ಸಮಾಜ ಸೇವಕ

ಸಮಾಜ ಸೇವಕ

ಬರಹ

ಸಮಾಜ ಸೇವೆ ಮಾಡುವುದೂ ಒಂದು ವಿದ್ಯೆ
ಮನೆ ಮನಗಳಲ್ಲೂ ಕಾಣುವ ಇದೊಂದು ಮಿಥ್ಯೆ

ನಾನು ಹೇಳ ಹೊರಟಿಹೆನೊಂದು ಕಥಾನಕ
ಎಲ್ಲರೂ ಅದುರಿಸ ಬೇಕಿರುವ ಭಯಾನಕ
ಇವನಾಗ ಹೊರಟಿಹ ಸಮಾಜ ಸೇವಕ
ಪರಿಸರದಿ ಆಗುವನೇ ಸಮಾಜಕೆ ಪೂರಕ

ಎಂಥದು ಇವನು ಬೆಳೆಯುತಿಹ ಪರಿಸರ
ಸಿಹಿಯೆಂದು ನಂಬಿದುದೆಲ್ಲವೂ ಕಹಿಯ ಸರ
ಗಾಣದೆತ್ತಿನಂತೆ ದುಡಿಯುವುದೇ ಅಪ್ಪನ ಕಾಯಕ
ಅಮ್ಮನಆದರೋ ಮನೆಯ ಒಂದಾಗಿಸುವ ದ್ಯೋತಕ

ಅಣ್ಣ ಅಕ್ಕಂದಿರುಗಳು ಮುಳುಗಿಹ ತಮ್ಮದೇ ಸಂಸಾರ
ತಮ್ಮ ತಂಗಿಯರಿಗೆ ಓದು ಬರಹದ್ದೇ ವ್ಯವಹಾರ
ಇವರುಗಳ ಮಧ್ಯೆ ಸಿಲುಕಿಹ ಅಡಕೊತ್ತಿಯ ಅಡಕೆಯಂತೆ
ಈ ಪರಿಧಿಯಿಂದಾಚೆಗ ಬರುವುದೇ ಸಮಾಜಕೆ ಈ ಬೊಂತೆ

ಮನೆಯ ಓಳಗಣ ಕುರುಕ್ಷೇತ್ರ ಎದುರಿಸಬಲ್ಲನೇ
ಕೆಲಸವಿಲ್ಲದೇ ಸಮಾಜದಿ ನಿಲ್ಲಬಲ್ಲನೇ
ಯಾರಿಗೂ ಬೇಡಾಗಿರುವ ಮನೆಯ ಮಧ್ಯಮ
ಇವನೇ ನಮ್ಮೆಲ್ಲರ ಮುಂದಿನ ಪುರುಷೋತ್ತಮ