ಸರ್ಕಾರಿ ಪ್ರಯೋಗ ಶಾಲೆಗೆ ಶೈಕ್ಷಣಿಕ ವ್ಯವಸ್ಥೆ ಬಲಿ
- ಮಹೇಶ ಕಲಾಲ
ಜಗತ್ತು ಶರವೇಗದಲ್ಲಿ ಸ್ಪರ್ಧೆಯಲ್ಲಿದೆ. ಜಗತ್ತಿನ ಪ್ರತಿಯೊಂದು ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡುತ್ತಿವೆ. ಅವುಗಳಿಗೆ ಸ್ಪಷ್ಟ ಉದಾಹರಣೆ ಜಪಾನ್, ಚೀನಾ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಅಭಿವೃದ್ಧಿಯನ್ನ ಗಮನಿಸಬಹುದು.
ಹಲವು ರಾಷ್ಟ್ರಗಳು ಈಗ ಆನ್ಲೈನ್ ಶಿಕ್ಷಣದಲ್ಲಿ ಸಾಕಷ್ಟು ಸುದಾರಣೆ ತಂದುಕೊಂಡುದ್ದಲ್ಲದೆ. ರಾಕೆಟ್ ವೇಗದಲ್ಲಿ ಇಂಟರನೆಟ್ ವ್ಯವಸ್ಥೆಯನ್ನ ಅಳವಡಿಸಿಕೊಂಡು ಶಿಕ್ಷಣ ಕಲಿಯುವಿಕೆಯನ್ನ ಶಾಲೆ ಎಂಬ ಪ್ರಪಂಚದಿಂದ ಹೊರತಂದಿವೆ. ಆದರೆ ಭಾರತ ಮಾತ್ರ ಇನ್ನು ಆ ವ್ಯವಸ್ಥೆಯಿಂದ ಹೊರಬರಲು ಹಲವು ದಶಕಗಳೇ ಬೇಕಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇಲ್ಲಿ ಇನ್ನು ಹಲವು ಶಾಲೆಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ ಅಂತಹುದರಲ್ಲಿ ಇಂಟರ್ನೆಟ್ ಅಳವಡಿಸುವಿಕೆ ದೂರದ ಮಾತಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆ ಇನ್ನು ಶಾಲೆ ಎಂಬ ಬಾವಿಯನ್ನ ನಿರ್ಮಿಸಿಕೊಂಡು ಅದೇ ದೊಡ್ಡ ಪ್ರಪಂಚವೆನ್ನುವಂತೆ ಅದಕ್ಕೆ ಮೂಲಸೌಕರ್ಯ ಕಲ್ಪಿಸಲು ಒದ್ದಾಡುತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ತಮ್ಮ ಮಕ್ಕಳಿಗೆ ಮನೆಯಲ್ಲೆ ಕುಳಿತು ಶಿಕ್ಷಣ ಕಲಿಯುವಿಕೆಯೊಂದಿಗೆ ಜಗತ್ತಿನ ವೇಗಕ್ಕೆ ಮಕ್ಕಳ ಬುದ್ದಿ ಶಕ್ತಿ ಮತ್ತು ಕೌಶಲವನ್ನು ವೃದ್ಧಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತಿವೆ ಈಗ ಹೇಳಿ ನಾವು ಜಗತ್ತಿನ ಶೈಕ್ಷಣಿಕ ವೇಗಕ್ಕೆ ಸಾಗಲು ಈ ಬಾವಿ ಎಂಬ ಶಿಕ್ಷಣ ಕೇಂದ್ರಗಳಿಂದ ಹೊರಬರದೆ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಸಾಧ್ಯವಾ!
