ಸಾಮೂಹಿಕ ಗೀತೆ

ಸಾಮೂಹಿಕ ಗೀತೆ

ಕವನ

 

ಸಾಮೂಹಿಕ ಗೀತೆ

 

  

                                       ಹೇ, ಅಲ್ಲಿ ನೋಡು |  ಹೇ, ಇಲ್ಲಿ ನೋಡು |  

                                  

   ಅಲ್ಲಿ ನೋಡು ಇಲ್ಲಿ ನೋಡು
      ನೆಚ್ಚಿಕೊಂಡು ನಾಡ ನೋಡು |
ಕಣ್ಣು ತುಂಬಿ ಕೊಳ್ಳುತೈತಿ
                           ಕನ್ನಡ ಬೀಡು |
          ಹಗಲು ಇರುಳು ಮನವ ತುಂಬಿ
                            ಕೊಳ್ಳುವ ಹಾಡು ||ಪ||
                                                                                 - ಸದಾನಂದ

                                           

ತೆಂಗು ಕಂಗು ಮರಗಳಿಂದ ದೇಗುಲಗಳ ಸಾಲಿನಿಂದ|
ಕಂಗಳಿಗಾನಂದವೀವ ಚೆಲ್ವ ಬೀಡು||
 ಪರಶುರಾಮನ ಸೃಷ್ಟಿ ತುಳುನಾಡು ||ಪ||


  ಎತ್ತ ನೋಡಿದರತ್ತ ಪಚ್ಚೆ ಪೈರು ದಟ್ಟವಾಗಿ|
ಹಚ್ಚ ಹಸಿರು ಸೀರೆಯುಟ್ಟ ಮಲೆನಾಡು||
ಮೆಚ್ಚುತಿಹುದು ಜಗವೇ ಅಚ್ಚರಿಯಿಂದ ನೋಡು ||ಪ||
 

                                                                 Submitted by raghumuliya

 

ಸಿರಿಗಂಧದ ನೆಲೆವೀಡು ನಮ್ಮೊಲುಮೆಯ ತಾಯ್ನಾಡು
ಕವಿಕೋಗಿಲೆಗಳಿಗಿದುವೆ ಸುಂದರ ಗೂಡು
ಸರಸತಿಲಕುಮಿಯರೊಲಿದಾ ಕನ್ನಡನಾಡು

 
 ಅಂಗಳದಿ ರಂಗವಲ್ಲಿ ರಂಗಗೀತೆ ಪದಗಳಲ್ಲಿ
ತುಂಬಿ ತುಳುಕಾಡುವಂಥ ಪರಿ ನೋಡು
ತುಂಗೆ ಭದ್ರೆ ಶರಾವತಿ ಹರಿವ ನಾಡು
 

ಕೊಲ್ಲೂರು ಕೊಡಚಾದ್ರಿ ಶೃಂಗೇರಿ ಸಹ್ಯಾದ್ರಿ
ಚೆಲ್ವ ಉಡುಪಿಯ ಕೃಷ್ಣನಂದ ನೋಡು
ಎಲ್ಲಾರ್ ಮೆಚ್ಚಿದನ್ನಪೂರ್ಣೆಯ ಹೋರನಾಡು

 

                                                           Submitted by nagarathnavinay...

 


ಕೃಷ್ಣೆ ತುಂಗ ಭದ್ರೆ ಕಾ
     -ವೇರಿಯೊಡಲ ನೀರ ಹೀರಿ |
   ಸಹ್ಯ ವಿಂದ್ಯ ಮಲಯದಿಂದ
   ಬೀಸಿ ಬಂದ ತಂಪುಗಾಳಿ |
      ಮನಕೆ ಮುದವ ನೀಡುತೈತೆ 
                          ಸುಂದರ ಮೇಳಿ  |
        ನಿತ್ಯ ಇದನು ಸವಿದು ಕೊಂಡು
                          ಚೆಂದದಿ ಬಾಳಿ ||

                                                                               - ಸದಾನಂದ

 

 ಕಿತ್ತೂರಿನ ಚೆನ್ನಮ್ಮ ದುರ್ಗದ ಆ ಓಬವ್ವ
ಕಲೆಯರಸಿ ಶಾಂತಲೆಯು ನೆಲಸಿದ ಬೀಡು
ವಚನವ ಜಗಕೆ ಸಾರಿದ ಅಕ್ಕನ ನಾಡು |

 

ಕಲೆಯೊಲಿದ ರಾಜಣ್ಣ ಕ್ರಾಂತಿವೀರ ಬಸವಣ್ಣ
ಜನಮನಕ್ಕೆ ಮುದ ತಂದ ಕವಿಗಳ ಸಾಲು
ಗಂಡು ಎದೆಗಳ ನಾಡು ಮಡಕೇರಿಯ ನೋಡು|

 

 
 

ಕುವೆ೦ಪು ಮಾಸ್ತಿ ಗೊರೂರು ಶ್ರೀಗಳಿ೦ದ
ಸ೦ಪದ್ಭರಿತ ಸಾಹಿತ್ಯದಿ೦ದ ಅವರ ನೆರಳ
ನಲಿವಿನಿ೦ದ ಕ೦ಗೊಳಿಸುತಿದೆ ಮೆಚ್ಚುತಿಹಿದು
ಜಗವೆ ನೋಡು ನಮ್ಮ ಕನ್ನಡ !!

