ಸಮುದಾಯ ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ
"ಸಮುದಾಯ ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ" ಈ ಶೀರ್ಷಿಕೆಯೇ ಸೂಚಿಸುವಂತೆ ಗುಣಾತ್ಮಕ ಶಿಕ್ಷಣದ ಜವಾಬ್ದಾರಿ ಹಾಗೂ ಓಡೆತನ ಸಮುದಾಯದಾಗಿರಬೇಕು ಈ ಮೂಲಕ ಸಮುದಾಯವು ತನ್ನ ವ್ಯಾಪ್ತಿಯ ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ, ದಾಖಲಾದ ಎಲ್ಲಾ ಮಕ್ಕಳು ಶಾಲೆಯಲ್ಲಿ ಹಾಜರಿದ್ದು ಗುಣಾತ್ಮಕ ಶಿಕ್ಷಣವನ್ನು ಪಡೆಯುವುದನ್ನು ಸಮುದಾಯ ಖಚಿತಪಡಿಸಿಕೊಳ್ಳಬೇಕು ಎಂಬುದಾಗಿದೆ.
ಹಲವಾರು ಪ್ರಾದೇಶಿಕ ವಿಭಿನ್ನತೆ ಹಾಗೂ ವಿಬಿನ್ನ ಸಂಪ್ರದಾಯಗಳ ನಾಡಿನಲ್ಲಿ ಪ್ರಾದೇಶಿಕ ವಿಭಿನ್ನತೆ ಹಾಗೂ ಅಗತ್ಯತೆಗೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಸಮುದಾಯವು ಶಾಲೆಯಿಂದ ತಮ್ಮ ಮಕ್ಕಳು ಏನನ್ನು ಕಲಿಯಬೇಕು, ಮತ್ತು ಹೇಗೆ ಕಲಿಯಬೇಕು ಎಂದು ಚರ್ಚಿಸುವಂತಾಗಬೇಕು ಆಗ ಮಾತ್ರ ಸಮುದಾಯ ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ. ಇತ್ತಿಚೆಗೆ ಜಾರಿಗೆ ಬಂದ ಶಾಲೆಗಾಗಿ ನಾವೂ ನೀವೂ ಮತ್ತು ಸಮುದಾಯದತ್ತ ಶಾಲೆ ಕಾರ್ಯಕ್ರಮಗಳು ಸಮುದಾಯವನ್ನು ಶಾಲೆಯೆಡೆಗೆ ಕರೆ ತರುವ ಪ್ರಯತ್ನಗಳಾಗಿವೆ ಇದರಲ್ಲಿ ಶಾಲೆಗಾಗಿ ನಾವೂ ನೀವು ಕಾರ್ಯಕ್ರಮವು ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡರು ಹೆಚ್ಚು ಮೂಲಬೂತ ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಗಮನ ಹರಿಸದಂತಾಗಿದೆ. ಸಮುದಾಯದತ್ತ ಶಾಲೆ ಕೇವಲ ಹೆಸರಿಗೆ ಮಾತ್ರ ಆಗಿದೆ, ಸಮುದಾಯಕ್ಕೆ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಬಗ್ಗೆ ಇರುವ ಅಪೂರ್ಣ ಮಾಹಿತಿ ಕಾರ್ಯಕ್ರಮದ ಹಿನ್ನಡಗೆ ಕಾರಣವಾಗಿದೆ. ಸಮುದಾಯವು ಶಿಕ್ಷಣದಲ್ಲಿನ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳದ ಹೊರತು ಗುಣಾತ್ಮಕ ಶಿಕ್ಷಣ ಕನಸಾಗಿಯೇ ಉಳಿಯುತ್ತದೆ. ಇಲಾಖೆಯು ಕೂಡಾ ಶಿಕ್ಷಣ ಸುಧಾರಣೆಯಲ್ಲಿ ಹೆಚ್ಚು ಹೆಚ್ಚು ಸಮುದಾಯವನ್ನು ಪಾಲ್ಗೊಳ್ಳುವಂತೆ ಮಾಡಬೇಕು ಹಾಗೂ ಗುಣಾತ್ಮಕ ಶಿಕ್ಷಣದ ಜವಾಬ್ದಾರಿಯನ್ನು ಸಮುದಾಯವೇ ನಿಬಾಯಿಸುವಂತೆ ಮಾಡಬೇಕು. ಆಡಳಿತ ವಿಕೇಂದ್ರಿಕರಣದ ಮೂಲಕ ಸ್ಥಳಿಯ ಸಂಘ ಸಂಸ್ಥೆ ಹಾಗೂ ಸ್ಥಳೀಯ ಸರ್ಕಾರಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು, ಆಗ ಮಾತ್ರ ಸಮುದಾಯವು ಶಿಕ್ಷಣದಲ್ಲಿಯ ತನ್ನ ಪಾತ್ರವನ್ನು ನಿಬಾಯಿಸುವ ಮೂಲಕ ಗುಣಾತ್ಮಕ ಶಿಕ್ಷಣ ಓದಗಿಸಲು ಸಾಧ್ಯ.
ಪ್ರಾದೇಶಿಕ ವಿಭಿನ್ನತೆ ಹಾಗೂ ಅಲ್ಲಿಯ ಅಗತ್ಯತೆಗೆ ಅನುಗುಣವಾಗಿ ಪಠ್ಯಪುಸ್ತಕಗಳು ರಚನೆಯಾಗಬೇಕು, ಹಾಗೂ ಸ್ಥಳೀಯ ಹಂತದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಮತ್ತು ಸಂಘ ಸಂಸ್ಥೆ , ಶಿಕ್ಷಣ ತಜ್ಞರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳುವ ಮೂಲಕ ಅನುಭವ ಹಾಗೂ ಸಲಹೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಅವರಲ್ಲಿ ಈ ಕಾರ್ಯಕ್ರಮ ಹಾಗೂ ಯೋಜನೆಗಳು ನಮ್ಮದು ಎಂಬ ಮನೋಭಾವ ಮೂಡಿದಾಗ ಮಾತ್ರ ಶಿಕ್ಷಣ ಸುಧಾರಣೆ ಸಾಧ್ಯ ಹಾಗಾಗಿ ಗುಣಾತ್ಮಕ ಶಿಕ್ಷಣದಲ್ಲಿ ಸಮುದಾಯದ ಪಾತ್ರದ ಬಗೆಗೆ ಅರಿವು ನೀಡುವ ಜಾಗ್ಋತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಚರಣೆಯಲ್ಲಿ ಬರೆಬೇಕು ಆಗ ಮಾತ್ರ ಗುಣಾತ್ಮಕ ಶಿಕ್ಷಣವನ್ನು ಒದಗಿಸುವಲ್ಲಿ ಸಮುದಾಯ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯ.
Comments
ಉ: ಸಮುದಾಯ ಓಡೆತನದ ಮೂಲಕ ಗುಣಾತ್ಮಕ ಶಿಕ್ಷಣ