ಸವಾಲುಗಳ ಮೆಟ್ಟಿ ನಿಂತ ಧೀರೆ…

ಸವಾಲುಗಳ ಮೆಟ್ಟಿ ನಿಂತ ಧೀರೆ…

ಕವನ

ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು

ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು

ಸವಾಲೆಸೆದ ಬಾಯಿಗಳಿಗೆ ಉತ್ತರ ನೀಡಿದವಳು

ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು

 

ಸಂಸಾರ ದುಡಿಮೆ ಸರಿದೂಗಿಸಿ ಸೈ ಅನಿಸಿದವಳು

ಬೆದರದೆ ಬೆಚ್ಚದೆ ಜಗ್ಗದೆ ಸೆಟೆದು ನಿಂತವಳು

ಗಂಡುಬೀರಿ ಎಂದವರಿಗೆ ಛೀಮಾರಿ ಹಾಕಿದವಳು

ಸ್ವಾಭಿಮಾನ ಮನದ ಗುಡಿಗೆ ಕೈಯಿಕ್ಕಿದರೆ ಜೋಕೆ ಎಂದವಳು

 

ಕರುಳ ಕುಡಿಗಳ ಬೆಳೆಸಿ ಸನ್ಮಾರ್ಗದಲಿ ನಡೆಸಿದ ಮಾತೆಯಿವಳು

ಹಿರಿಯರನು ಗೌರವಿಸಿ ಉಪಚರಿಸಿದ ಸಂಸ್ಕಾರೆಯಿವಳು

ಮಗಳು ಸೋದರಿ ತಾಯಿ ಅಜ್ಜಿ ನಾನಾ ಮೊಗದಲ್ಲಿ ರಾರಾಜಿಸಿದವಳು

ಮನೆಯ ಸರಕಲ್ಲ ಅಭಿಮಾನದಲಿ ಪೂಜಿಸುವ ಸ್ತ್ರೀಯವಳು

 

ಹೆಣ್ಣು ಸಂಸಾರದ ಕಣ್ಣು ಮರೆಯದಿರಿ ಜಗದಿ

ಬುವಿಯಿಂದ ಬಾನಿಗೂ ಜಿಗಿದ ಅಪ್ರತಿಮ ಸಾಹಸಿ

ರತ್ನ ಸಿಂಹಾಸನ ಬೇಕಿಲ್ಲ ಹಿಡಿ ಪ್ರೀತಿ ನೀಡಿ ಬದುಕಲು ಬಿಡಿರೆಲ್ಲ

ಆಕೆಯ ಸಂಪಾದನೆ ಹಣ ಆಸ್ತಿ ವಡವೆ ಬೇಕು ಆಕೆ ಬೇಕಿಲ್ಲ ಯಾಕೆ ಹೀಗೆ?

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ್