ಸಾಕ್ಷರ ದೀವಿಗೆ ಹಚ್ಚೋಣ

ಸಾಕ್ಷರ ದೀವಿಗೆ ಹಚ್ಚೋಣ

ಕವನ

ಕಲಿಯೋಣ ನಾವು ಕಲಿಯೋಣ

ಅಆಇಈ ಓದೋಣ

ಬರೆಯೋಣ ನಾವು ಬರೆಯೋಣ

ಅಕ್ಷರ ತಿದ್ದಿ ಬರೆಯೋಣ

 

ವಯಸ್ಸಿನ ಮಿತಿಯು ಇದಕಿಲ್ಲ

ಯಾರದೇ ಹಂಗು ಬೇಕಿಲ್ಲ

ಎಲ್ಲರು ಒಂದೆಡೆ ಸೇರುತಲಿ

ಮಾತುಕತೆಯನು ಮಾಡುತಲಿ

 

ಮನೆಯಲೆ ಕುಳಿತು ಕಲಿಯುತಲಿ

ಮಕ್ಕಳೊಂದಿಗೆ ಸೇರಿ ತಿಳಿಯುತಲಿ

ಅಜ್ಞಾನ ಕತ್ತಲೆ ಕಳೆಯೋಣ

ಜ್ಞಾನದ ಬೆಳಕ ಮೂಡಿಸೋಣ

 

ಹೆಬ್ಬೆಟ್ಟು ಮುದ್ರೆಯ ಅಳಿಸೋಣ

ರುಜುವನು ಹಾಕುತ ನಲಿಯೋಣ

ಪುಸ್ತಕವೆಂದರೆ ಗೆಳೆಯನ ಹಾಗೆ

ಮಸ್ತಕದಲ್ಲಿ ತುಂಬುತ ಬಾಗೆ

 

ಕಲಿಕೆಯ ಮಹತ್ವ ಸಾರೋಣ

ಸಂಕಲ್ಪ ಸಾಧನೆ ಮಾಡೋಣ

ಪ್ರಗತಿಯಿಂದ ಜೀವನ ಚಂದ

ಜನರಿಗೆಲ್ಲ ಪರಮಾನಂದ

 

ಕೂಡಿ ಕಳೆದು ಆಡುತಲಿ

ಪದ ಪದಗಳ ಸೇರಿಸುತಲಿ

ಬಣ್ಣದ ಚಿತ್ರವ ನೋಡುತಲಿ

ಘಟನೆ ಸಂಭಾಷಣೆ ಬರೆಯುತಲಿ

 

ನೆರೆಹೊರೆ ಜನರು ಸೇರುತಲಿ

ಸಂಘದ ಸಭೆಯಲಿ ಕೂರುತಲಿ

ಮಾತುಕತೆಯಲಿ ತೊಡಗುತಲಿ

ಅಕ್ಷರ ಜ್ಞಾನವ ಪಡೆಯುತಲಿ

 

ಅಭಿವೃದ್ಧಿ ಪಥದಲಿ ಸಾಗೋಣ

ಮೋಸ ಹೋಗುವುದ ತಡೆಯೋಣ

ಸಾಕ್ಷರ ದೀವಿಗೆ ಹಚ್ಚೋಣ

ಮನೆ ಮನ ಬೆಳಗುತ ಮೆರೆಸೋಣ

(ವಿಶ್ವ ಸಾಕ್ಷರತಾ ದಿನದಂಗವಾಗಿ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್