ಸಾಧನೆ ?

ಸಾಧನೆ ?

ಬರಹ

ಅಂದು ಭಾನುವಾರ,


 ಸುಂದರ ಬೆಳಗು


 ಸೂರ್ಯನ ಚಿನ್ನದ ಕಿರಣಗಳು ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದ್ದ ಸದ್ದಿಲ್ಲದೆ!


 ಮನದಲ್ಲಿ ನೂರು ಯೋಚನೆಗಳು ಸೂಚನೆ ನೀಡದೆ ಧಾಳಿಮಾಡಿದೆ\\


 ಮುದದಿ ಮನವು ಕಾಫಿಯ ಬಯಸಲು


 ಕಾಲಿನ ಪಯಣ ಹೋಟಲಿನೆಡೆ ನಡೆಯಲು


 ಹೆಣ್ಣೋರ್ವಳು ತನ್ನ ಕಂದನನ್ನು ಸಂತೈಸುತಿರಲು


 ಕಂದನ ಕೈಗಳಿಗೆ ಹಾಕಿದ ಬ್ಯಾಂಡೇಜಿನೆಡೆ ನನ್ನ ಗಮನ ಕೇಂದ್ರಿತವಾಗಲು


 ಮನಸು ನೋವಿನ ಜ್ವಾಲೆಯಲಿ ಬೇಯುವಂತಾಯಿತು


 "ಮಗುವಿಗೆ ಬಲಗೈ ಹಸ್ತವೇ ಇಲ್ಲ!" ಮುಂದೆ ಗತಿಯೇನು?


 ನನ್ನ ಮನದಲ್ಲೆದ್ದ ಉತ್ತರ ಕಾಣದ ಪ್ರಶ್ನೆ


 ತಾಯಿಯ ಮುಖದಲ್ಲಿ ವ್ಯಥೆಯ ಛಾಯೆಯಿಲ್ಲ


 ಧೈರ್ಯದಿ ಜೀವನದ ದಡಮುಟ್ಟಿಸುವೆ ಎಂಬ ಭಾವ ಮುಖದಲ್ಲಿ ನೆಲೆಗೊಂಡಿತ್ತು


 ನಮಗೆ ಕೈಯಿದ್ದು ಸಾಧಿಸಿದ್ದೇನು? ಎಂಬ ಪ್ರಶ್ನೆ ನನ್ನಲ್ಲಿ ಸಮಾಧಾನ ತಂದಿತು.