ಸಹಜ ಪ್ರೇಮ
ಕವನ
ನೀಡೆನು ಮುದುಡುವ ಗುಲಾಬಿಯ
ಹೃದಯವೇ ನಿನದಾಗಿರುವಾಗ ಸಖಿ
ಪ್ರೇಮ ಕರಗುವ ಭಂಡಾರವಲ್ಲ ಗೆಳತಿ
ಅದು ಬರಿಯ ಸೆಳೆತದ ಗುಂಗಲ್ಲ.
ಪ್ರೇಮಕೆ ಮುತ್ತು-ರತ್ನಗಳ ಹಂಗಿಲ್ಲ
ಅದು ಭುವಿಯ ಕಾಲಗಳಂತೆ ಸಹಜ
ಬಯಸದೇ ಸುಳಿದು ಸೆಳೆಯುತಿದೆ ಹೃದಯ
ಬೇಡಿಕೆ ಕಂಗಳಿಗೆ ನಿನ್ನದೇ ಇರಲಿ ಬಿಂಬ.
ಚಂದ್ರನ ನಗುವಿಗಿಂತ ಚೆಂದದ ಅನುಭವ
ತಂಗಾಳಿ ತೀಡಿದಾಗ ನೀ ಬಂದ ಕಂಪನ
ಒಲವಲಿ ಮಬ್ಬಾಗಿದೆ ಬದುಕ ಹಲವು ಗಾಯ
ನಿನ್ನೊಲವೇ ಸಿರಿಯು ಬೇಕಿಲ್ಲ ಐಸಿರಿಯು.
ರಾಜರು ಕಟ್ಟಿಹರು ಬಲು ಮಹಲು
ಕಾಲದಿ ಹಿಡಿದಿದೆ ಬರಿಯ ಧೂಳು
ನಾನು ನಾವಾದಾಗ ಮಹಲೇಕೆ?
ಹೃದಯ ಕೋಟೆಗೆ ಇಟ್ಟಿಗೆ ಬೇಕೆ?
ಅನಾಮಿಕ ನಾ ನನಗೇ ಈ ಮೊದಲು
ಪ್ರೇಮದಿ ಅರಿತೆ ಅಂತರಂಗದ ಸಾಲು
ಜಗವೊಮ್ಮೆ ತಿರುಗಿ ನೋಡಲಿ ಈ ಪ್ರೇಮ
ತೊರೆಯಲಿ ವೈಭವ ಸಹಜತೆಯೇ ನವ್ಯ.
-ನಿರಂಜನ ಕೇಶವ ನಾಯಕ್, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್