ಸರ್ಕಾರದಿಂದಲೇ ಟ್ಯಾಂಕರ್ ನೀರು ಪೂರೈಕೆ ಸ್ವಾಗತಾರ್ಹ

ಈ ವರ್ಷದ ಬೇಸಿಗೆ ದಿನಗಳು ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದುವರೆಗೆ ಅಗತ್ಯ ಕುಡಿಯುವ ನೀರಿನ ಸೌಲಭ್ಯ ವಂಚಿತರು, ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಇದೀಗ ಸ್ವತಃ ರಾಜ್ಯ ಸರ್ಕಾರವೇ ಅಗ್ಗದ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲು ಮುಂದಾಗಿದೆ. ಈ ಕುರಿತ ಯೋಜನೆಗೆ ಶುಕ್ರವಾರ ಚಾಲನೆ ಕೂಡಾ ಸಿಕ್ಕಿದೆ. ಇದು ಬಿರುಬೇಸಿಗೆಯ ದಿನಗಳಲ್ಲಿ ಖಾಸಗಿ ಟ್ಯಾಂಕರ್‌ಗಳ ಮಾಫಿಯಾಕ್ಕೆ ಸಿಕ್ಕಿ ನಲುಗುತ್ತಿದ್ದ ಜನರನ್ನು ಆ ಸಮಸ್ಯೆಯಿಂದ ಪಾರುಮಾಡಲಿದೆ. ಇದರ ಜೊತೆಗೆ ಸಣ್ಣಮನೆಗಳನ್ನು ಹೊಂದಿರುವವರು ಕೇವಲ ೧೦೦೦ ರೂ ಸಲ್ಲಿಸಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಪಡೆಯುವ ಯೋಜನೆಗೆ ಕೂಡಾ ಚಾಲನೆ ನೀಡಲಾಗಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದು.
ಬೆಂಗಳೂರಿನಲ್ಲಿ ಅಗತ್ಯವಿರುವ ಮನೆಗಳಿಗೆ ಸರ್ಕಾರ ಶುದ್ಧ ಕುಡಿಯುವ ನೀರಿನ ಪೂರೈಕೆಯ ಯೋಜನೆ ಜಾರಿಗೊಳಿಸಿದೆ. ರಾಜ್ಯದ ಇತರೆ ಪ್ರದೇಶಗಳಿಗೂ ವಿಸ್ತರಣೆಯಾಗುವಂತೆ ಸರ್ಕಾರ ಗಮನ ಹರಿಸಬೇಕು. ಇದುವರೆಗೂ ಬೇಸಿಗೆ ದಿನಗಳಲ್ಲಿ ಬೆಂಗಳೂರಿನ ಹಲವು ಪ್ರದೇಶಗಳ ಅಪಾರ್ಟ್ ಮೆಂಟ್ ಗಳು ಸೇರಿದಂತೆ ಮನೆಗಳ ಮಾಲೀಕರು ದುಬಾರಿ ಹಣ ತೆತ್ತು ಟ್ಯಾಂಕರ್ ದರದಲ್ಲಿ ಪೂರೈಕೆ ಮಾಡಲು ನಿರ್ಧರಿಸುವುದು ಸ್ವಾಗತಾರ್ಹ ಬೆಳವಣಿಗೆ. ಇಂಥ ಯೋಜನೆ ದೇಶದಲ್ಲೇ ಮೊದಲು ಎಂಬುದು ಗಮನಾರ್ಹ. ಜೊತೆಗೆ ಸರ್ಕಾರ ಇಂಥ ಯೋಜನೆಯನ್ನು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ಇತರೆ ನಗರಗಳಿಗೂ ವಿಸ್ತರಿಸುವ ಬಗ್ಗೆ ಗಮನ ಹರಿಸಬೇಕು. ಸ್ವಚ್ಚ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಹಕ್ಕು. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ ಈ ಟ್ಯಾಂಕರ್ ಮೂಲಕ ಮನೆಮನೆಗೂ ಶುದ್ದ ಕುಡಿಯುವ ನೀರಿನ ಯೋಜನೆ ರೂಪಿಸಿದೆ. ಆದರೆ ಬಹುತೇಕ ಯೋಜನೆಗಳು ಜಾರಿಯ ಬಳಿಕ ನಾನಾ ಕಾರಣದಿಂದ ಹಾದಿತಪ್ಪುವ ಪ್ರಸಂಗಗಳು ಹೆಚ್ಚು. ಹೀಗಾಗಿ ಈ ಯೋಜನೆ ಅತ್ತ ಸಾಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ. ನೀರು ಖರೀದಿ ಮಾಡಬೇಕಿತ್ತು. ಬುಕ್ ಮಾಡಿದರೂ ಸಮಯಕ್ಕೆ ನೀರು ಸಿಗದೇ, ಸಿಕ್ಕರೂ ಗುಣಮಟ್ಟದ ಅಭಾವ ಮತ್ತು ದುಬಾರಿ ದರದ ಕಾರಣ ಭಾರೀ ಸಮಸ್ಯೆ ಎದುರಿಸಬೇಕಿತ್ತು. ಆದರೆ ಇದೀಗ ಜನರ ಸಮಸ್ಯೆ ಅರಿತು ಸರ್ಕಾರವೇ ಗುಣಮಟ್ಟದ ಕಾವೇರಿ ನೀರನ್ನು ಮನೆಮನೆಗೂ ಅಗ್ಗದ ನೀರನ್ನು ಸರಬರಾಜು ಮಾಡುವತ್ತ ಗಮನಹರಿಸಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೦-೦೫-೨೦೨೫
ಚಿತ್ರ ಕೃಪೆ: ಇಂಟರ್ನೆಟ್ ತಾಣ