ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ 16

ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ 16

  ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ 

ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ 16

ಸನ್ಮಾನ್ಯ ಡಾ ಎಚ್ಚೆಸ್ವೀಯವರ  ಮತ್ತು ಶಂಕರ್ ಶ್ಯಾನುಭಾಗರ ಪುರಂದರ ರಸಾ ಪಾನ.

ಹೌದು ಈ ವಾರದಂತ್ಯ ಎಲ್ಲಾ ಅಭ್ಯಾಸಿಗಳ ಪಾಲಿಗೆ ಜಾಕ್ ಪಾಟ್ ಕಾದಿತ್ತು!!!. ಕನ್ನಡ ನಾಡು ನುಡಿ ನೆಲ ಸಂಸ್ಕೃತಿಯನ್ನು ನವ ಪೀಳಿಗೆಗೆ  ಪರಿಚಯಿಸಲೋಸುಗ ಆರಂಭವಾದ ಈ ಅಭ್ಯಾಸ ಆದಿ ಕವಿ ಪಂಪನಿಂದ ಆರಂಭಿಸಿ ಪುರಂದರರ ಸನ್ನಿಧಿಯವರಗೆ ನಡೆದು ಬಂದಿದೆ. ಇದು  ೧೬ ನೆಯ ಅಭ್ಯಾಸ. ಪುರಂದರ ಸಾಹಿತ್ಯದ ಈ ಹದಿನಾರನೆಯ ಅಭ್ಯಾಸದಲ್ಲಿ ಪುರಂದರ ದಾಸರ ಕೀರ್ತನೆಯೇ ಮುಖ್ಯ ಅಂಗ. ಖ್ಯಾತ ಶಂಕರ ಶಾನುಭಾಗರು ಮತ್ತು ಅವರ ಇಡೀ ತಂಡ ಇದನ್ನು ಅಪೂರ್ವವಾದ ರೀತಿಯಲ್ಲಿ ನಡೆಸಿ ಕೊಟ್ಟರು. 

  ಈ ಸಾರಿಯ ಗುರುಗಳ ಅಭ್ಯಾಸ ಈ ಮೊದಲೇ ತಿಳಿಸಿದಂತೆ ಖ್ಯಾತ ಕಥೆಗಾರರಾದ ಶ್ರೀಯುತ ವಸುಧೇಂದ್ರರ ನಿರ್ವಹಣೆಯಲ್ಲಿ ಮಂತ್ರಿ ಪ್ಯಾರಡೈಸ್ ನ ಗೃಹಸ್ತೋಮದ  ( ಗುರುಗಳೇ ತಿಳಿಸಿದಂತೆ) ಮುಂಚಾಚುವಿನಲ್ಲಿ ಮಂತ್ರಿ ಪರಡೈಸ್ ಮಂತ್ರಿತವಾಯ್ತು ನಮ್ಮ ಶಾನುಭಾಗರ ನೆರವಿನಿಂದ, ಸೌಂದರ್ಯಕ್ಕೆ ಲಾವಣ್ಯದ ಸ್ನೇಹ ವಾದರೆ ಅದು ಪಡೆವ ಸಂಸ್ಕಾರವೇ ಬೇರೆ.ಕೇಳುಗರನ್ನು ತಮ್ಮ ಕಂಠ ಸಿರಿಯಿಂದ ತಮ್ಮ ಸಂಗೀತದ ನಾದ ವೈಭವದಿಂದ ಮಂತ್ರ ಮುಗ್ಧರನ್ನಾಗಿಸುವ ಗಾಂಧಾರಕಲೆಯಿಂದ ಶಂಕರ ಶಾನುಭಾಗರು ಸುಮಾರು ಒಂದು ಗಂಟೆಗೂ ಮೀರಿ ಅತಿಥಿ ಅಭ್ಯಾಗತರನ್ನೆಲ್ಲ ಪುರಂದರ ರಸಾಪಾನೋನ್ಮತ್ತರಾಗಿಸಿದರು.

