ಸಾಲುಗಳು- ೩

ಸಾಲುಗಳು- ೩

ಕವನ

ಅಕ್ಷರಗಳಿಗೆ
ನಿಲುಕದ್ದು
ನಿನ್ನ
ನೆನಪು,
ಇಲ್ಲಿರುವುದು
ಬರಿ
ಛಾಯೆ:
++++++++++++++++++
ಅಲ್ಲಿ- ಇಲ್ಲಿಂದ
ಹೆಕ್ಕಿ
ತೆಗೆದ
ಸಾಲುಗಳನ್ನ
ಸುಂದರವಾಗಿ
ಪೋಣಿಸಲು
ಹೋಗಿ
ಪ್ರತಿ ಬಾರಿ
ಸೋಲುತ್ತೇನೆ...........
+++++++++++++++
ನನ್ನೆದುರಿಗೆ
ಇರುವುದು
ನೀನೋ
ಇಲ್ಲಾ
ಭ್ರಮೆಯೊ
ಪರೀಕ್ಷಿಸುವ
ದಾವಂತವಿಲ್ಲ,
ಅದನ್ನೇ
ಒಂದು
ಕ್ಷಣ
ಸುಖಿಸುತ್ತೇನೆ...........
+++++++++++++++++++++
 

Comments