ಸಾಧನೆಗೆ ನೀ ಸಿದ್ಧನಾಗು...

ಸಾಧನೆಗೆ ನೀ ಸಿದ್ಧನಾಗು...

ಕವನ

ಪ್ರತಿ ಮನೆಯಲ್ಲಿ ಕಥೆ

ಆ ಕಥೆಯಲ್ಲಿದೆ ವ್ಯಥೆ

ವ್ಯಥೆಗಳ ಕಂತೆಯಲ್ಲಿ

ಕಂತೆಗಳ ಸಂತೆಯಲ್ಲಿ

 

ಸಾವಿರ ಕನಸು ಕಂಡರು

ಆಗದು ನನಸು ಕುಳಿತರು

ನೋವು ಮರೆಸು ನಿನ್ನಲ್ಲಿ

ಶಾಂತಿಮಳೆ ಸುರಿಸು ಮನದಲ್ಲಿ

 

ಸೋಲಿನ ದಾರಿ ಸರಿಸು

ಗೆಲುವಿನ ದಾರಿ ಹೆಚ್ಚಿಸು

ಹಿಡಿದ ಪಟ್ಟು ಬಿಡದೆ

ಸಾಧಿಸು ಧೈರ್ಯ ಬಿಡದೆ

 

ಬೇಡ ಬೇಡ ಬಿಡು

ಪರರ ಚಿಂತೆ ಬಿಟ್ಟುಬಿಡು

ಆಗು ಆಗು ಸಿದ್ಧನಾಗು

ಸಾಧನೆಗೆ ನೀ ಸಿದ್ಧನಾಗು

 

ಸಮಸ್ಯೆ ಸರಿಯಾಗಲಿ

ಕಷ್ಟ ದೂರಾಗಲಿ

ನೋವು ಮರೆಯಾಗಲಿ

ಸಂತಸ ಹೊಳೆ ಹರಿಯಲಿ

 

-ಎಚ್‌.ವ್ಹಿ.ಈಟಿ,  ಶಿಕ್ಷಕರು, ಸಾ.ನರೇಗಲ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್