ಸಾರ್ಥಕತೆ

ಸಾರ್ಥಕತೆ

ಕವನ

ಸಾರ್ಥಕತೆಯ ಬದುಕು ಬಾಳಬೇಕು
ನಯ ವಿನಯ ಮೂರ್ತಿವೆತ್ತಂತೆ
ಮಾಗಿದ ಹೂ ಹಣ್ಣುಗಳ ಭಾರದಲಿ ಬಾಗಿ
ನಮಿಸಿ ಸಂತಸ ತರುವ ಗಿಡ ಮರಗಳಂತೆ.


ಆಗದಿರಲಿ ಜೀವನ ಬರುಡು ಬೋಳು
ತನಗೆ ಸಾಟಿಯಿಲ್ಲ ಎಂಬ ಒಣ ಹುರಳು
ಜಂಭ ಹುಂಬತನದ ಮುಳ್ಳು ಬೇಲಿಗಳು
ಸೆಟದು ಎತ್ತರಕೆ ನಿಂತ ಒಂಟಿ ಮರದಂತೆ.


ಬದುಕುವ ಕಲಾತ್ಮಕ ದಾರಿ ದೀಪವಾಗಿ
ನಿಸರ್ಗ ವಿದ್ಯಾನಿಕೇತನ ಸಾರುತಿದೆ
ಜೀವನ ಸಾರ್ಥಕತೆಯ ಶುಭ ಸಂದೇಶ
ನಮ್ಮ ಸುಂದರ ಬಾಳಿಗೆ ಪಾವನ ಆದೇಶ !


ಶ್ರೀ ನಾಗರಾಜ್.