ಸಾಮಾಜಿಕ ನ್ಯಾಯದ ಪ್ರತಿಪಾದಕ - ಡಾ. ಬಿ.ಆರ್. ಅಂಬೇಡ್ಕರ್

ಸಾಮಾಜಿಕ ನ್ಯಾಯದ ಪ್ರತಿಪಾದಕ - ಡಾ. ಬಿ.ಆರ್. ಅಂಬೇಡ್ಕರ್

ಮನಸ್ಸಿನಲ್ಲಿ ಹುಟ್ಟುವ ಸ್ವಾತಂತ್ರ್ಯ ವೇ ನಿಜವಾದ ಸ್ವಾತಂತ್ರ್ಯ. ಅದಿಲ್ಲದವ ಸರಪಳಿ ಹಾಕಿದ ಆನೆಯಂತೆ, ಗುಲಾಮನಾಗಿರುವ. ಅವನಿಗೆ ಸ್ವಾತಂತ್ರ್ಯ ದ ಅರಿವು ಮೂಡಲು ಸಾಧ್ಯವಿಲ್ಲ.- ಡಾ.ಬಿ.ಆರ್. ಅಂಬೇಡ್ಕರ್

ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು. ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗದು. ಬಡವರ, ದೀನದಲಿತರ ಧ್ವನಿಯಾದರು. ಅಸ್ಪೃಶ್ಯತೆ ಹೋಗಲಾಡಿಸಲು ಬಹಳಷ್ಟು ಶ್ರಮಿಸಿದರು. ಅವರ ಚಿಂತನೆಗಳ ಆಳ ಅಗಲ ಅರಿಯಲು ಅವರಿಗೆ ಮಾತ್ರ ಸಾಧ್ಯ ಎನ್ನಬಹುದು, ಅಂಥ ಮಹಾನ್ ಚಿಂತಕ, ಮುತ್ಸದ್ದಿಯ ಜನ್ಮದಿನವಾದ ಎಪ್ರಿಲ್ ೧೪ರಂದು ನಾವು ಅವರನ್ನು ಸ್ಮರಿಸಲೇಬೇಕು.

ಸಾಮಾಜಿಕ ನ್ಯಾಯದ ಪ್ರತಿಪಾದಕ. *ನಮ್ಮ ಪ್ರಗತಿ ನಮ್ಮ ಮನೆಯಿಂದಲೇ ಆರಂಭವಾಗಬೇಕು,ಆಗಬೇಕಾದರೆ ವಿದ್ಯೆ ಬೇಕೆಂದು ಸಾರಿದವರು* ಬಡವರ ದರಿದ್ರತನವು ಶ್ರೀಮಂತರ ಶ್ರೀಮಂತಿಕೆಯಲ್ಲಿ ಅಡಗಿದೆ, ಅದನ್ನು ಹೊರಗೆಳೆದರೆ ಮಾತ್ರ ಬಡತನದ ನಿರ್ಮೂಲನೆ ಆಗಬಹುದೆಂದರು. ಅಸಮಾನತೆ ದೂರವಾಗಬೇಕು. ಮಾನವ ಜನಾಂಗದ ಶೋಷಣೆ ತಪ್ಪಬೇಕು. ಸ್ವಾತಂತ್ರ್ಯ ಸಮಾನತೆ ಸಂರಕ್ಷಣೆ ಕಾನೂನಿನ ಚೌಕಟ್ಟಿನಲ್ಲಿ ಆದಾಗ ಎಲ್ಲವೂ ಸಾಧ್ಯ. ನಮ್ಮ ಸಂವಿಧಾನದ ರೂವಾರಿಯಾಗಿ ಮೆರೆದವರು. ಬಡತನದಲ್ಲಿ ಹುಟ್ಟಿ ಸಾಕಷ್ಟು ಶೋಷಣೆಗೆ ಒಳಗಾದವರು. ಸ್ವಯಂ ಅನುಭವಿಸಿದ ಸಂಕಷ್ಟಗಳ ಅನುಭವ, ಅವುಗಳನ್ನು ಮೆಟ್ಟಿ ನಿಂತ ಛಲವು ಅವರನ್ನು ಎತ್ತರದ ಸ್ಥಾನಕ್ಕೇರಿಸಿತು.

ಆರ್ಥಿಕತೆ, ಕೃಷಿ, ಶೈಕ್ಷಣಿಕ ಕ್ಷೇತ್ರ ಪ್ರಗತಿಯನ್ನು ಸಾಧಿಸಬೇಕೆಂದು ಆ ನಿಟ್ಟಿನಲ್ಲಿ ಶ್ರಮಿಸಿದರು. ಭೂಮಿಯ ಒಡೆತನದ ಹಕ್ಕು ಅವರವರಿಗೆ ಸಿಗಲು ಹೋರಾಡಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಂವಿಧಾನದಲ್ಲಿ ಇದ್ದರೂ, ಇಂದಿಗೂ ನೂರಕ್ಕೆ ನೂರು ಸಾಧಿಸಿಲ್ಲ. ಎಲ್ಲಿ ಕೃಷಿ ಕ್ಷೇತ್ರ ಕ್ಕೆ ಹೆಚ್ಚು ಒತ್ತು, ಮಹತ್ವ ನೀಡುವರೋ ಅಲ್ಲಿ ಪ್ರಗತಿ ಸಾಧ್ಯ ಎಂದವರು.

ಬಡವರ, ದೀನರ ಅಭ್ಯುದಯಕ್ಕಾಗಿ ಸದಾ ಹೋರಾಡಿದ ಮಹಾಚಿಂತಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸದಾ ಕಾಲ ಸ್ಮರಣೀಯರು. 

(ವಿವಿಧ ಮೂಲಗಳಿಂದ ಸಂಗ್ರಹಿತ)

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ: ಇಂಟರ್ನೆಟ್ ತಾಣ