ಸಾಂತ್ವನ

ಸಾಂತ್ವನ

ಬರಹ

------***** ಸಾಂತ್ವನ *****-------
ಮಂಡೆ ಬೋಳಾಗಿದೆ,
ಮನ ಬೋಳಾಗದಿರಲಿ
ಅವಿನಾಶಿ ಆತ್ಮವೊಂದಕೆ
ಹಾಕಿದ್ದ ಮಾಯೆಯ
ಪರದೆ ಸರಿದಿದೆ

ಸಚೀತನರು ಅಚೀತನರಾಗುವುದು
ಚೇತನವು ಮತ್ತೆ
ಸಚೀತನವಾಗುವುದು
ಮನುಕುಲದ ಇತಿಹಾಸಕೆ
ಹೊಸದೇನೂ ಅಲ್ಲ.

ಮಾಯೆಯ ಈ ಬಿಗಿ
ಪರೆದೆಯನೇ ಕವಿ ಕರೆದದ್ದು
ಮುಸುಕಿದ ಮಬ್ಬು ಎಂದು
ಕರುಣಾಳುವಾದ ಆ
ದಿವ್ಯ ಚೇತನಕೆ ಅದನು ಸರಿಸುವ ಚೈತನ್ಯವಿದೆ.

ನೀ ಬತ್ತದಿರೆ, ಬಾಡದಿರೆ
ಅನಿಕೇತನವಾಗಿರುವ ಆತ್ಮ
ಶಾಂತಿ ಕಂಡೀತು

ಇತಿಹಾಸ ನೆನೆಸುವುದು
ಚೇತನಗಳನು ಮಾತ್ರ
ಮಾಡಿದ ಕಾಯ೯ಗಳು
ಆಡಿದ ಮಾತುಗಳು
ಎಲ್ಲವೂ ಇಲ್ಲಿಯೇ
ಉಳಿಯುವವು ಕಾಲನು
ಅಳಿಸುವ ತನಕ
ಬಣ್ಣವು ಮಾಸುವ ತನಕ

--ನರೇಂದ್ರ
೧೦/೦೧/೨೦೦೩