ಸಾಗು ಮುಂದೆ

ಸಾಗು ಮುಂದೆ

ಕವನ

ಬೆಳ್ಳಿ ಚುಕ್ಕಿಗೇನು ಕೆಲಸ
ನೆತ್ತಿ ಸುಡೋ ಬಿಸಿಲಲಿ?
ಹಾಡು ಹಕ್ಕಿಗೇನು ಕೆಲಸ
ಜಡಿಮಳೆಯ ನಡುವಲಿ?

ಚುಕ್ಕಿ ನೀನು ಕಾಣೋದಿಲ್ಲ
ಸೂರ್ಯನುರಿವ ಸಮಯದಿ!
ಹಕ್ಕಿ ನಿನ್ನ ಕೇಳೋರಿಲ್ಲ
ಕಪ್ಪೆ ಕೂಗೋ ಕಾಲದಿ!

ಕಣ್ಣ ನೀರಿಗಿಲ್ಲ ಬೆಲೆಯು
ಯಾಂತ್ರಿಕ ಜಗದಲಿ!
ಸಣ್ಣ ನಗುವ ಚೆಲ್ಲಿ ನೀನು
ಸಾಗು ಮುಂದೆ ಬದುಕಲಿ!

Comments