ಸಲ್ಮಾನ್ ತಸ್ಸೀರ್ - ಕೊಲೆಯಾದ ತಂದೆಯ ಬಗ್ಗೆ ಮಗನ ನುಡಿನಮನ | ಪಾಕಿಸ್ತಾನದ ತಳಮಳದ ಬಗ್ಗೆ ಪ್ರತಿಕ್ರಿಯೆ

ಸಲ್ಮಾನ್ ತಸ್ಸೀರ್ - ಕೊಲೆಯಾದ ತಂದೆಯ ಬಗ್ಗೆ ಮಗನ ನುಡಿನಮನ | ಪಾಕಿಸ್ತಾನದ ತಳಮಳದ ಬಗ್ಗೆ ಪ್ರತಿಕ್ರಿಯೆ

ಬರಹ

ಆತಿಶ್ ತಸ್ಸೀರ್  -ಭಾರತೀಯ ಮೂಲದ ಯುವ ಬರಹಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಅರಳಿದ ದೈತ್ಯ ಪ್ರತಿಭೆ. "ಎ ಸ್ಟ್ರೇಂಜರ್ ಟು ಹಿಸ್ಟರಿ" - ಈತನ ಮೊದಲ ಕೃತಿ. ಇದು ಒಂದು ಆತ್ಮ ಕಥಾನಕವೂ ಹೌದು.

 

ಆತಿಶ್ ಇತ್ತೀಚೆಗೆ ಕೊಲೆಯಾದ ಪಾಕಿಸ್ತಾನದ ಪಂಜಾಬಿನ ರಾಜ್ಯಪಾಲ ಸಲ್ಮಾನ್ ತಸ್ಸೀರ್ ಮತ್ತು  ನಮ್ಮ ಪ್ರಖ್ಯಾತ ಪತ್ರಕರ್ತರಾದ ತವ್ಲೀನ ಸಿಂಘ್ ಅವರ ಮಗ. ತವ್ಲೀನ್ ಮತ್ತು ಸಲ್ಮಾನ್ ೮೦ರ ದಶಕದ ಸುರುವಿನಲ್ಲಿ ಒಬ್ಬರನೊಬ್ಬರು ಭೇಟಿಯಾದರು. ಪರಿಚಯ ಸ್ನೇಹಕ್ಕೆ ತಿರುಗಿತು. ಸ್ನೇಹ ಪ್ರಣಯಕ್ಕೆ ತಿರುಗಿತು. ಆದರೆ ಒಂದು ವರ್ಷ ಮತ್ತು ಒಂದು ಮಗುವಿನ ನಂತರ ವಿರಸ ಶುರುವಾಗಿ ದಾಂಪತ್ಯ ಮುರಿದುಬಿತ್ತು.

 

ತಂದೆ ಸಂಪ್ರದಾಯವಾದಿಯಲ್ಲದಿದ್ದರೂ ಕಟ್ಟರ್ ಪಾಕಿಸ್ತಾನಿ ಮುಸ್ಲಿಮ್. ತಾಯಿ ಪ್ರಖರ ಚಿಂತನೆಯುಳ್ಳ  ಭಾರತೀಯ ಸೀಖ್ ಸರದಾರಿಣಿ. ಯಾವ  ಮಸಾಲೆ ಸಿನಿಮಾದ ಕತೆಗಿಂತ ಹೆಚ್ಚು ಮಸಾಲೆ ಆತಿಶ್ ನ ನಿಜಜೀವನದಲ್ಲಿದೆ.

ಇಸ್ಲಾಮನ್ನು ಬಹಳ ಹತ್ತಿರದಿಂದ  ಅಧ್ಯಯನ ಮಾಡಿರುವ( ಹಜ್ ಯಾತ್ರೆಯನ್ನು ಮುಗಿಸಿರುವ) ಆತಿಶ್ ಬರಹಗಳಲ್ಲಿ ಒಳಹೊಳಹುಗಳು ಹೇರಳವಾಗಿ ಸಿಗುತ್ತವೆ.

 

ಆತಿಶ್ ತನ್ನ ಅಪ್ಪನ ಕೊಲೆಯ ಬಗ್ಗೆ ಬರೆದ ಬರಹ ಇಲ್ಲಿದೆ  http://is.gd/kpdbd

ಆತಿಶ್ ಪಾಕಿಸ್ತಾನದ ಸ್ಥಿತಿಗತಿಗಳ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಬರೆದ ಬರಹ ಇಲ್ಲಿದೆ. http://www.tera-media.net/aatish/?p=journalism&id=52

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet