಕ್ಟರ್ ಹತ್ತಿರ, ‘ಏನಾಯ್ತು ಏನಾಯ್ತು ಡಾಕ್ಟರ್? ಈಗ ನನ್ನ ತಾಯಿ ಹೇಗಿದ್ದಾರೆ? ನನಗೆ ತುಂಬಾ ದುಃಖ ಮತ್ತು ಭಯವಾಗುತ್ತದೆ. ಈಗ ಪರವಾಗಿಲ್ಲ ಅಲ್ವಾ ಡಾಕ್ಟರ್?’

ಡಾಕ್ಟರ್.... ‘ನೀವೇನು ಚಿಂತಿಸಬೇಡಿರಿ. ನಿಮ್ಮ ತಾಯಿಯವರಿಗೆ ಸಣ್ಣದಾಗಿ ಸ್ಟ್ರೋಕ್ ಹೊಡೆದಿತ್ತು. ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ ಕಾರಣ ಈಗ ಅವರು ಅಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೊರಗೆ ಸೋಫಾದಲ್ಲಿ ಕುಳಿತ ವೃದ್ದ ದಂಪತಿಗಳು ನಿಮ್ಮ ತಾಯಿಯವರನ್ನು ಸರಿಯಾದ ಸಮಯಕ್ಕೆ ಇಲ್ಲಿ ಕರೆದುಕೊಂಡು ಬಂದು ಸೇರಿಸದೇ ಇರುತ್ತಿದ್ದರೆ ನಿಮ್ಮ ತಾಯಿಯವರು ಉಳಿಯುತ್ತಿರಲಿಲ್ಲ.

ಮಗನು ಕೂಡಲೇ ಆ ವೃದ್ಧ ದಂಪತಿಗಳು ಇರುವಲ್ಲಿಗೆ ಹೋಗಿ.... ‘ಧನ್ಯವಾದಗಳು. ವಂದನೆಗಳು. ಆದರೆ ನಿಮ್ಮ

ಪರಿಚಯ ನನಗಾಗಲಿಲ್ಲ. ಎಂದ.

‘ಪರಿಚಯ ನಿಮ್ಮದೂ ನಮಗಾಗಲಿಲ್ಲ’ ಎಂದು ಹೇಳಿದರು ಆ ಅಜ್ಜಿ. ಮಗನಿಗೆ ಆಶ್ಚರ್ಯ ವಾಗಿ ಕೇಳಿದ ‘ನನ್ನ ತಾಯಿ ನಿಮಗೆ ಹೇಗೆ ಗೊತ್ತು?’

ವೃದ್ದ ಪತಿಯು ಉತ್ತರಿಸಿದರು.... ‘ನಿನ್ನ ತಾಯಿ ನಮ್ಮ ವಾಟ್ಸಾಪ್ ಗ್ರೂಪಿನ ಸದಸ್ಯರು. ಗ್ರೂಪಿನ ಹೆಸರು 60+. ಸದಸ್ಯರೆಲ್ಲರೂ 60 ವರ್ಷ ದಾಟಿದವರೇ. ನೆರೆಕರೆಯವರು, ಸಂಬಂಧಿಕರು, ಮಿತ್ರರು 60 ದಾಟಿದ ಎಲ್ಲರನ್ನೂ ಗ್ರೂಪಿಗೆ ಸೇರಿಸುವುದು ಎಲ್ಲ ಸದಸ್ಯರ ಕರ್ತವ್ಯ ವಾಗಿದೆ. 

‘ನಮ್ಮ ಬಳಗದಲ್ಲಿ ಪ್ರತಿಯೊಬ್ಬರೂ ಬೆಳಿಗ್ಗೆ Good morning ಮತ್ತು ಸಂಜೆ Good night ಕಳಿಸುವುದು ಕಡ್ಡಾಯವಾಗಿದೆ. ಮತ್ತು ಚಾಟಿಂಗ್ ಸಮಾಚಾರ ವಿತರಣೆ ಇನ್ನೂ ಮುಂತಾದುವುಗಳನ್ನೂ ಮಾಡಬಹುದು. ಬೇರೆ ಬಳಗದಲ್ಲಿ ಶುಭಾಶಯಗಳನ್ನು ಕೋರುವ ಸಂದೇಶಗಳಿಗೆ ನಿಷೇಧವಿರುತ್ತದೆ. ಆದರೆ ನಮ್ಮ ಬಳಗದಲ್ಲಿ ಅದು ಕಡ್ಡಾಯ. ಏಕೆಂದರೆ

ಯಾರೊಬ್ಬ ಸದಸ್ಯರಿಂದಲಾದರೂ ಆ ಸಂದೇಶ ನಿಯಮಿತವಾಗಿ ಬರದಿದ್ದರೆ ಅವರ ಪಕ್ಕದ ಸದಸ್ಯರು ಅವರ ಮನೆಗೆ ಭೇಟಿಕೊಡಬೇಕಾದದ್ದು ಗ್ರೂಪಿನ ಸೌಜನ್ಯದ ನಿಯಮವಾಗಿದೆ.’

