ಸಾರ್, ಸಾಱ್(ಱು)

ಸಾರ್, ಸಾಱ್(ಱು)

Comments

ಬರಹ

ಸಾರ್ ಮತ್ತು ಸಾಱ್ ಎರಡೂ ಕ್ರಿಯಾಪದಗಳು ಕನ್ನಡದಲ್ಲಿ ವಿಭಿನ್ನ ಅರ್ಥಗಳಲ್ಲಿ ಬೞಸುವ ಶಬ್ದಗಳು. ಇವುಗ ಅರ್ಥವನ್ನು ನೋಡೋಣ.
ಸಾರ್= ಹತ್ತಿರ ನಡೆ, ಹತ್ತಿರ ಬರು/ಹೋಗು. ನಲ್ಲೆಯು ನಲ್ಲನ ಬೞಿ ಸಾರಿದಳು.
ಇದಱ ಪ್ರಯೋಗ ಈಗ ದಿನನಿತ್ಯದ ಬೞಕೆಯಲ್ಲಿ ನಿಂತು ಹೋಗಿದೆ. ಇದಱ ಭಾವನಾಮವಾದ ಸಾರಿಗೆ ಪದವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೞಸುತ್ತಿದೆ. ಸಾರಿಗೆ ಅಂದರೆ ಹೋಗಿ ಬರಲು ಅಥವಾ ಚಲಿಸಲು ಇರುವ ಸಾಧನ ಎಂಬರ್ಥದಲ್ಲಿ ಬೞಕೆಯಲ್ಲಿದೆ.
ಭೂತಕೃದ್ವಾಚಿ: ಸಾರ್ದು/ಸಾರಿ
ವರ್ತಮಾನ/ಭವಿಷ್ಯತ್ಕೃದ್ವಾಚಿ: ಸಾರ್ವ/ಸಾರುವ

ಸಾಱ್/ಸಾಱು=ಕೂಗಿ ಹೇೞು, ದೊಡ್ದದಾಗಿ ಹೇೞು, ಡಂಗುರ ಹೊಡೆದು ಹೇೞು

ಉದಾಹರಣೆ: ನಗರ ಪಾಲಿಕೆಯವರು ಇಂದು ನೀರಿನ ಪೂರೈಕೆ ಇರುವುದಿಲ್ಲ ಎಂದು ಬೀದಿಯಲ್ಲಿ ಸಾಱುತ್ತಾ(ಕೂಗಿ ಹೇೞುತ್ತಾ) ಸಾರಿದರು(ನಡೆದರು).
ಭೂತಕೃದ್ವಾಚಿ: ಸಾಱಿ
ವರ್ತಮಾನ/ಭವಿಷ್ಯತ್ಕದ್ವಾಚಿ: ಸಾಱುವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet