ಸವಿ ಮನ ಮತ್ತು ಒಂದಿಷ್ಟು ಹನಿಗಳು...

ಸವಿ ಮನ ಮತ್ತು ಒಂದಿಷ್ಟು ಹನಿಗಳು...

ಕವನ

ಮನದಿ ಸವಿಯಿರೆ

ಮುನಿಸು ಸೋತಿತು

ಮನಕೆ ಚಿಂತನೆ ಮೂಡಿತು

ಕನಸು ತುಂಬುತ

ನನಸು ಅರಳಿತು

ಅನಲ ಸವಿಮನ ಹಾಡಿತು

 

ಕಮರಿ ಹೋಗದೆ

ಅಮರನಾಗುತ

ಸಮರ ಸಾಧಕನಾಗುತ

ತಮವ ಕೆಡಿಸದೆ

ತುಮರಿಗಾನವ

ಧಮನಿಯೊಳಗೆ ತುಂಬುತ

 

ಇಂಥ ಸಮಯದಿ

ಸಂತ ರೀತಿಯೆ

ಸಂತೋಷದಿ ಬಂದನು

ಅಂತ ನಂತನ

ಬಂತು ಈದಿನ

ಕುಂತು ಕೈಯನು ಹಿಡಿದನು

***

ಹನಿಗಳು

 

ಜೀವನದೊಳು

ಏನಿದೆ ತಿಳಿವುದೇ

ಜೀವ ನಿಂತಾಗ

ಪರರಿಗಯ್ಯಾ !

 

ನೀನು

ಹಳಿಯಲ್ಲಿರದೆ

ಇನ್ನೊಬ್ಬರ

ಹಳಿಯದಿರು !

 

ಚರಿತ್ರೆಗಳು

ಪಾಠ 

ಕಲಿಸುತ್ತವೆ

ನಾವು

ಕಲಿಯಬೇಕು

ಅಷ್ಟೆ ! 

 

ತಪ್ಪಿಲ್ಲದೆಯೆ

ತಪ್ಪೆಂದರೆ

ನಷ್ಟ

ನನಗಲ್ಲವಯ್ಯಾ

ನಿಮಗೆ !

 

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್