ಸಾಯಿಪ್ರಕಾಶ್ ಆತ್ಮಹತ್ಯೆಯತ್ನ..

ಸಾಯಿಪ್ರಕಾಶ್ ಆತ್ಮಹತ್ಯೆಯತ್ನ..

ಬರಹ

ಸತತ ಸೋಲಿನಿಂದ ಕಂಗೆಟ್ಟರೂ ಶಿವರಾಜ್ ಹಾಕ್ಕೊಂಡು ಚಿತ್ರ್ ತೆಗೆದ್ರು ಮತ್ತೆ ಸೋತ್ರು ನಿದ್ದೆ ಗುಳಿಗೆ
ನುಂಗಿದ್ರು ಈಗ ಚಿತ್ರರಂಗದ ಗಣ್ಯರು ನೆರವಿಗೆ ಹೋಗಿದ್ದಾರಂತೆ. ಶಿವಣ್ಣ  ಹೋಗಿ ಧೈರ್ಯ ತುಂಬಿದ್ರಂತೆ. ಇದು ಸುದ್ದಿಮಾಧ್ಯಮ
ದಲ್ಲಿ ಈಗಾಗಲೇ ಬಂದಿದೆ.. ಚಿತ್ರ ಸೋತಿದಾವೆ ನಿಜ ಆದರೆ ಅವು ಯಾವ  ಚಿತ್ರ ಅದೇ ಅರ್ಥವಿಲ್ಲದ ಸೆಂಟಿಮೆಂಟುಗಳು,
ಹೆಂಗಸರ ಕಣ್ಣೀರನ್ನೇ ಗುರಿಯಾಗಿ ಇಟ್ಟುಕೊಂಡು ಮಾಡಿದ ಚಿತ್ರಗಳು. ನೋಡೋರಿಲ್ಲ ಅಂತ ಗೋಳಿಡೋಬದಲು ಒಳ್ಳೆ ಚಿತ್ರ
ಮಾಡಿ ಜನ ನೋಡೇ ನೋಡ್ತಾರೆ. ಅದೇ ಅಣ್ಣ ತಂಗಿ , ಅತ್ತೆ ಮಾವ , ಅದೇ ಹಳಸಲು ಹಾಸ್ಯ  ನೋಡಿ ಜನರಿಗೆ ಬೇಸರವಾಗಿದೆ
ಅದರಲ್ಲಿ  ಈಗೀಗ  ಹೆಂಗಸರು ಅಳೋದನ್ನ  ನಿಲ್ಲಿಸಿದಾರೆ. ಹೀಗಾಗಿ ಆ ನಿಟ್ಟಿನಲ್ಲಿ ಬಂಡವಾಳ ಗಿಟ್ಟೋಲ್ಲ.

                      ಶಿವಣ್ಣ  ಗೆದ್ದ ಚಿತ್ರ  ಸೋತ  ಚಿತ್ರ ಅಂತ ಭೇದ ಮಾಡೋರಲ್ಲ  ತಮ್ಮನ್ನು ಹಾಕ್ಕೊಂಡ ಚಿತ್ರತೆಗೆದ ನಿರ್ಮಾಪಕ
ಇದ್ರೆಷ್ಟು ಬಿದ್ರೆಷ್ಟು ಅಲ್ವಾ ಅವರಿಗೆ ದುಡ್ಡು ಮುಖ್ಯ. ಅದೇ ನೆರೆಯ ತಮಿಳುನಾಡಿನ ಸ್ಥಿತಿಯೇ ಬೇರೆ ಹೀಗಾಗಿ ಅಲ್ಲಿ ಯಾವ ಸಾಯಿಪ್ರಕಾಶ  ಆತ್ಮಹತ್ತ್ಯೆಗೆ ಮುಂದಾಗೊಲ್ಲ.

                   ಕೆಲವುದಿನಗಳಿಂದ  ಕೇಳತಾನೇ ಇದ್ದೀವಿ ಈ ಚಿತ್ರಗಳ ಬಗ್ಗೆ ಆದರೆ ಬಿಡುಗಡೆ ಭಾಗ್ಯಾನೇ ಇಲ್ಲ
ಉದಾ:  ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸು... , ಜೊತೆಗಾರ  . ಹೀಗೆ ಇನ್ನೂ ಅನೇಕ. ಮುಖ್ಯಕಾರಣ  ಸಾಲಮರುಪಾವತಿ.
ಚಿತ್ರ ಬಿಡುಗಡೆ ಯಾಗೋದು ಲೇಟು, ಓಡೋದು ಡೌಟು.. ಆದ್ರೂ ತುಂಬುತ್ತದೆ ಹಿರೋನ ಜೇಬು. ಸ್ಥಿತಿ ಸುಧಾರಿಸಿತೆ
ಕಾದು ನೋಡಬೇಕು..!