ಸಲಹೋ ಅಯ್ಯಪ್ಪ
ಕವನ
ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ
ನನ್ನನ್ನು ಸಲಹೋ ನೀನು ಅಯ್ಯಪ್ಪ
ತಣ್ಣೀರಲಿ ಸ್ನಾನವ ಮಾಡುತ ಸ್ಮರಿಸಿದೆನು
ಹಣೆಯಲ್ಲಿ ಭಸ್ಮವ ಧರಿಸುತ ಬೇಡಿದೆನು
ನೂರೆಂಟು ನಾಮವ ಜಪಿಸುತ ಕುಣಿದೆನು
ಇರುಮುಡಿಯ ತಲೆಯಲಿ ಹೊತ್ತು ನಡೆದೆನು
ದಾರಿಯಲೆಲ್ಲ ನಿನ್ನದೆ ಧ್ಯಾನದಿ ನಿಂತೆನೆ
ಊರಿನ ಹೆಸರಿಗೆ ಘನತೆಯ ತಂದಾ ಧೀರನೆ
ವಾವರನೊಂದಿಗೆ ನೆಲೆ ನಿಂತ ಪುಣ್ಯಾತ್ಮನೆ
ಶಬರಿಮಲೆಗೆ ಗೌರವ ತಂದ ಮಹಾತ್ಮನೆ
ಹದಿನೆಂಟು ಮೆಟ್ಟಿಲು ಸರಸರ ಏರಿದೆನಿಂದೆ
ಸನ್ನಿಧಿ ಮುಂದೆ ನಿಂದೆನು ಹೀಗೆ ತಂದೆ
ಗುಡಿಯಲ್ಲಿ ನೀನಿದ್ದು ಹರಸಿದೆ ಇಂದೆ
ಎಲ್ಲರ ಪೊರೆಯುತ ಸಲಹುತಲೇ ಬಂದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
