ಸಾಯಿ..! ಅಂದರೆ ಸಾಯ್ತಾರಾ...?

ಸಾಯಿ..! ಅಂದರೆ ಸಾಯ್ತಾರಾ...?

ಕವನ

" ಸಾಯಿ....ಸಾಯಿ


ಹೀಗೆಂದು ,  ಅವನು...ಎಷ್ಟೋಸಲ


ಬೈದಿದ್ದ.... ಆದರೆ ನಾನು


ಸತ್ತೇ....ಇಲ್ಲ !


ಕೇಳುವುದನ್ನೂ ಬಿಟ್ಟಿಲ್ಲ......


ಆದರೆ......ಮೊನ್ನೆ


ಅವನ ಮನೆ ಮುಂದೆ.....


ನನ್ನಂಥವರೆಂದು ನಾ ಭ್ರಮಿಸಿದ


 ಜನರ ಸಂತೆ !


...............ಮಣ್ಣಿನ ಹೊಸ ಮಡಿಕೆಯಲ್ಲಿ


ಹೊಗೆಯಾಡುತ್ತಿತ್ತು.......!


ಸತ್ತಿದ್ದು ನಾ ಕೊಟ್ಟ ಸಾಲದ ಹಣ


ಮತ್ತು ...ಅವನು...!


ಮನೆಯೆದುರಿನ ಮರದ ಕೊಂಬೆಯಲ್ಲಿ


ನೇತಾಡುತ್ತಿದ್ದ ಹಗ್ಗ ..ನನ್ನ ಅಣಕಿಸಿದಂತಿತ್ತು..


 


ಚಿತ್ರ ಕೃಪೆ-ಗೂಗಲ್

ಚಿತ್ರ್