ಸಹಬಾಳ್ವೆ - ನ್ಯಾನೋ ಕಥೆ

ಸಹಬಾಳ್ವೆ - ನ್ಯಾನೋ ಕಥೆ

ದೇಹದ ಅಂಗಗಳ ನಡುವೆ ನಾನೇ ಹೆಚ್ಚೆಂದು ವಾದ ನಡೆಯಿತಂತೆ. ಅಂಗಗಳೆಲ್ಲಾ ಪ್ರತಿಭಟಿಸಿ ಕೆಲಸವನ್ನೇ ನಿಲ್ಲಿಸಿದವು. ಕಣ್ಣುಗಳು ರೆಪ್ಪೆ ಮುಚ್ಚಿಕೊಂಡವು. ಬಾಯಿಯ ಬಾಗಿಲು ತೆರೆಯಲೇಯಿಲ್ಲ. ಕಾಲು ಚಲಿಸಲಿಲ್ಲ. ಈ ಪ್ರತಿಭಟನೆಯಿಂದ ದೇಹ ನಿಧಾನವಾಗಿ ಕೃಶವಾಯಿತು. ಸಹಬಾಳ್ವೆ ಮರೆತ ಅಂಗಗಳ ಧೋರಣೆಯಿಂದ ದೇಹ ಪರಲೋಕ ಸೇರಿತು.

(31 ಪದಗಳಿವೆ)

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