‘ಎರಡು ದಿನಗಳಿಂದ ನಿನ್ನ ತಾಯಿಯವರಿಂದ ಗ್ರೂಪಿಗೆ ಸಂದೇಶ ಬರದಿದ್ದ ಕಾರಣ ಈಗ ನಾವಿಬ್ಬರೂ ಇಲ್ಲಿ ಇದ್ದೇವೆ. ಹಣ ಮತ್ತು ಹಣದಿಂದ ಸಿಗುವ ಸೌಕರ್ಯಗಳನ್ನು ಮಾತ್ರ ನೀನು ನಿನ್ನ ತಾಯಿಯವರಿಗೆ ಓದಗಿಸಿ ಕೊಟ್ಟರೆ ಸಾಲದು. ವೃದ್ದಾಪ್ಯದಲ್ಲಿ ಮಾತನಾಡಲು ಪ್ರತಿಯೊಬ್ಬರಿಗೂ ಬಾಳಸಂಗಾತಿ ಅಥವಾ ಕುಟುಂಬ ಸದಸ್ಯರು ಬೇಕಾಗುತ್ತಾರೆ. ನೀನು ಇದಕ್ಕಿಂತ ಎಷ್ಟು ಕಾಲ ಹಿಂದೆ ನಿನ್ನ ತಾಯಿಯವರನ್ನು ಭೇಟಿಯಾಗಿದ್ದೆ?’

ಮಗನಿಗೆ ತಕ್ಷಣಕ್ಕೆ ಎನೂ ಉತ್ತರಿಸಲಾಗಲಿಲ್ಲಾ.

‘ಈ ಕಾರಣಕ್ಕಾಗಿಯೇ ಈ 60+ ಗ್ರೂಪನ್ನು ನಾವು ಪ್ರಾರಂಭಿಸಿದ್ದೇವೆ. ಇಲ್ಲದಿದ್ದಲ್ಲಿ 60 ದಾಟಿದ ನಮ್ಮಂಥಾ ಒಂಟಿ ವೃದ್ದರು ಗೋಡೆ, ಕಿಟಕಿ, ಟಿವಿಗಳ ಹತ್ತಿರ ಮಾತನಾಡಲು ಸಾಧ್ಯವೇ?...’ಎಂದು ಹೇಳುತ್ತಾ ವೃದ್ದ ದಂಪತಿಗಳು ಹೊರ ನಡೆದರು. ನೆನಪಿಡಿ, ಸ್ನೇಹಿತರೇ ಹೇಗೆ ನಿಮ್ಮ ಬಾಲ್ಯದ ವಯಸ್ಸು ಯೌವನದ ಕಡೆಗೆ ಓಡುತ್ತಿರುತ್ತದೆಯೋ ಅದೇ ರೀತಿ ಅದೇ ಸಮಯಕ್ಕೆ ನಿಮ್ಮ ಹೆತ್ತವರ ವಯಸ್ಸು ವೃಧ್ದಾಪ್ಯದ ಕಡೆಗೆ ಓಡುತ್ತಿರುತ್ತದೆ. ಪಕ್ಕದ ಇನ್ನೊಂದು ಆಸನದಲ್ಲಿ ಕುಳಿತಿದ್ದ ಇನ್ನೊಬ್ಬ ತಾತ ಈ ಮಗನ ಕಿವಿಯ ಹತ್ತಿರ ಬಂದು ಹೇಳಿದ. ‘ನಿನ್ನ ಕೋಟ್ಯಾನುಕೋಟಿ ಹಣ ಈಗ ತರಗೆಲೆಗೆ ಸಮ. ಕೋಟ್ಯಾಧಿಪತಿ ತರುಣ ಮಗ ಸಿಡಿಲು ಹೊಡೆದವರಂತೆ ನಿಂತಲ್ಲೇ ನಿಂತಿದ್ದ.

ಸ್ನೇಹಿತರೇ, ಸಾಮಾಜಿಕರಾಗಿರಿ. ಸಮಾಜ ಮುಖಿಗಳಾಗಿರಿ. ಸಮಾಜದಲ್ಲಿ ಬೆರೆತವರಾಗಿರಿ. ಸಹ ಕುಟುಂಬಿಕರಾಗಿರಿ.

 

(ವಾಟ್ಸಾಪ್ ಬಳಗದಿಂದ ಸಂಗ್ರಹಿತ)