ಸಾರ್ಕ್ ಬದಲು ಹೊಸ ಒಕ್ಕೂಟ?

ಸಾರ್ಕ್ ಬದಲು ಹೊಸ ಒಕ್ಕೂಟ?

ಭಾರತವನ್ನು ಹೊರಗಿಟ್ಟು ನೂತನ ದಕ್ಷಿಣ ವಿಶ್ಯಾ ರಾಷ್ಟ್ರಗಳ ಒಕ್ಕೂಟವೊಂದನ್ನು ರಚಿಸಲು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಪ್ರಯತ್ನಿಸುತ್ತಿವೆ ಎಂದು ಕೇಳಿಬಂದಿರುವ ವರದಿಗಳು ನಿಜವಾಗಿದ್ದಲ್ಲಿ ಅದನ್ನು ಭಾರತವು ಕಡೆಗಣಿಸುವಂತಿಲ್ಲ. ಈ ಮೂರು ದೇಶಗಳು ದಕ್ಷಿಣ ಏಶ್ಯಾ ರಾಷ್ಟ್ರಗಳ ಹೊಸ ಒಕ್ಕೂಟ ರಚಿಸುವ ಕುರಿತಂತೆ ಇತ್ತೀಚೆಗೆ ಮಾತುಕತೆ ನಡೆಸಿದ್ದು, ದಕ್ಷಿಣ ಏಶ್ಯಾದ ಇನ್ನುಳಿದ ದೇಶಗಳನ್ನು ಇದರಲ್ಲಿ ಸೇರಿಸಿಕೊಳ್ಳಲು ಕಾರ್ಯನಿರತವಾಗಿವೆ ಎಂಬುದಾಗಿ ವರದಿಗಳು ತಿಳಿಸಿವೆ. ಪ್ರಸ್ತುತ ದಕ್ಷಿಣ ವಿಶ್ಯಾ ರಾಷ್ಟ್ರಗಳನ್ನು ಒಳಗೊಂಡ 'ಸಾರ್ಕ್' ಅಸ್ತಿತ್ವದಲ್ಲಿದ್ದು ಭಾರತವು ಅದರ ನೇತೃತ್ವ ವಹಿಸಿದೆ. ಇದರಲ್ಲಿ ಚೀನಾ ಹೊರತುಪಡಿಸಿ ದಕ್ಷಿಣ ಏಶ್ಯಾದ ಉಳಿದೆಲ್ಲ ರಾಷ್ಟ್ರಗಳು ಇವೆಯಾದರೂ ಕಳೆದೊಂದು ದಶಕದಿಂದ ಸಾರ್ಕ್ ವಸ್ತುಶಃ ನಿಷ್ಕ್ರಿಯವಾಗಿದೆ. ೨೦೧೬ರಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಸಮ್ಮೇಳನವನ್ನು ಭಾರತ. ಬಾಂಗ್ಲಾ, ಭೂತಾನ್ ಮತ್ತು ಅಫಘಾನಿಸ್ಥಾನಗಳು ಬಹಿಷ್ಕರಿಸಿದ್ದವು. ಅಲ್ಲಿಂದ ಬಳಕ ಸಾರ್ಕ್ ಕಾರ್ಯನಿರತವಾಗಿಲ್ಲ. ಇದನ್ನು ತನ್ನ ತನ್ನ ಲಾಭಕ್ಕೆ ಬಳಸಿಕೊಳ್ಳಲೆತ್ನಿಸುತ್ತಿರುವ ಚೀನಾ ಮತ್ತು ಪಾಕಿಸ್ತಾನಗಳು ಇವೇ ರಾಷ್ಟ್ರಗಳನ್ನು ಒಳಗೊಂಡು ಹೊಸ ಒಕ್ಕೂಟ ರಚಿಸುವ ಮತ್ತು ಅದರಿಂದ ಭಾರತವನ್ನು ಹೊರಗಿಡುವ ಕುರಿತಂತೆ ಯೋಜಿಸುತ್ತಿವೆ.

ಈ ಬೆಳವಣಿಗೆಯನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಶ್ರೀಲಂಕಾ, ನೇಪಾಳ, ಮಾಲ್ಮೀವ್‌ನಂತಹ ದೇಶಗಳು ಚೀನಾದ ಆಮಿಷಕ್ಕೆ ಸಿಲುಕಿ ಬಲುಬೇಗನೆ ಹೊಸ ಕೂಟ ಸೇರಬಲ್ಲವು. ಹಾಗಾದಲ್ಲಿ ಭಾರತವು ತನ್ನ ನೆರೆಕರೆಯಲ್ಲಿ ಏಕಾಂಗಿಯಾಗಬಹುದು. ಪೌರ್ವಾತ್ಯ ರಾಷ್ಟ್ರಗಳೊಂದಿಗೆ ನಿಕಟ ಬಾಂಧವ್ಯ ವೃದ್ಧಿಸುವ ಭಾರತದ ಇತ್ತೀಚಿನ ನೀತಿಗೆ ಇದು ಪ್ರತಿಕೂಲವಾಗಿ ಪರಿಣಮಿಸಬಹುದು. ಹಾಗಾಗಿ ದಕ್ಷಿಣ ಏಶ್ಯಾದ ಈ ಪುಟ್ಟ ದೇಶಗಳು ಚೀನಾದ ಪ್ರಭಾವಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕಾಗಿದೆ. ಪಾಕಿಸ್ತಾನ ಒಳಗೊಂಡ ಸಾರ್ಕ್‌ ಪುನಶ್ವೇಶನ ನೀಡುವುದು ಭಾರತದ ಉದ್ದೇಶಸಾಧನೆಗೆ ನೆರವಾಗಲಾರದು. ಹಾಗಾಗಿ ಭಾರತವು ದಕ್ಷಿಣ ವಿಶ್ಯಾದ ಈ ನೆರೆಯ ರಾಷ್ಟ್ರಗಳೊಂದಿಗೆ ತನ್ನ ದ್ವಿಪಕ್ಷೀಯ ಬಾಂಧವ್ಯ, ವ್ಯಾಪಾರ ವಹಿವಾಟನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಈ ದೇಶಗಳು ಚೀನಾದ ಪ್ರತಿ ಪ್ರಭಾವಕ್ಕೆ ಸಿಲುಕಿ 'ಭಾರತವಿರೋಧಿ' ಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೩-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