ಸಾಧನೆ

ಸಾಧನೆ

ಕವನ

ಬುವಿಯ ಮೇಲಿನ ಜೀವ-ನಿರ್ಜೀವಗಳನ್ನು ಕೆದಕಿ

ವಿವಿಧ ಸೊಂಶೋಧನೆಗಳನ್ನು ನಡೆಸಿ
ಯಾಂತ್ರೀಕರಣಗೊಳಿಸಿ ಪಾರಿತೋಷಕಗಳನ್ನು ಗಳಿಸಿ
ನೈಸರ್ಗಿಕತೆಯನ್ನು ಅಳಿಸಿ, ಜೀವಸಂಕುಲವನ್ನು
ಅಳಿವಿನಂಚಿಗೆ ಕೊಂಡೊಯ್ಯುತ್ತಿರುವ
ನಮ್ಮ ವಿಜ್ಞಾನದ್ದೂ ಒಂದು ಸಾಧನೆಯೇ?
 
ಪುಸ್ತಕದ ಪುಟಗಳನ್ನು ತಿರುಚಿ, ಹೆಚ್ಚು ಅಂಕ ಗಳಿಸಿ
ಉನ್ನತಾಭ್ಯಾಸ ಸಂಶೋದನೆಗಳನ್ನು ಮುಗಿಸಿ
ಹಣ-ಪ್ಯಾಕೇಜ್ಗಳ ಹಿಂದೆ ಓಡಿ, ವಿಲಾಸಿ
ಜೀವನದಲ್ಲಿ ವಿಹರಿಸುತ್ತಿರುವ, ನಮ್ಮ
ಇಂದಿನ ಯುವಕರದೆಂತ ಸಾಧನೆ?
 
ಜಗದ ಸೃಷ್ಟಿಯಾದಮೇಲೆ, ಜೀವಿಗಳು ಉದಿಸಿದಂದು
ಜೀವಿ ಮತ್ತು ಮಾನವನ ವಿಕಾಸದ ವೇಳೆ
ಮೂಖ ಮೌನದ ಮುಸುಕ ತೆರೆದು
ಮಾತಿನ ಮನೆ ಕಟ್ಟಿ, ಅಕ್ಷರಗಳ ಬೀಜ ಭಿತ್ತಿ
ಕಲೆ, ಸಾಹಿತ್ಯ, ಸಂಗೀತವನ್ನು ಜಗಕೆ ಪರಿಚಯಿಸಿ
ಮನುಜನಲ್ಲಿ ಭಾವನೆಗಳನ್ನು ಮೂಡಿಸಿದವರದಲ್ಲವೇ ದೊಡ್ಡ ಸಾಧನೆ?
 
ಅರಿಯಲಾಗದ ಸೃಷ್ಟಿ ರಹಸ್ಯವನ್ನು ಭೂಮಿಯ ಮೇಲಿಟ್ಟು
ಜೀವಿ-ನಿರ್ಜೀವಿಗಳಿಗೆ ಸಮತೋಲನವ ಕೊಟ್ಟು
ಯಥೇಚ್ಛ ಜೀವ ಸಂಕುಲವನು ಧರೆಯಲಿ ಬಿಟ್ಟು
ಸಂಶೋಧನೆಗೂ ನಿಲುಕದ ವಿಸ್ಮಯ ಪ್ರಶ್ನೆಗಳನ್ನಿಟ್ಟು
ಅಜ್ಞಾತವಾಗಿ ಅದೃಷ್ಯನಾಗಿ ಕುಳಿತಿರುವ
ಆ ಸೃಷ್ಟಿಕರ್ತನದಲ್ಲವೇ ಮಹತ್ತರ ಸಾಧನೆ?
 
ವಿಜ್ಞಾನ-ತಂತ್ರಜ್ಞಾನಗಳು ಮುಂದುವರಿದರೂನು
ಸಾವನ್ನು ಗೆಲ್ಲುವ ಸಾಧನೆಯುಂಟೆ ಈ ಇಳೆಯಲಿ?
ಉದುರುವ ಎಲೆಯನ್ನು ಚಿಗುರಿಸುವ, ಬಾಡುವ ಹೂವನ್ನು
ಅರಳಿಸುವ ಸಾಧಕರುಂಟೇ ಈ ಭೂಮಂಡಲದಲಿ ?
ಅವನು ಕೊಟ್ಟ ಜೀವನದಲಿ  ಇಂದು ನಾವು
ಮಾಡಿದರೆ ಸಾರ್ಥಕ ಸ್ನೇಹ-ಪ್ರೀತಿಗಳ, ಸರ್ವಧರ್ಮ

ಸಮನ್ವಯಗಳ ಮಾನವೀಯತಾ ಸಾಧನೆ!.

Comments