ಸಮಾಧಿ
ಕವನ
ಯಾರೇ ಆಗಲಿ
ಇನ್ನೊಬ್ಬರ ಬಗ್ಗೆ
ಅವರ ಕೃತಿಗಳ ಬಗ್ಗೆ
ಮಾಡುವ ವಿಮರ್ಶೆ
ವಿವೇಕದಿಂದ ಕೂಡಿರಲಿ
ಇಲ್ಲದಿದ್ದರೆ ಕೃತಿಕಾರನ
ಕೃತಿ ಮತ್ತು ಆತ, ಜೀವಂತ
ಸಮಾಧಿಯಾದಂತೆ !
***
ಸದಾ
ನೆನಪುಗಳು
ಮಾರೆಮಾಚಲಿರುವುದಲ್ಲ
ಪುನರ್
ಪರಿಶೀಲಿಸಲಿರುವುದು !
***
ಯೋಗ
ಯೋಗಗಳಲ್ಲಿ
ಅನೇಕವಿದೆ
ಅದರಲ್ಲಿ
ನಿದ್ರಾಯೋಗವೂ
ಒಂದು !
***
ಸರಿ
ಊಟಕ್ಕೆ
ಉಪ್ಪಿನಕಾಯಿ
ಹಾಗಾದರೆ
ತಪ್ಪಿಗೆ ?
ನಾಗರಬೆತ್ತದ
ಪೆಟ್ಟು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್