ಸಾನಿಯಾ ಮದುವೆಯಾಗ್ತಾಳೋ ಬಿಡ್ತಾಳೋ ಅದರಿಂದ ನಮಗೇನು ಸ್ವಾಮಿ
ದಿನ ನಿತ್ಯ ಯಾವುದೇ ಟಿವಿ ಛಾನಲ್ ಹಾಕಿದರೂ ಅಥವಾ ಯಾವುದೇ ಪತ್ರಿಕೆ ನೋಡಿದರೂ ಸಾನಿಯಾ ಮದುವೆಯದೆ ಸುದ್ದಿ. ದಿನಬೆಳಗಾದರೆ ಇವರ ಮುಖಗಳನ್ನು ನೋಡಬೇಕಲ್ಲ. ನಮ್ಮ ಕರ್ಮ.
ಹೇಳಿ. ಇವಳೇನೂ ದೇಶಕ್ಕೆ ಸ್ವಾತಂತ್ರ್ಯ ಸಂದಭFದಲ್ಲಿ ಹೋರಾಡಿದವಳಾ, ಸಾಹಿತಿಯಾ, ಇಲ್ಲ ಹಿಂದುಳಿದ ವಗFಕ್ಕೆ ಏನಾದರೂ ಮಾಡಿದ್ದಾಳಾ ಎಂದು ನೋಡಿದರೆ ಸೊನ್ನೆ. ಹೋಗಲಿ ಟೆನಿಸ್ನಲ್ಲಿ ವಿಂಬಲ್ಡನ್,ಆಸ್ಟ್ರೇಲಿಯನ್ ಓಪನ್ ಏನಾದರೂ ಪ್ರಶಸ್ತಿ ಪಡೆದಿದ್ದಾಳಾ ಎಂದರೆ ಅದೂ ಇಲ್ಲ. ಇವಳ ಮದುವೆಯನ್ನು ತಮ್ಮ ಸಂಬಂಧಿಕರ ಮದುವೆಯಂತೆ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳು ಈ ಮಟ್ಟಕ್ಕೆ ಪ್ರಚಾರ ನೀಡುತ್ತಿರುವುದು ಹೇಸಿಗೆಯ ಸಂಗತಿ. ನಾಳೆ ಈಕೆಗೆ ಮದುವೆಯಾಗಿ ಒಂದು ಮಗುವಾದರೆ ಅದನ್ನು ದಿನ ನಿತ್ಯ ಮಾಧ್ಯಮಗಳು ಪ್ರಕಟಿಸುವುದರ ಜೊತೆಗೆ ಇದು ಯಾರ ಮಗು ಎನ್ನುವುದರ ಬಗ್ಗೆ ಮತ್ತೊಂದು ವಿವಾದ ಸೃಷ್ಟಿಸುವ ಮೂಲಕ ಮತ್ತೆ ಪ್ರಚಾರ. ಇದು ಬೇಕಾ. ಪ್ರಸಿದ್ದ ಗಾಯಕಿ ಗಂಗೂಬಾಯಿ ಹಾನಗಲ್ ಅಥವಾ ಯಾರಾದರೂ ಸ್ವಾತಂತ್ರ್ಯ ಹೋರಾಟಗಾರರು ಸತ್ತಾಗ ಪತ್ರಿಕೆಯಲ್ಲಿ ಒಂದು ಕಾಲಮ್ ಬಂದರೆ, ಟಿವಿಗಳಲ್ಲಿ ಕೇವಲ ಒಂದು ನಿಮಿಷದಲ್ಲಿ ಮುಗಿದು ಹೋಗಿರುತ್ತದೆ. ದೇಶದಲ್ಲಿ ಅನೇಕ ಸಮಸ್ಯೆ ದಿನ ನಿತ್ಯ ಮಧ್ಯಮ ಹಾಗೂ ಬಡವ ವಗFದವರನ್ನು ಕಾಡುತ್ತಿದೆ. ಅದನ್ನು ಬಿಂಬಿಸುವ ಮೂಲಕ ಪರಿಹರಿಸಿ ಸ್ವಾಮಿ, ಸಾನಿಯಾ ಮದುವೆ ವಿಷಯ ಯಾವನಿಗೆ ಬೇಕಾಗಿದೆ.