ನಮ್ಮ ದೇಶದಲ್ಲಿ ಇನ್ನು ಶೇ.50ರಷ್ಟು ಹಳ್ಳಿಗಳಿಗೆ 2ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ ಜಗತ್ತು 5ಜಿ.ಜತೆಗೆ ಇನ್ನು ಉನ್ನತ ತಂತ್ರಜ್ಞಾನದಿಂದ ವೇಗ ಹೆಚ್ಚಿಸಿಕೊಳ್ಳುವುದರತ್ತ ಯೋಚಿಸುತ್ತಿದೆ. ಇನ್ನು ಶೈಕ್ಷಣಿಕ ವ್ಯವಸ್ಥೆಗೆ ಬರೋಣ. ಜಗತ್ತಿನ ಹಲವು ರಾಷ್ಟ್ರಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಉನ್ನತ ತಂತ್ರಜ್ಞಾನ ತರಲು ಯೋಚಿಸುತ್ತಿದ್ದರೆ ಭಾರತದಲ್ಲಿ ಶೇ.90ರಷ್ಟು ಶಾಲೆಗಳಿಗೆ ಇನ್ನು ಮೂಲಸೌಕರ್ಯ ಕಲ್ಪಿಸಲಾಗುತ್ತಿಲ್ಲ. ಅಲ್ಲಿ ಶುದ್ಧ ಕುಡಿವ ನೀರು, ವಿದ್ಯುತ್, ಮಕ್ಕಳಿಗೆ ಕುಳಿತು ಕೊಳ್ಳಲು ಕೋಣೆ ಕೂಡ ನಿರ್ಮಿಸಲಾಗಿಲ್ಲ. ಶೌಚಾಲಯವಂತು ಅದು ಕನಸಿನ ಮಾತು. ಸರ್ಕಾರ ಛಾಪೆ ಮೇಲೆ ಸಂಚರಿಸಿದರೆ ವ್ಯವಸ್ಥೆ ರಂಗೋಲಿ ಕೆಳಗೆ ಸಂಚರಿಸುತ್ತಿದೆ ಎನ್ನುವಂತೆ ಕೆಲವೊಂದು ಶಾಲೆಗಳಿಗೆ ಶೌಚಾಲಯ ನಿರ್ಮಿಸಿದರೆ ಅಲ್ಲಿ ನೀರಿಲ್ಲ, ಶೌಚಾಲಯವಂತು ನಿರ್ಮಿಸಲಾಗುತ್ತದೆ. ಆದರೆ ಅಲ್ಲಿ ನೀರು ಕೊಡದಿದ್ದರೆ ಹೇಗೆ ? ಶೌಚಾಲಯವೆಂದರೆ ಅದು ಉಪಯೋಗಿಸಬೇಕಲ್ಲವೇ. ಒಂದು ವೇಳೆ ಉಪಯೋಗಿಸಿದರೆ ಅದಕ್ಕೆ ನೀರು ಎಲ್ಲಿಂದ ತರಬೇಕು. ಬಿಸಿಯೂಟ ನೀಡಿದ ಸರ್ಕಾರ ಎಷ್ಟೋ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸದ್ದರಿಂದ ಅದು ಕೂಡ ವಿಫಲವಾಗುತ್ತಿದೆ ಎನ್ನುವ ಆರೋಪ ಇನ್ನು ದೂರವಾಗಿಲ್ಲ . ಆದರೆ ಶೌಚಾಲಯಕ್ಕೆ ನೀರು ಎಲ್ಲಿಂದ ತರಬೇಕು. ನೀರು ತಂದರೂ ಶೌಚಾಲಯವನ್ನು ಶುದ್ಧಗೊಳಿಸುವುದು ಯಾರೂ ಮಕ್ಕಳನ್ನು ಆ ಕೆಲಸಕ್ಕೆ ಹಚ್ಚುವಂಗಿಲ್ಲ. ಶಿಕ್ಷಕರೂ ಮಾಡುವಂತಿಲ್ಲ. ಹಾಗಾದರೆ ಅದು ತನ್ನಿಂದತಾನೆ ಶುದ್ಧವಾಗಲು ಸಾಧ್ಯವೇ? ಶೇ.70ರಷ್ಟು ಶಾಲೆಗಳಿಗೆ ಶಿಕ್ಷಕರನ್ನೆ ನೀಡದ ಸರ್ಕಾರ ಶೌಚಾಲಯಗಳನ್ನು ಶುದ್ಧಗೊಳಿಸಲು ಸೇವಕರನ್ನು ನೀಡುತ್ತದೇಯೇ. ಇಂದಿನವರೆಗೆ ಹಲವು ಶಾಲೆಗಳಿಗೆ ದಿನನಿತ್ಯವು ಶಿಕ್ಷಕರನ್ನು ನೇಮಿಸಬೇಕೆಂದು ಅಲ್ಲಿನ ಶಾಲೆಗಳ ಮಕ್ಕಳೆ ಬೀದಿಗಿಳಿದು ಹೋರಾಟ ಮಾಡುತ್ತಿರುವುದನ್ನು ನಾವು ಕಾಣುತ್ತಿz್ದÉೀವೆ. ಶೌಚಾಲಯ ಶುದ್ಧಗೊಳಿಸುವುದು ಯಾರೇಂಬ ಪ್ರಶ್ನೆಯ ಚರ್ಚೆ ಅಲ್ಲಿಗೆ ಅನವಶ್ಯಕ. ಈಗ ಹೇಳಿ ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಶಾಲೆ ಕಲಿಯಬೇಕಿದೆ ಎನ್ನುವುದು ಎರಡು ಮಾತಿಲ್ಲ. ಅದರ ಜತೆಗೆ ಸರ್ಕಾರ ತನ್ನ ಹಲವು ಯೋಜನೆಗಳಿಗೆ ಶಾಲೆ ಮತ್ತು ಮಕ್ಕಳನ್ನ ಪ್ರಯೋಗಕ್ಕೆ ಬಲಿ ನೀಡುತ್ತಿರುವುದು ಕೂಡ ಸಾಮಾಜಿಕವಾಗಿ ಅಪಹಾಸ್ಯಕ್ಕೀಡಾದರೂ ಅದು ನಿರಂತರವಾಗಿ ನಡೆಯುತ್ತಿದೆ.
ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಪ್ರಯೋಗಿಸಲು ಇಲಿ ಸೇರಿದಂತೆ ಯಾವುದೇ ಪ್ರತಿರೋಧ ಒಡ್ಡದ ಪ್ರಾಣಿಗಳನ್ನು ಉಪಯೋಗಿಸಿಕೊಳ್ಳುತ್ತಿರುವುದು ಸರ್ವಕಾಲಿಕ ಸತ್ಯ. ಆದರೆ ನಮ್ಮ ರಾಜಕೀಯ ವ್ಯವಸ್ಥೆ ತಮ್ಮ ಕಾರ್ಯಕ್ಷೇತ್ರಗಳ ಬೆಳವಣಿಗೆಗೆ ಮತ್ತು ಚಟುವಟಿಕೆಗಳಿಗೆ ಶಾಲೆಗಳನ್ನೆ ರಂಗತಾಣಗಳನ್ನಾಗಿ ರೂಪಿಸಿಕೊಳ್ಳುತ್ತಿವೆ. ಮಹಾತ್ಮರ ಜಯಂತಿ, ಸರ್ಕಾರಿ ಯೋಜನೆಗಳು, ರಾಷ್ಟ್ರೀಯ ಹಬ್ಬಗಳು, ಚುನಾವಣೆಗೆ, ಜನ ಜಾಗೃತಿಗೆ ಹೀಗೆ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇವುಗಳಿಗೆಲ್ಲ ಶಾಲೆಗಳ ಕೋಣೆಗಳನ್ನು ಉಪಯೋಗಿಸಿಕೊಳ್ಳುವುದರ ಜತೆಗೆ ಶಿಕ್ಷಕರು ಮತ್ತು ಮಕ್ಕಳನ್ನು ಕೂಡ ಉಪಯೋಗಿಸಿಕೊಳ್ಳಲಾಗುತ್ತದೆ. ಅಷ್ಟೆ ಅಲ್ಲದೆ ರಾಜಕೀಯ ಮುಖಂಡರು ಹಾಗೂ ಸರ್ಕಾರಿ ಇಲಾಖೆಗಳ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಗ್ರಾಮಗಳ, ಬಡಾವಣೆಗಳಿಗೆ ಭೇಟಿ ನೀಡುವಾಗ ಕಾರ್ಯಕ್ರಮ ಆಯೋಜಿಸಲು ಕೂಡ ಈ ಶಾಲೆಗಳೆ ಆಕರ್ಷಣೀಯ ಕೇಂದ್ರಗಳು. ಯಾಕೆಂದರೆ ಬೇರೆ ಕಡೆ ಕಾರ್ಯಕ್ರಮ ಆಯೋಜಿಸಬೇಕಾದರೆ ಜನರನ್ನು ಸೇರಿಸಬೇಕು ಈಗ ಅದು ಸುಲಭ ಸಾಧುವಲ್ಲ. ಆದ್ದರಿಂದ ಸುಲಭದಲ್ಲಿ ಒಳ್ಳೆಯ ಕಾರ್ಯಕ್ರಮ ಮಾಡುವುದರ ಜತೆಗೆ ಮೇಲಾಧಿಕಾರಿಗಳು ಮತ್ತು ಮುಖಂಡರಿಂದ ಪ್ರಶಂಸೆಗೆ ಪಾತ್ರರಾಗಬಹುದು ಎನ್ನುವುದು ಲೆಕ್ಕಾಚಾರ ಅದಕ್ಕಾಗಿ ಶೈಕ್ಷಣಿಕ ವ್ಯವಸ್ಥಯನ್ನ ಬಲಿ ಪಶು ಮಾಡಲಾಗುತ್ತಿದೆ ಎನ್ನುವುದು ಕೂಡ ಕಹಿ ಸತ್ಯ. ಈಗ ಹೇಳಿ ಇಷ್ಟೆಲ್ಲ ಅವಾಂತರಗಳ ಮಧ್ಯೆ ನಮ್ಮ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಸಾಧ್ಯನಾ. ಒಂದು ವೇಳೆ ಸುಧಾರಿಸಲು ನಡೆಸುತ್ತಿರುವ ಈ ಆಮೆ ವೇಗ ಜಗತ್ತಿನ ರಾಷ್ಟ್ರಗಳ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಪೈಪೆÇೀಟಿ ನೀಡಲು ಸಾಧ್ಯನಾ? ಇಷ್ಟಕ್ಕೆ ಸಾಕು ಅನಿಸುತ್ತಿದೆ. ಬರೆಯುತ್ತಾ ಹೋದರೆ ರಾಮಾಯಣ ಬಿಟ್ಟರೆ ಮಹಾಭಾರತ ಅಲ್ಲವಾ. ಶಿಕ್ಷಣ ಕೇತ್ರದಲ್ಲೂ ಕೂಡ ಒಂದು ಬಾರಿ ಕುರುಕ್ಷೇತ್ರ ನಡೆಯಲಿ ಎಂದು ಆಶಿಸುತ್ತಾ ವಿರಮಿಸೋಣ.