ಈ ಸಾರಿಯ ಗುರುಗಳ ಅಭ್ಯಾಸ ಈ ಮೊದಲೇ ತಿಳಿಸಿದಂತೆ ಖ್ಯಾತ ಕಥೆಗಾರರಾದ ಶ್ರೀಯುತ ವಸುಧೇಂದ್ರರ ನಿರ್ವಹಣೆಯಲ್ಲಿ ಮಂತ್ರಿ ಪ್ಯಾರಡೈಸ್ ನ ಗೃಹಸ್ತೋಮದ  ( ಗುರುಗಳೇ ತಿಳಿಸಿದಂತೆ) ಮುಂಚಾಚುವಿನಲ್ಲಿ ಮಂತ್ರಿ ಪರಡೈಸ್ ಮಂತ್ರಿತವಾಯ್ತು ನಮ್ಮ ಶಾನುಭಾಗರ ನೆರವಿನಿಂದ, ಸೌಂದರ್ಯಕ್ಕೆ ಲಾವಣ್ಯದ ಸ್ನೇಹ ವಾದರೆ ಅದು ಪಡೆವ ಸಂಸ್ಕಾರವೇ ಬೇರೆ.ಕೇಳುಗರನ್ನು ತಮ್ಮ ಕಂಠ ಸಿರಿಯಿಂದ ತಮ್ಮ ಸಂಗೀತದ ನಾದ ವೈಭವದಿಂದ ಮಂತ್ರ ಮುಗ್ಧರನ್ನಾಗಿಸುವ ಗಾಂಧಾರಕಲೆಯಿಂದ ಶಂಕರ ಶಾನುಭಾಗರು ಸುಮಾರು ಒಂದು ಗಂಟೆಗೂ ಮೀರಿ ಅತಿಥಿ ಅಭ್ಯಾಗತರನ್ನೆಲ್ಲ ಪುರಂದರ ರಸಾಪಾನೋನ್ಮತ್ತರಾಗಿಸಿದರು.



ಅವರ ಇಡೀತಂಡದವರು  ತಮ್ಮ ಸಹಜ ಸಂಗೀತ ಮಾಂತ್ರಿಕತೆಯಿಂದ ಪುರಂದರ ದಾಸರ ಆ ಮಹೋನ್ನತ ಪದಗಳ ಸ್ಪರ್ಶದಿಂದ ಸುಂದರ ಶೃವ್ಯಾನುಭೂತಿಯ ಕಡಲಲ್ಲಿ ಮುಳುಗೇಳಿಸಿದ್ದರು.ಪ್ರತಿ ಅಭ್ಯಾಸಿಗಳ ಮನಸ್ಸು ಆ ದಾಸರ ಹಾಡುಗಳ ದಿವ್ಯಾನುಭೂತಿಯಲ್ಲಿ ತೇಲಿಹೋಗಿತ್ತು. ಪುರಂದರ ಸಂಗೀತದ ಸ್ವಾರಸ್ಯ, ಆಳ, ಅಗಲ, ಗಾಂಭೀರ್ಯ, ಆಶಯ, ಮಹತ್ವ ವನ್ನು  ಅದ್ಭುತವಾದ ರೀತಿಯಲ್ಲಿ ಪದಗಳನ್ನು ಬಳಸುವದನ್ನು ಶಾನುಭಾಗರು ಸ್ವಲ್ಪವೂ ಅರ್ಥ ಚ್ಯುತಿಪಡೆಯದೇ ಅಭಿವ್ಯಕ್ತ ಗೊಳಿಸಿದ್ದರು.   ನಿಜದರ್ಥಲ್ಲಿ ಈ ಸಾರಿಯ ಅಭ್ಯಾಸವು ಒಂದು ಸುಂದರ ಮಧುರಾನುಭೂತಿಯಾಗಿತ್ತು. ಗುರುಗಳೂ ಸೇರಿ ಒಂದರ್ಥದಲ್ಲಿ ಅಭ್ಯಾಸಿಗಳೆಲ್ಲರೂ ದ್ರವಿಸಿದ ಹೃದಯದ ಆರ್ದ್ರಾಕ್ಷಿಗಳಾಗಿದ್ದರು.ಸ್ವತಃ ಗುರುಗಳೇ ಶಂಕರ ಶ್ಯಾನುಭಾಗರ ಜಿಹ್ವೆಯಲ್ಲಿಸರಸ್ವತಿಯೇ ನಲಿದಾಡಿದಂತೆ ಸ್ಪುಟ ಭಾವಾರ್ಥದಂತೆ ಎಲ್ಲವನ್ನೂ ಅಭ್ಯಾಸಿಗಳಲ್ಲಿ ವಿಲೀನರನ್ನಾಗಿಸಿ ಎಲ್ಲರ ವಾರಾಂತ್ಯವನ್ನು ಸಾರ್ಥಕವನ್ನಾಗಿಸಿತ್ತು .

ಪುರಂದರ ಸಂಗೀತದ ಗಾಂಭೀರ್ಯ ಆಳ, ಮಹತ್ವ, ಎಲ್ಲವನ್ನೂ ಅಳವಡಿಸಿಕೊಂಡ ಶಂಕರ ಶ್ಯಾನುಭಾಗರ ಸಂಗೀತದಲ್ಲಿ ಮಾತೂ ಧಾತೂ ಪ್ರಾಮುಖ್ಯತೆ ಪಡೆದಿದ್ದು ಮ್ಮಾತೆ ಸರಸ್ವತಿಯ ಅಮೃತ ಧಾರೆಯನ್ನೇ ಹರಿಸಿದಂತಿತ್ತು ಎಂದರು. ಗೀತೆಗೆ ಮಾತಿನ ಹಂಗಿಲ್ಲ ಆದರೆ ಮಾತಿಗೆ ಗೀತೆಯ ಹಂಗಿದೆ. ಎನ್ನುತ್ತಾ ಗುರುಗಳು ನಾಲ್ಕು ದಿನದಿಂದ ಜ್ವರ ಬಂದಿದ್ದರೂ ಶಂಕರರ ಹಾಡಿನಿಂದ ಪ್ರೇರಿತನಾಗಿ ಆಡಲು ಇಳಿದೆ ಎಂದು ಹೇಳಿ ನಕ್ಕರು .



ಹೀಗೊಂದು ಕಥೆಯಿದೆ: ಒಮ್ಮೆ ಯಮನ ಎದುರಿಗೆ ಒಬ್ಬ ಮುನಿಯನ್ನು ತಂದರಂತೆ ಯಮನ ಕಿಂಕರರು. ಆ ಮುನಿಯನ್ನು ಪದ್ದತಿಗನುಸಾರವಾಗಿ ವಿಚಾರಣಾಧೀನರಾಗಿ ಮಾಡಿ ಅವರ ತಪ್ಪಿಗೆ ತಕ್ಕ ಶಿಕ್ಷೆ ಕೊಡಲಾಯ್ತು. ಅದೂ ಅವರು ಚಿಕ್ಕವರಿರುವಾಗ ಮಾಡಿದ ಯಾವುದೋ ತಪ್ಪಿಗೆ. ಆ ಮುನಿಯು ಯಮನನ್ನೇ ಶಪಿಸಿದರಂತೆ. ಚಿಕ್ಕ ಬಾಲಕ ಏನೂ ಅರಿಯದೇ ಮಾಡಿದ ತಪ್ಪಿಗೆ ಈಗ ಶಿಕ್ಷೆ  ವಿಧಿಸುವದೆಂದರೇನು.ಈ ತಪ್ಪಿಗಾಗಿ ಯಮನಾದ ನೀನು ಭೂಮಿಗೆ ಹೋಗಿ ಜನಿಸು ಅಂತ . ಅದರಂತೆ ಯಮನೇ ಭೂಮಿಗೆ ಪುರಂದರ ದಾಸರಾಗಿ ಜನ್ಮ ತಾಳಿದರು ಅಂತ.





ಸಾವಿರ ವರುಷಗಳ ಸುಧೀರ್ಘ ಸಾಹಿತ್ಯ ಪರಂಪರೆಯಲ್ಲಿ ಗುರುಗಳ ಮನಸೂರೆ ಮಾಡಿದ ಮುಖ್ಯ ಕವಿ ಆದಿ ಕವಿ ಪಂಪ. ಅವನಿಗೆ ಹೊಯ್ ಕೈ ಯಾಗಿ ಕೆಲವೊಮ್ಮೆ ಮಿಗಿಲೆನಿಸೋ ಕುಮಾರವ್ಯಾಸ, ಮನಸ್ಸಿನ ತಳಮಳಗಳನ್ನು ಅತ್ಯದ್ಭುತವಾಗಿ ಹೊರಹೊಮ್ಮಿಸೊ ಕಲೆಗಾರ ಬಸವಣ್ಣ, ಮಾತನ್ನೆಲ್ಲಾ ಹಾಡು ಮಾಡುವ ಕಲಾವಿದ ಈ ಪುರಂದರ. ಈತನ ಪಾಡೆಲ್ಲ ಹಾಡಾಯ್ತು.ಈತ ಅರಮನೆಯ ಕವಿಯಲ್ಲ,ನೆರೆಮನೆಯ ಕವಿಯಲ್ಲ, ಪುಸ್ತಕದ ಕವಿಯಲ್ಲ, ಪಂಡಿತ ಕವಿಯೂ ಅಲ್ಲ, ಈತ ಹಾದಿ ಬೀದಿಯ ಕವಿ ಹಾದಿ ತೋರಿಸೋ ಕವಿ. ಕನಾಟಕದ ಪ್ರತಿಯೊಬ್ಬ ಮಗುವೂ ಅಕ್ಷರವನ್ನು ಕಲಿಯುವ ಮೊದಲೇ ತನ್ನ ಹೃದಯದಲ್ಲಿ ಇವರ ಹಾಡನ್ನು ತುಂಬಿಕೊಂಡಿರುತ್ತದೆ.

ಐನೂರು ವರುಷಗಳ ಹಿಂದೆ ಜನಿಸಿದರು.ಇವರ ಮೂಲ ಹೆಸರು ಶ್ರೀನಿವಾಸ ನಾಯಕ. ಆದರೆ ಇನ್ನೂ ಇದರ ಬಗ್ಗೆ ಸರಿಯಾದ ವಿವರ ಹುಟ್ಟಿದ ಊರು, ಅಥವಾ ಇನ್ನಿತರ ವಿಷಯಗಳು ಅನುಮಾನದಲ್ಲೇ ಇವೆ. ಹರಿಭಕ್ತಿ ಸಾರವನ್ನು ಕರ್ನಾಟಕದ ಉದ್ದಗಲಕ್ಕೂ ಹರಡಿದ ಮಹಾಶಯನೀತ.ನವ ಕೋಟಿ ನಾರಾಯಣನಾದ ಈತ ತನ್ನ ಧನ ಕನಕ ಆಸ್ತಿ ಯೆಲ್ಲವನ್ನೂ ತ್ಯಾಗ ಮಾಡಿ ತನ್ನ ಸಂಸಾರ ಸಮೇತ ( ಇವರಿಗೆ ನಾಲ್ಕು ಗಂಡು ಒಂದು ಹೆಣ್ಣು ಎಲ್ಲರೂ ದಾಸ ರಾಗುತ್ತಾರೆ) ಊರು ಕೇರಿ ಬಿಟ್ಟು ವಿಜಯನಗರದ  ಕಡೆ ಬರುತ್ತಾರೆ. ವಿಜಯ ನಗರ ಆಗ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಭೋಗದ ಉತ್ತುಂಗದಲ್ಲಿದ್ದ ಸಮಾಜಕ್ಕೆ ಇಂತದ್ದೊಂದು ಸುಧಾರಕ ಮಾರ್ಗದ ಅಗತ್ಯವಿತ್ತು. ಅಲ್ಲಿ ವ್ಯಾಸರಾಯ( ಮಠಾಧಿಪತಿ) ರಿಂದ ದೀಕ್ಷೆ ಪಡೆದುಕೊಳ್ಳುತ್ತಾರೆ. 

ಸಂಗೀತಕ್ಕೂ ಸಂಸ್ಕಾರ ಕೊಟ್ಟು ಪುರಾಣ ಉಪನಿಷತ್ ಸಾರವನ್ನು ಜನಸಾಮಾನ್ಯರೂ ತಿಳಿಯುವಂತೆ ಅರ್ಥವತ್ತಾಗಿ ಉಣಬಡಿಸಿದ್ದರು.  ಜಾನಪದೀಯ ಲಯದ ರಾಗಗಳನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದರು.ವೀಣೆಯ ವಿದ್ವಾಂಸರಾದ ಈತ ತನ್ನ ಜೀವಿತವನ್ನೆಲ್ಲ ಸಮಾಜದ ಒಳಿತಿಗಾಗಿಯೇ ಕಳೆದರು. ಸಂಸಾರದಲ್ಲಿದ್ದರೂ ಅಂಟಿಯೂ ಅಂಟದಂತಿರಬೇಕೆಂದು ಇವರು ಗೇರು ಬೀಜದ ರೂಪಕದ ಮೂಲಕ ತಿಳಿಸಿದ್ದರು. ಆಡು ಮಾತನ್ನು ಮೊಟ್ಟ ಮೊದಲು ಸಂಗೀತದಲ್ಲಿ ಪುರಂದರ ದಾಸರೇ ಬಳಸಿದ್ದುದು. ( ಉದಾ: ಕದವ ಮುಚ್ಚಿದಳೇಕೋ ಗಯ್ಯಾಳಿ ಮೂಳಿ, ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗ). ಮಕ್ಕಳ ಪದಗಳನ್ನೂ ಹಾಡಿನಲ್ಲಿ ತಂದರು.( ಗುಮ್ಮನ ಕರೆಯದಿರೇ, ಮುಂತಾದವುಗಳು), ಅದ್ಭುತ ರೂಪಕಗಳ ಸೃಷ್ಟಿಕಾರ ರಾತ್ರೆ ಹಗಲು ಕೊಳಗದಲ್ಲಿ ಆಯುಷ್ಯದ ಅಳತೆ,  ಸ್ಲೇಷೆಯನ್ನು ಬಳಸುವುದರಲ್ಲೂ ಎತ್ತಿದ ಕೈ ಇವರದು.ರಾಗಿಯ ಹಾಡು: ರಾಗಿಯ ತಂದೀರ್ಯಾ...ಇತ್ಯಾದಿ. ಕೀರ್ತನೆಗಳು( ಸಾವಿರಕ್ಕೂ ಮೀರಿ), ಉಗಾಭೋಗ, ಸುಳಾದಿ ಇವರ ಹರಹುಗಳು . 

