ಸವಿ ಸವಿ ನೆನಪು..
ಕವನ
ಸವಿ ಸವಿ ನೆನಪಿನ ದಿನಗಳಾಗಿವೆ
ಸವಿ ಸವಿ ಪ್ರೀತಿಯ ಹಾಗೆ ಮಧುರವಾಗಿವೆ
ಸಂಗಾತಿ ಜೋತೆಯಲ್ಲಿರುವಾಗ ನಾಚಿಕೆಯಾಗಿದೆ
ಪ್ರೀತಿಯ ಹನಿಗಳ ಮಳೆ ಸುರಿದಿದೆ
ಸ್ನೇಹದ ಬಳ್ಳಿ ಚಿಗುರು ಒಡೆದಿದೆ
ಮುಂಜಾನೆಯ ಮಂಜು ಮುತ್ತಾಗಲಿದೆ
ಸಂಗಾತಿಯ ನೋಡಿ ಆಕಾಶವು ಬೆರಗಾಗಿದೆ
ಈ ನನ್ನ ಪ್ರೀತಿ ಹೂ ಆಗಿ ಅರಳಿದೆ
ಚಿಟ್ಟೆಯ ಹಾಗೆ ಸಂಗಾತಿಗೆ ಬಣ್ಣ ನೀಡಿದೆ
ಸವಿ ಸವಿ ನೆನಪಿನ ಸಂಗಾತಿಗೆ ಪ್ರೀತಿಯಾಗಿದೆ