 

                                                                        Submitted by manju787
 
  ಯತಿವರೇಣ್ಯರು ಜನಿಸಿದ ನಾಡು,
ವೇದ ವೇದೋಕ್ತಿಗಳ ಪಠಿಸುವ ಬೀಡು
ಧರ್ಮ ಅಧರ್ಮವ ಮರಿಯದ ನೆಲವಿದು

 

 ದಿವ್ಯ ಸುಗಂಧವ ಬೀರುವ ಗಂದದ ಗುಡಿಯು
ಸುಂದರ ಸರಳ ವಿನ್ಯಾಸದ ಕನ್ನಡ ನುಡಿಯು
ಚರಿತೆಯ ಸಾರುವ ಕೋಟೆ ದುರ್ಗಗಳ ಸಿರಿಯು

 

 ಯಾವುದೇ ಜನಾಂಗಕ್ಕೂ ನೀಡುವುದು ಅಭಯ,
ಇಲ್ಲಿ ಎಲ್ಲರಿಗೊ ನೆಲಸಲು ನಿಸ್ಸಂಕೋಚ, ನಿರ್ಭಯ
ನಾಡಿನ ಸಿರಿಯದು, ಎಲ್ಲರಿಗೊ ಗೌರವದ ಸಹಾಯ.

 

ಎಲ್ಲೆಲ್ಲಿಯೂ ಸುಂದರ ಕಲಾಕ್ರುತಿಗಳ ಗುಡಿಯು
ಎಂದಿಗೊ ನಾವೆಲ್ಲರೊ ಕನ್ನಡಿಗರೆ ಎಂಬ ಹೆಮ್ಮೆಯು
ಏನಾದರೂ ಈ ನಾಡಿಗೆ ದುಡಿ, ಇಲ್ಲಿಯೇ ಮಡಿ
                                                                                                                                           
                                                                               Submitted by MADVESH K.S
 
  
ಪಂಪ ರನ್ನರಿಂದ  ಹಿಡಿದು
ಇತ್ತೀಚಿನ ಕಾವ್ಯ ಧಾರೆ
ಜ್ಞಾನಪೀಠವೇರಿದಂಥ
ರಸಋಷಿಗಳ ನಾದಲೀಲೆ
ತಾರೆಯಂತೆ ಹೊಳೆಯುತೈತೆ
ಕನ್ನಡ ತೇರು ||
ಸಿರಿಗನ್ನಡ ಪದಗಳೆಂಬ
ಹೂವನು ಬೀರು ||

ಅಲ್ಲಿ ನೋಡು ಇಲ್ಲಿ ನೋಡು
ನೆಚ್ಚಿಕೊಂಡು ನಾಡ ನೋಡು |
ಕಣ್ಣು ತುಂಬಿ ಕೊಳ್ಳುತೈತಿ
ಕನ್ನಡ ಬೀಡು |
ಹಗಲು ಇರುಳು ಮನವ ತುಂಬಿ
ಕೊಳ್ಳುವ ಹಾಡು ||ಪ||


                                                         - ಸದಾನಂದ

 

 ಕಡಲಕರೆಯ ಸೊಬಗಿನಿಂದ
ಪರ್ವತಗಳ ಸಾಲಿನಿಂದ
ಬಯಲುಸೀಮೆಯಂದದಿಂದ
ಮಲೆನಾಡಿನ ಹಸಿರಿನಿಂದ
ತನುಮನಗಳ ಸೆಳೆಯುತೈತೆ
ಕನ್ನಡನಾಡು ||
ಶಾಂತಿಯನ್ನು ಪಸರಿಸಿರುವ
ಗಂಧದಬೀಡು ||

 

 

                                                                          Submitted by raghumuliya
 

 

ಭೂಮಿಯ ಹಣೆ ಬೊಟ್ಟಿರುವಳು
ಭರತಮಾತೆ ತೊಟ್ಟಿಲವಳು
ಅರಿವಿನ ನೆಲೆಗಟ್ಟಿನಲ್ಲಿ
ತಿಳಿವಿನ ಚೌಕಟ್ಟಿನಲ್ಲಿ
ಕನ್ನಡತಿಯ ನಿಟ್ಟಿನಲ್ಲಿ
ಜೋಗುಳಹಾಡು||
ಕನ್ನಡಮ್ಮನನ್ನು ಮುದದಿ
ನೀ ಕೊಂಡಾಡು||

 

ಬತ್ತ ರಾಗಿ ಉತ್ತಿ ಬಿತ್ತಿ
ಬೆಳೆವ ಮುತ್ತಿನಂಥ ನಾಡು
ಒಡಲ ತಣಿಪ ಕಡಲ ಕೋಟೆ
ಸುತ್ತಮುತ್ತ ಹೊತ್ತ ಬೀಡು
ಮತ್ತೆಮತ್ತೆ ಪ್ರವಾಸಿಗರ
ಸೆಳೆಯುವ ನಾಡು||
ಚಿತ್ತವಸೆಳೆವುದನೊಂದೇ
ಚಿತ್ತದಿ ನೋಡು||



 

 

 

 

 

Comments