೧.  ಪರಿಚಯ : ಶ್ರೀಯುತ ವಸುಧೇಂದ್ರ            http://youtu.be/S5Fd5_sozp4

ಶ್ರೀಮಾನ್ ಶಂಕರ ಶಾನುಭಾಗ್ ಪುರಂದರ ರಸಾಮೃತ: ಹಿಮ್ಮೇಳ:ತಬ್ಲಾದಲ್ಲಿ ಶ್ರೀಯುತ ಜಗದೀಶ್ ರವರು, ಹಾರ್ಮೋನಿಯಮ್ ನಲ್ಲಿ ನರಸಿಂಹ ಭಟ್ ಮತ್ತು ತಾಳದಲ್ಲಿ  ಆಶಿಸ್ ನಾಯಕ್ ಇವರ ಜತೆಗಿರುವರು.೨.   ಶರಣು ಸಿದ್ಧಿ ವಿನಾಯಕ :                     http://youtu.be/3wrEUSr3JSc;  http://youtu.be/Ws-N6C2GnSY೩.   ಶರಣೆಂಬೆ ವಾಣಿ ಪೊರೆಯೇ ಕಲ್ಯಾಣಿ :        http://youtu.be/VdfiKUTfF5g  ೪.  ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು?  http://youtu.be/HDPhzP0xlV4೫.  ಸ್ನಾನವ ಮಾಡಿರೋ ಜ್ಞಾನ ತೀರ್ಥದಲಿ        http://youtu.be/HDPhzP0xlV4       ೬.  ಹಂಗಿಸಿ ಹಂಗಿಸಿ ಎನಗೆ ಹರಿನಾಮ; ದಾಸನ ಮಾಡಿಕೋ ಎನ್ನ  http://youtu.be/8L9fEG0vC8E೭.  ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೇ ಮತ್ತು ಪಾಪ ಅನೇಕ ಕಿಯೇ ಜಗ  http://youtu.be/XEqwQCnNOoo೮.  ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ/ ಮಧುಕರ ವೃತ್ತಿ ಎನ್ನದು  http://youtu.be/n3D3ATZsQfk,  http://youtu.be/sjoTHFxsSEg,೯.   ಭಾಗ್ಯದ ಲಕ್ಷ್ಮಿ ಬಾರಮ್ಮ    http://youtu.be/3khgmzsn-7Ehttp://youtu.be/tJuPJG5i5Jk೧೧. ನೀನೇ ದಯಾಳು ನಿರ್ಮಲ ಚಿತ್ತ ಗೋವಿಂದ   http://youtu.be/UpxA8v8aXkI,  http://youtu.be/uEx0hDBVT1o

ಸನ್ಮಾನ್ಯ ಡಾ ಎಚ್ಚೆಸ್ವೀಯವರು:೧೧.   ಹಾದಿಯ ಕವಿ  ಹಾದಿ ತೋರಿಸಿದ ಕವಿ http://youtu.be/Y7VCVl2XFXI೧೨. ದಾಸರ ಕೀರ್ತನೆಗಳ ಓಲೆ ಭಾಗ್ಯ ಕಿವಿಯಲ್ಲಿ  http://youtu.be/1ZMYQZ-FycA೧೩.  ಹೆಂಡತಿ ಸಂತತಿ ಸಾವಿರವಾಗಲಿ:  http://youtu.be/hNv6bcXDd9U೧೪. ಈಸಬೇಕು ಇದ್ದು ಜೈಸಬೇಕುhttp://youtu.be/zV23JcpRJ1k೧೫    ಮಡಿ ಮಡಿ ಮಡಿಯೆಂದು:http://youtu.be/k1KieW-uEYU೧೬   ಅದ್ಭುತವಾದ ರೂಪಕಗಳನ್ನು ಬಳಸಿದ ಕವಿ :  http://youtu.be/OBl7gVgRE68೧೭.  ರೂಪಕದ ಮೂಲಕ ಕವಿ  http://youtu.be/i1LM7VEYbAI     

 
 

Comments