ಸವಿಯಿರುವ ಬಾಳಿನಲಿ

ಸವಿಯಿರುವ ಬಾಳಿನಲಿ

ಕವನ

ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು

ಕವಿದಿರುವ ಮೋಡವದು ಕರಗಿರುವ ಹಾಗೆ

ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ

ಪಾವನವು ಈ ಜೀವ ಎಂಬುವುದ ತಿಳಿದಿಹೆನು

ಏತರದ ಹವ್ಯಾಸವೊ ಈಜಿ ದಡ ಸೇರಿರಲು

ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು

ಕನಸುಗಳ ತೀರದಲಿ ಕುಳಿತುಬಿಡಬೇಕು

ಭಾವನೆಯ ಮಡಿಲಲ್ಲಿ ನನಸುಗಳು ಸಿಗಲು

ಯಾವ ತೆರದಲಿ ಗಂಧವದು ಹೇಗಿದ್ದರೇನಿಂದು

ಚೈತ್ರದುದಯಕೆ ಅದುವೆ ಸಾಕಲ್ಲ ತಿಳಿಯಿಂದು

ದಾರಿ ಸಾಗಲೆ ಬೇಕೆ ನಡೆಯುತಿರು ತಲೆಬಾಗಿ

ತೇರನೆಳೆವ ಸಮಯ ಸನಿಹದಲೆಯಿರಲು

ಸಂಘರ್ಷವೆ ಜೀವನದ ಅಂತರ್ಯ ಕುಸುಮವದು

ಬೆರೆಯುತಿರು ಪೊರೆಯುತಿರು ಬಾಳಿನಲಿಯೆಂದು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್