ಸವಿಯು ಬಾರದೆ ಇರಲು

ಸವಿಯು ಬಾರದೆ ಇರಲು

ಕವನ

ಸವಿಯು ಬಾರದೆ ಇರಲು

ಎನ್ನ ಒಡಲದು ಕಂತಿ

ಚಿಂತೆಯೊಳು ಮರುಗಿತು ಬದುಕೆಲ್ಲವಂದು

ಕನಸಿನಾಳದ ಸನಿಹ

ನನಸೆಲ್ಲ ಸೋತಿರಲು

ಬಾಳ ಜೊತೆ ಸಾಗುತಲೆ ಬರಡಾಯಿತಂದು

 

ಮದುವಣದ ದಿಬ್ಬಣವು

ಹೊರಟಿದ್ದ ಗಳಿಗೆಯೊಳು

ಕಾಲನಾ ಲೀಲೆಯೊಳು ಹುಡಿಯಾಯಿತಂದು

ಸುರುಟಿದವು ಜೀವಗಳು

ಬಡವಾಗಿ ಸೋತಿಹವು

ಆಸರೆಯ ಬೇಡುತಲಿ ನೊಂದವೂ ಬೆಂದು

 

ಹಸೆಮಣೆಯ ಕನಸುಗಳು

ಕರಗುತಲೆ ಸಾಗಿರಲು

ಹುಸಿಯಾಯ್ತು ಚೆಲುವ ಜೀವಿತದ ಬಿಂದು

ಪ್ರೀತಿ ತಪ್ಪಿದ ಒಲವು

ಆಗಸದಿ ತೇಲಿರಲು

ಪ್ರೇಮ ಅಳಿಸಿದ ಹುಸಿಯ ಭಾವನೆಗಳಂದು

***

ತನಗ

ಕೆಲವು ಗೀಚುಗಳೇ

ಪದೋನ್ನತಿ, ಉನ್ನತಿ

ಓದುಗನ ಸ್ಥಿತಿಯೋ ?

ಮತ್ತದೇ ಅದೋಗತಿ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್