ಸಮಾನತೆ

ಸಮಾನತೆ

ಕವನ

ಭಾರಿಸಿತು, ಭಾರಿಸಿತು, ಸಮಾನತೆಯ ಕರೆಗುಂಟೆ
ಕೇಳದೋ ಅಬ್ಬರದ ಕಾಂಚಾಣದ ಸಂತೆ
ಯಾಕಿಷ್ಟು ಕಿವುಡತನ?
ಯಾಕಿಷ್ಟು ಉದಾಸೀನ....

ಮಿನುಗುವಾ ತಾರೆಗಳು, ಹೊಳೆವ ಸೂರ್ಯನೆಡೆಯಿರುವಂತೆ
ಕಾಣದಾದವೋ ಚೇತನಗಳನೇಕ
ಹರಿಸದಾದವೋ ನೋಟಿನ ಹೊಳೆಯನ್ನ
ಕಾಣದಾದವೋ ಕೆಲಸದಾ ಬೆಳೆಯನ್ನ

ಒಕ್ಕಲಿಗರಿಗೆ ಮೆಕ್ಕಲ ಮಣ್ಣಿನಂತೆ
ಬಂದಿಹುದು ಹಿಂದುಳಿದವರಿಗೆ ಮೀಸಲಾತಿಗಳ ಕಂತೆ
ಮೆಕ್ಕಲ ಮಣ್ಣಿನಲ್ಲಿ ಪಚ್ಚೆ ಪೈರಿನಂತೆ
ಮೀಸಲಾತಿಯಲ್ಲ್ಹೊಳೆದ ಅನರ್ಘ್ಯ ರತ್ನಗಳಂತೆ ಕಂತೆ ಕಂತೆ

ಮಾಡುವೆವೊ ಅಂಬೇಡ್ಕರ್ ನ ಬಂಬಿಗಳನೇಕ
ಆಗುವವೋ ಸಾಲು ಸಾಲುಗಳ ಸಮೂಹ
ಬೆಳೆಸಿದವೋ ಪಯಣವಾ, ರಾಷ್ಟ್ರವನ್ಹೊತ್ತು
ಅಭಿವೃದ್ಧಿಯ ಪಥದಲ್ಲಿ, ಸಮೃದ್ಧಿಯ ದಿಶೆಯಲ್ಲಿ

ಮುಟ್ಟುವಾ ಛಲದಿಂದ ಪ್ರಗತಿಯಾ ಗುರಿಯೆಡೆಗೆ

Comments